Take a fresh look at your lifestyle.

ಮದ್ಯ ಕಾರ್ಖಾನೆಯಲ್ಲಿ ಸ್ಫೋಟ, ಕಾರ್ಮಿಕ ಸಾವು

ಮದ್ಯ ತುಂಬಿದ 22 ಕ್ಕೂ ಹೆಚ್ಚು ಟ್ಯಾಂಕರ್ ಗಳಿಗೆ ಬೆಂಕಿಗೆ ಬಿದ್ದಿದ್ದು, 25 ಕ್ಕೂ ಹೆಚ್ಚು ಫೈರ್ ಇಂಜಿನ್ ಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

0
post ad

ದಾವಣಗೆರೆ: ದಾವಣಗೆರೆ ಸಮೀಪದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ದುಗ್ಗವತಿ ಗ್ರಾಮದಲ್ಲಿರುವ ಮದ್ಯ ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾನೆ.

ಜಾನ್ ಡಿಸ್ಟಿಲರ್ಸ್ ಗೆ ಸೇರಿದ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದ್ದು ಭಾರೀ ದೊಡ್ಡ ಪ್ರಮಾಣದಲ್ಲಿ ಬೆಂಕಿ ಉರಿಯುತ್ತಿದೆ. ಮದ್ಯ ತುಂಬಿದ 22 ಕ್ಕೂ ಹೆಚ್ಚು ಟ್ಯಾಂಕರ್ ಗಳಿಗೆ ಬೆಂಕಿಗೆ ಬಿದ್ದಿದ್ದು, 25 ಕ್ಕೂ ಹೆಚ್ಚು ಫೈರ್ ಇಂಜಿನ್ ಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಒಡೆತನ ಕಬ್ಬಿನ ಕಾರ್ಖಾನೆಯಲ್ಲಿ ಜಾನ್ ಡಿಸ್ಟಿಲರ್ಸ್ ಕಂಪನಿ ಗುತ್ತಿಗೆ ಆಧಾರದ ಮೇಲೆ ಮದ್ಯ ತಯಾರಿಕೆ ನಡೆಸುತ್ತಿತ್ತು. ಆದರೆ, ಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮದ್ಯ ತುಂಬಿದ ಟ್ಯಾಂಕರ್ ಗಳಿಗೆ ಬೆಂಕಿ ಬಿದ್ದಿದೆ.