Take a fresh look at your lifestyle.

ಕೆಜಿಎಫ್ ಬಿಇಎಂಎಲ್ ನಲ್ಲಿ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಬಿಇಎಂಎಲ್ ನ ಎಲ್ಲಾ ಘಟಕಗಳಲ್ಲೂ ಸರಣಿ ಧರಣಿಯನ್ನು ಹಮ್ಮಿಕೊಂಡಿದ್ದು, ಒಂದೊಂದು ಘಟಕದಲ್ಲೂ ಸರಣಿಯಾಗಿ ದ್ವಾರ ಸಭೆಗಳು ಬೆಳಗ್ಗೆ 7 ರಿಂದ 8 ಗಂಟೆಯವರೆಗೂ ನಡೆಯುತ್ತವೆ

0
post ad

ಕೆ.ಜಿ.ಎಫ್ : ಕೇಂದ್ರ ಸರ್ಕಾರ ಬಿಇಎಂಎಲ್ ‌ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ತನ್ನ ಆರಂಭಿಕ ಪ್ರಕ್ರಿಯೆಯನ್ನು ಪ್ರಾರಂಭಿಸಿರುವ ಕ್ರಮವನ್ನು ವಿರೋಧಿಸಿ ಕೆಜಿಎಫ್ ಘಟಕದ ಸಂಕೀರ್ಣದಲ್ಲಿ ಕಾರ್ಮಿಕರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.
ಬಿಇಎಂಎಲ್ ಕಾರ್ಖಾನೆ ಎದುರಿನ ಮುಖ್ಯದ್ವಾರದ ಬಳಿ ದ್ವಾರ ಸಭೆಯನ್ನು ಏರ್ಪಡಿಸಲಾಗಿತ್ತು. ಈ ದ್ವಾರ ಸಭೆಯು ಜನರಲ್ ಬಾಡಿ ಮೀಟಿಂಗ್ ಹೆಸರಿನಲ್ಲಿ ಬೆಳಗ್ಗೆ 7 ರಿಂದ 8 ಗಂಟೆಯವರೆಗೂ ನಡೆಯಿತು.

ಸಂಸ್ಥೆಯ ಖಾಸಗೀಕರಣವನ್ನು ವಿರೋಧಿಸಲೆಂದೇ ವೇದಿಕೆಯನ್ನು ನಿರ್ಮಿಸಿಕೊಂಡಿರುವ ಕಾರ್ಮಿಕರ ಸಂಘವು ಪ್ರತಿನಿತ್ಯ ದ್ವಾರ ಸಭೆಯನ್ನು ಕರೆಯಲು ಯೋಜನೆ ರೂಪಿಸುತ್ತಿದೆ.
ಬಿಇಎಂಎಲ್ ನೌಕರರ ಸಂಘದ ಕೆಜಿಎಫ್ ಘಟಕದ ಅಧ್ಯಕ್ಷರಾದ ಆಂಜನೇಯ ರೆಡ್ಡಿ, ಪ್ರದಾನ ಕಾರ್ಯದರ್ಶಿಗಳಾದ ಗಣೇಶ್ ಕುಮಾರ್, ಎ. ಆರ್. ಬಾಬು ಮತ್ತು ಪದಾಧಿಕಾರಿಗಳು ದ್ವಾರ ಸಭೆಯಲ್ಲಿ ಪಾಲ್ಗೊಂಡಿದ್ದರು.
ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿ ಕಾರ್ಮಿಕರು ಬೆಮೆಲ್ ಉಳಿಸಿ, ದೇಶ ರಕ್ಷಿಸಿ ಎಂಬ ಘೋಷಣೆಗಳನ್ನು ಕೂಗಿದರು.
ಕೇಂದ್ರ ಸರ್ಕಾರವು ಬೃಹತ್ ರಕ್ಷಣಾ ವಲಯದ ಉದ್ಯಮವಾದ ಬೆಮೆಲ್ ನ ತನ್ನ ಶೇಕಡ 54.03 ಷೇರಿನಲ್ಲಿ ಶೇಕಡ 26 ರಷ್ಟು ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಬಿಡ್ ಅನ್ನು ಕರೆದಿದ್ದು ಈಗಾಗಲೇ ಖಾಸಗೀಕರಣದ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಸಂಸ್ಥೆಯ ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರುವುದರಿಂದ ಹಾಗೂ ಈ ದೇಶದ ಸಂಪತ್ತನ್ನು ಬಹಳ ಕಡಿಮೆ ಮೊತ್ತಕ್ಕೆ ಖಾಸಗಿಯವರ ಪಾಲಾಗುವುದನ್ನು ಸಂಸ್ಥೆಯ ಒಂಬತ್ತು ಘಟಕಗಳ ಉದ್ಯೋಗಿಗಳು ಮತ್ತು ಕಾರ್ಮಿಕ ಸಂಘಟನೆಗಳು ವಿರೋಧಿಸಿ ಹೋರಾಟದ ಹಾದಿ ತುಳಿದಿದ್ದಾರೆ.