Take a fresh look at your lifestyle.

ಹಾರೋಹಳ್ಳಿಯ ಬ್ಯಾಟರಿ ಫ್ಯಾಕ್ಟರಿಯಲ್ಲಿ ಸ್ಫೋಟ

ಘಟನೆ ನಡೆದ ವೇಳೆ 80 ಕಾರ್ಮಿಕರು ಕೆಲಸ ಮಾಡ್ತಿದ್ದರು. ಅವಘಡ ಸಂಭವಿಸಿದ ಕೂಡಲೇ ಕಾರ್ಮಿಕರು ಹೊರಬಂದಿದ್ದಾರೆ

0
post ad

ರಾಮನಗರ: ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಕಾರ್ಯಾನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಶಕ್ತಿ ಅಕ್ಯುವಲೇಟರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಾರ್ಖಾನೆಯಲ್ಲಿ ದೊಡ್ಡ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ.
ಕಾರ್ಖಾನೆಯಲ್ಲಿ ಯುಪಿಎಸ್ ಬ್ಯಾಟರಿಗಳನ್ನ ತಯಾರಿಸಲಾಗುತ್ತಿತ್ತು.

ಘಟಕದಲ್ಲಿ ಬ್ಯಾಟರಿಗಳು ಸ್ಫೋಟಗೊಂಡಿದ್ದರಿಂದ ಹೆಚ್ಚು ಅನಾಹುತ ಸಂಭವಿಸಿದೆ. ಅಕ್ಕ ಪಕ್ಕದ ಕಾರ್ಖಾನೆಗಳಿಗೂ ಬೆಂಕಿ ವ್ಯಾಪಿಸುತ್ತಿತ್ತು. ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರ್ಖಾನೆ ಸುತ್ತ 500 ಮೀಟರ್‌ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿತ್ತು. ಪಕ್ಕದಲ್ಲಿದ್ದ ಮೆಡಿಸಿನ್‌ ತಯಾರಿಕಾ ಕಾರ್ಖಾನೆಗೂ ಬೆಂಕಿ ವ್ಯಾಪಿಸಿತ್ತು. ಆದರೆ ಅಗ್ನಿ ಶಾಮಕ ದಳ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.
ಕಾರ್ಮಿಕರು ಕಾರ್ಖಾನೆಯಿಂದ ತಕ್ಷಣವೇ ಹೊರ ಬಂದಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ. ಘಟನೆ
ನಡೆದ ವೇಳೆ 80 ಕಾರ್ಮಿಕರು ಕೆಲಸ ಮಾಡ್ತಿದ್ದರು. ಅವಘಡ ಸಂಭವಿಸಿದ ಕೂಡಲೇ ಕಾರ್ಮಿಕರು ಹೊರಬಂದಿದ್ದಾರೆ.