Take a fresh look at your lifestyle.

ಕ್ವಾರಂಟೈನ್‌ನಲ್ಲಿದ್ದ ನೌಕರರಿಗೆ ರಜೆ ಪರಿಗಣಿಸಲು ಸರ್ಕಾರದ ಆದೇಶ

ಇಎಸ್‌ಐ ವ್ಯಾಪ್ತಿಗೆ ಒಳಪಡದ ಕೊರೋನಾ ರೋಗದಿಂದ ಬಾಧಿತರಾದ ನೌಕರರ ಸಾಮಾಜಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸ್ವಇಚ್ಛೆಯಿಂದ ಕ್ವಾರಂಟೈನ್‌ ಅವಧಿಗೆ ಅವರ ಹಕ್ಕಿನಲ್ಲಿ ಲಭ್ಯವಿರುವ ರಜೆಯನ್ನು ಮಂಜೂರು ಮಾಡಬೇಕು

0
post ad

ಬೆಂಗಳೂರು : ಕೊರೊನಾ ಸೋಂಕಿನಿಂದ ಬಾಧಿತರಾದ ಸರ್ಕಾರಿ ಹಾಗೂ ಖಾಸಗಿ ನೌಕರರಿಗೆ ಕ್ವಾರಂಟೈನ್ ರಜೆ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸೋಂಕಿತ ನೌಕರರು ಕ್ವಾರಂಟೈನ್‌ನಲ್ಲಿ ಇರುವ ಅವಧಿಯನ್ನು ಗೈರು ಹಾಜರಿ ಎಂದು ಪರಿಗಣಿಸಬಾರದು. ಅವರ ಹಕ್ಕಿನಲ್ಲಿರುವ ರಜೆ ಉಪಯೋಗಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.
ಕೊರೋನಾ ವೈರಸ್‌ನಿಂದ ಬಾಧಿತರಾಗುವ ವ್ಯಕ್ತಿಗಳು ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಯಾವುದೇ ಸಂಸ್ಥೆಯ ಕಾರ್ಮಿಕರು ಅವರ ಹಕ್ಕಿನಲ್ಲಿರುವ ರಜೆಗಳನ್ನು ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಇಎಸ್‌ಐ ವ್ಯಾಪ್ತಿಗೆ ಒಳಪಡದ ಕೊರೋನಾ ರೋಗದಿಂದ ಬಾಧಿತರಾದ ನೌಕರರ ಸಾಮಾಜಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸ್ವಇಚ್ಛೆಯಿಂದ ಕ್ವಾರಂಟೈನ್‌ ಅವಧಿಗೆ ಅವರ ಹಕ್ಕಿನಲ್ಲಿ ಲಭ್ಯವಿರುವ ರಜೆಯನ್ನು ಮಂಜೂರು ಮಾಡಬೇಕು ಎಂದು ಆದೇಶಿಸಿದೆ.

ಕೊರೋನಾ ಬಾಧಿಕ ನೌಕರರು ಇಲ್ಲವೇ ಕಾರ್ಮಿಕರು ಅವರ ಖಾತೆಯಲ್ಲಿ ರಜೆ ಇಲ್ಲದಿದ್ದಲ್ಲಿ, ಇತರ ಕಾರ್ಮಿಕರ ರಜೆಯನ್ನು ವರ್ಗಾಯಿಸಿಕೊಂಡು ನಿಯಮಾನುಸಾರ ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಕಾರ್ಮಿಕರ ಹಕ್ಕಿನಲ್ಲಿ ರಜೆಯು ಇಲ್ಲದಿದ್ದ ಪಕ್ಷದಲ್ಲಿ ಅಥವಾ ರಜೆಯನ್ನು ಈಗಾಗಲೇ ಸಂಪೂರ್ಣವಾಗಿ ಬಳಸಿಕೊಂಡಿದ್ದಲ್ಲಿ ಮುಂದಿನ ದಿನಗಳಲ್ಲಿ ಅವರು ಪಡೆಯಬಹುದಾದ ರಜೆಯನ್ನು ಮುಂಗಡವಾಗಿ ಉಪಯೋಗಿಸಿಕೊಳ್ಳಲು ಅವಕಾಶ ನೀಡಬೇಕು. ಮಾಲೀಕರು ಸ್ವ ಇಚ್ಛೆಯಿಂದ ರಜೆ ಮಂಜೂರು ಮಾಡಲು ಅವಕಾಶವಾಗದಿದ್ದಲ್ಲಿ ಕಾರ್ಮಿಕರ ಹಕ್ಕಿನ ರಜೆ ಇಲ್ಲದಿದ್ದಲ್ಲಿ ಸದರಿ ಅವಧಿಗೆ ವಿಶೇಷ ರಜೆಯನ್ನು ನೀಡುವ ಕುರಿತು ಮಾಲೀಕರು ಮತ್ತು ಕಾರ್ಮಿಕರು ಉಭಯ ಸಮಾಲೋಚನೆ ನಡೆಸಿ ಬಗೆಹರಿಸಿಕೊಳ್ಳುವಂತೆ ಸರ್ಕಾರ ಹೊರಡಿಸಿರುವ ರಾಜ್ಯಪತ್ರದಲ್ಲಿ ಸ್ಪಷ್ಟಪಡಿಸಿದೆ.