Take a fresh look at your lifestyle.

50 ಲಕ್ಷದವರೆಗೂ ಸರ್ಕಾರಿ ನೌಕರರಿಗೆ ಉಚಿತ ಚಿಕಿತ್ಸೆ

ಮುಂದಿನ ವರ್ಷದ ಏಪ್ರಿಲ್‌ನಿಂದ ಈ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ. ಮಹಿಳಾ ನೌಕರರ ತಂದೆ ತಾಯಿಗೂ ಈ ಯೋಜನೆ ಅನ್ವಯವಾಗಲಿದೆ.

0
post ad

ಕಲಬುರಗಿ : ಆರೋಗ್ಯಸಿರಿ ಯೋಜನೆಯಡಿ ರಾಜ್ಯದ ಸರ್ಕಾರಿ ನೌಕರರು ಮತ್ತವರ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿಯವರೆಗಿನ ಉಚಿತ ಚಿಕಿತ್ಸೆ ಸೌಲಭ್ಯದ  ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ ಮಹಿಳಾ ನೌಕರರ ತಂದೆ ತಾಯಿಗೂ ಈ ಯೋಜನೆ ಅನ್ವಯವಾಗಲಿದೆ. ಸರ್ಕಾರಿ ನೌಕರರು ಮತ್ತವರ ಕುಟುಂಬ ಸದಸ್ಯರಿಗೆ  50 ಲಕ್ಷದವರೆಗೆ ಉಚಿತ ಚಿಕಿತ್ಸೆ ಕೊಡಿಸುವ ಉದ್ದೇಶವನ್ನು ಸರ್ಕಾರಿ ನೌಕರರ ಸಂಘ ಹೊಂದಿದ್ದು, ಯೋಜನೆಗೆ ತಗಲುವ ವೆಚ್ಚ ಭರಿಸಲು ಹಣಕಾಸು ಇಲಾಖೆ ಒಪ್ಪಿದ್ದು, ಅಗತ್ಯಬಿದ್ದರೆ ಸಂಘದಿಂದಲೂ ವಂತಿಗೆ ನೀಡಲಾಗುವುದು ಎಂದರು. ಮುಂದಿನ ವರ್ಷದ ಏಪ್ರಿಲ್‌ನಿಂದ ಈ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ.
ಆಸ್ಪತ್ರೆಗಳಲ್ಲಿ ‘ಹೊರರೋಗಿ, ಒಳರೋಗಿಗಳಿಗೂ ಉಚಿತ ಚಿಕಿತ್ಸೆ ಸಿಗಲಿದ್ದು, ರಾಜ್ಯದ 20 ಲಕ್ಷ ಜನರಿಗೆ ಈ ಸೌಲಭ್ಯ ದೊರೆಯಲಿದೆ. ವಾರ್ಷಿಕ 1,200 ಕೋಟಿ ವೆಚ್ಚದ ಈ ಯೋಜನೆಗೆ ಸರ್ಕಾರ  800 ಕೋಟಿ, ನೌಕರರು 400 ಕೋಟಿ ಭರಿಸಲಿದ್ದಾರೆ ಎಂದು ಹೇಳಿದರು.
ಕಲಬುರಗಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿ.ಎಸ್. ಷಡಕ್ಷರಿಯವರು ಈ ಮಾಹಿತಿ ನೀಡಿದರು .