Take a fresh look at your lifestyle.

ಕಡಿಮೆ ಸಂಬಳ : ಗಾರ್ಮೆಂಟ್ಸ್‌ ನೌಕರರ ಪ್ರತಿಭಟನೆ

ನೌಕರರಿಗೆ 10 ಸಾವಿರ ರೂ. ವೇತನವೆಂದು ಭರವಸೆ ನೀಡಿ ಈಗ 4 ಸಾವಿರ ರೂ. ಮಾತ್ರ ಸಂಬಳವನ್ನು ಕಂಪನಿ ನೀಡುತ್ತಿದೆ

0
post ad

ಬೆಂಗಳೂರು : ಕಡಿಮೆ ಸಂಬಳ ಪಾವತಿಸಿದ ಕಂಪೆನಿ
ವಿರುದ್ಧ ಗಾರ್ಮೆಂಟ್ಸ್‌ ನೌಕರರು ಪ್ರತಿಭಟನೆ ನಡೆಸಿದರು. ಆಡಳಿತ ಮಂಡಳಿ ಈ ಹಿಂದೆ ‌ನೀಡಿದ್ದ ಭರವಸೆಯಂತೆ ವೇತನವನ್ನು ನೀಡುವಂತೆ ಕಾರ್ಮಿಕರು ಒತ್ತಾಯಿಸಿದರು.
ಪೀಣ್ಯದ ರಾಜಗೋಪಾಲ ನಗರದಲ್ಲಿರುವ ಶರ್ಟ್‌ ಗಾರ್ಮೆಂಟ್ಸ್‌ ಕಂಪನಿಯು ತಮ್ಮ ನೌಕರರಿಗೆ 10 ಸಾವಿರ ರೂ. ವೇತನವೆಂದು ಭರವಸೆ ನೀಡಿದ್ದು, ಈಗ 4 ಸಾವಿರ ರೂ. ಮಾತ್ರ ಸಂಬಳವನ್ನು ನೀಡುತ್ತಿದೆ ಎಂದು ಕಂಪನಿ ವಿರುದ್ಧ ನೌಕರರು ಆರೋಪಿಸಿದ್ದಾರೆ.
ಕೊರೋನ ಸಮಯದಲ್ಲಿ ಮಾಸ್ಕ್‌ ಪಿಪಿಇ ಕಿಟ್‌ ತಯಾರಿಕೆಗೆ ಕಾರ್ಮಿಕರನ್ನು ಬಳಸಿಕೊಂಡಿದ್ದು ಬಳಿಕ ಅವುಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವದರಿಂದ ನಮ್ಮನ್ನು ಬೀದಿಗೆ ತಳಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.
ರಾಜಗೋಪಾಲ ನಗರದಲ್ಲಿರುವ ಶರ್ಟ್‌ ಗಾರ್ಮೆಂಟ್ಸ್ ನಲ್ಲಿ ಸುಮಾರು 400ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದು, ಕಳೆದ ಎರಡು ತಿಂಗಳಿನಿಂದ ಕಡಿಮೆ ವೇತನ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೊರೋನ ಸಂಕಷ್ಟ ಸಂದರ್ಭದಲ್ಲಿ ಜೀವನ ನಡೆಸಲು
ಕಷ್ಟವಾಗಿದೆ. ಇವರು ಕೊಡುತ್ತಿರುವ ನಾಲ್ಕು ಸಾವಿರದಲ್ಲಿ ಜೀವನ ನಡೆಸುವುದು ಹೇಗೆ ಎಂದು ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ