Take a fresh look at your lifestyle.

ಒಡಿಶಾದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್

ಮಹಿಳೆಯರ ಮೇಲಿನ ವಿವಿಧ ರೀತಿಯ ತಾರತಮ್ಯ ಮತ್ತು ದೌರ್ಜನ್ಯಗಳನ್ನು ತಡೆಯುವ ಕ್ರಮಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಇಲಾಖೆಯು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸಂವಹನ ಪ್ಯಾಕೇಜ್‌ ಅನ್ನು ಸಹ ಬಿಡುಗಡೆ ಮಾಡಿದೆ

0
post ad

ಭುವನೇಶ್ವರ : ಒಡಿಶಾ ದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗಂಜಾಂ ಜಿಲ್ಲೆಯ ಆಲ್‌ ಒಡಿಶಾ ಅಂಗನವಾಡಿ ಕಾರ್ಮಿಕರು ಮತ್ತು ಸಹಾಯಕರ ಸಂಘ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ತುಕುನಿ ಸಾಹು ಈ ಬಗೆಗೆ ಹೇಳಿಕೆ ನೀಡಿದ್ದಾರೆ.
ಮಕ್ಕಳ ತೂಕವನ್ನು ಪರೀಕ್ಷಿಸಲು ಪ್ರತಿ ಅಂಗನವಾಡಿ ಕೇಂದ್ರಕ್ಕೆ ತೂಕದ ಯಂತ್ರವನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಮಹಿಳೆಯರ ಮೇಲಿನ ವಿವಿಧ ರೀತಿಯ ತಾರತಮ್ಯ ಮತ್ತು ದೌರ್ಜನ್ಯಗಳನ್ನು ತಡೆಯುವ ಕ್ರಮಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಇಲಾಖೆಯು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸಂವಹನ ಪ್ಯಾಕೇಜ್‌ ಅನ್ನು ಸಹ
ಬಿಡುಗಡೆ ಮಾಡಿತು.

ಶಾಸನಗಳ ಅನುಷ್ಠಾನ ಸೇರಿದಂತೆ ಮಹಿಳೆಯರು ಮತ್ತು ಹುಡುಗಿಯರ ಅಗತ್ಯತೆಗಳನ್ನು ಪೂರೈಸುವ ಸಾಂಸ್ಥಿಕ ಕಾರ್ಯವಿಧಾನಗಳನ್ನು ಬಲಪಡಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮಹಿಳಾ ಹಕ್ಕುಗಳು ಮತ್ತು ಅರ್ಹತೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಮುದಾಯದ
ಮನಸ್ಥಿತಿಯನ್ನು ಗೌರವದಿಂದ ಬದಲಾಯಿಸಲು ಸಂವಹನದಲ್ಲಿ 360 ಡಿಗ್ರಿ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.