Take a fresh look at your lifestyle.

8 ಗಂಟೆಗಳ ಕೆಲಸದ ಅವಧಿ ಬಗೆಗೆ ಶೀಘ್ರದಲ್ಲಿ ಸ್ಪಷ್ಟನೆ

ವಿಸ್ಟ್ರಾನ್ ಕಂಪನಿಯ ಸಂಘರ್ಷದ ನಂತರ ಎತ್ತೆಚ್ಚುಕೊಂಡಿರುವ ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆಗಳಲ್ಲಿರುವ ವೇತನ ವಿಳಂಬ, ಹೆಚ್ಚವರಿ ಕೆಲಸಗಳ ಬಗೆಗೆ ಸ್ಪಷ್ಟತೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ

0
post ad

ನವ ದೆಹಲಿ: ದಿನದ ಕೆಲಸದ ಅವಧಿ ಕಡಿತವನ್ನು ಸರ್ಕಾರ ಶೀಘ್ರದಲ್ಲೇ ನಿಗದಿಪಡಿಸಲಿದ್ದು, ಇದನ್ನು ಎಂಟು ಗಂಟೆಗೆ ಸೀಮಿತಗೊಳಿಸಿ, ನಂತರದ ಅವಧಿಯನ್ನು ಹೆಚ್ಚುವರಿ ಅವಧಿ ಎಂದು ಪರಿಗಣಿಸುವ ಸಾಧ್ಯತೆ ಇದೆ.
ಸರ್ಕಾರ ಜಾರಿಗೆ ತಂದಿರುವ ನೂತನ ಕಾರ್ಮಿಕ ಸಂಹಿತೆಗಳು 12 ಗಂಟೆಗಳ ಕೆಲಸದ ಪಾಳಿಗೆ ಅವಕಾಶ ನೀಡುತ್ತದೆ ಎಂಬ ತಪ್ಪು ಕಲ್ಪನೆಯನ್ನು ಸರಿದೂಗಿಸಲು ಶೀಘ್ರದಲ್ಲಿ ಈ ಬಗೆಗೆ ಸ್ಪಷ್ಟ ನಿಲುವು ಹೊರಬೀಳುತ್ತದೆ. ಎಂಟು ಗಂಟೆಗಳ ಪಾಳಿಯ ನಂತರದ ಕೆಲಸವನ್ನು ಹೆಚ್ಚುವರಿ ಕೆಲಸ ಎಂದು ನಿರ್ಧರಿಸುವ ಸಾಧ್ಯತೆ ಇದೆ. ಓವರ್ ಟೈಮ್ ವೇತನ ದರವು ಸಾಮಾನ್ಯ ದೈನಂದಿನ ವೇತನಕ್ಕಿಂತ ಎರಡು ಪಟ್ಟು ಹೆಚ್ಚು ಇರುತ್ತದೆ ಎನ್ನಲಾಗುತ್ತಿದೆ.
ವಿಸ್ಟ್ರಾನ್ ಕಾರ್ಮಿಕರ ಸಂಘರ್ಷದ ಹಿನ್ನಲೆಯಲ್ಲಿ ಏಪ್ರಿಲ್ 1ರಿಂದ ಜಾರಿಗೆ ಬರುವ ನೂತನ ಕಾರ್ಮಿಕ ಸಂಹಿತೆಗಳ ಅಸ್ಪಷ್ಟತೆಯನ್ನು ತಪ್ಪಿಸಲು ಕೆಲಸದ ಸಮಯವನ್ನು ಸ್ಪಷ್ಟವಾಗಿ ವಿವರಿಸಲು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ಕಾರ್ಮಿಕರಿಗೆ ವೇತನ ವಿಳಂಬ ಮತ್ತು ಹೆಚ್ಚುವರಿ ಕೆಲಸದ ಪಾವತಿ ವಿಳಂಬವೇ ಕೋಲಾರ ವಿಸ್ಟ್ರಾನ್ ಘಟಕದಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣ ಎಂದು ಸಾಬೀತಾಗಿದ ಹಿನ್ನಲೆಯಲ್ಲಿ‌ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ಕಾರ್ಮಿಕ ಸಚಿವಾಲಯವು‌ ಔದ್ಯೋಗಿಕ ಸುರಕ್ಷತೆ, ಆರೋಗ್ಯ, ಕೆಲಸದ ಪರಿಸ್ಥಿತಿಗಳ ಸಂಹಿತೆ 2020 ಗಾಗಿ ಹೊರಡಿಸಿದ್ದ ಕರಡು ನಿಯಮಗಳಲ್ಲಿ ಎಂಟು ಗಂಟೆಗಳ ಕೆಲಸದ ದಿನವನ್ನು ಪ್ರಸ್ತಾಪಿಸಲಾಗಿದೆ. ಜೊತೆ 12 ಗಂಟೆಗಳ ದುಡಿಮೆಗೆ ಅವಕಾಶವನ್ನು ಕಲ್ಪಿಸಲಾಗಿತ್ತು.
ಆದಾಗ್ಯೂ, ನಿಯಮದ ಪ್ರಕಾರ ಒಂದು ವಾರದಲ್ಲಿ 48 ಗಂಟೆಗಳಿಗೆ ಮೀರುವಂತಿಲ್ಲ ಎಂದು ವಿವರಿಸಲಾಗಿದ್ದು, ವಾರಕ್ಕೆ ಅನುಗುಣವಾಗಿ ವಾರದ ಶಿಪ್ಟ್ ಗಳು ಮಾರ್ಪಡಿಸಬಹುದಾಗಿದೆ.
ಇದಲ್ಲದೆ, ಶಿಫ್ಟ್ ಬದಲಾವಣೆ ಮತ್ತು ವಿರಾಮಗಳಿಗೆ ಅನುಕೂಲ ಮಾಡಿಕೊಡಲು, ಪ್ರಸಕ್ತ ಒಂಬತ್ತು ಗಂಟೆಗಳ ಕೆಲಸದ ಅಭ್ಯಾಸ ಅಥವಾ ಹತ್ತೂವರೆ ಗಂಟೆಗಳ ಕೆಲಸದ ಅವಧಿಯನ್ನು 12 ಗಂಟೆಗಳ ಕಾಲ ವಿಸ್ತರಿಸುವುದಕ್ಕೆ ಈ ಸಂಹಿತೆ ಅವಕಾಶ ನೀಡಿತ್ತು. ಇದರಿಂದಾಗಿ ಸಾಮಾನ್ಯ ಕೆಲಸದ ದಿನವು 12 ಗಂಟೆಗಳ ವರೆಗೆ ವಿಸ್ತರಿಸಬಹುದು, ಇದು ವಾರದ 48 ಗಂಟೆಗಳನ್ನು ಮೀರಬಾರದು ಎಂದು ತಿಳಿಸಲಾಗಿತ್ತು.

ವಾರದಲ್ಲಿ ಕೆಲಸದ ಅವಧಿ 48 ಗಂಟೆಗೆ ಏರಿಕೆ ಮಾಡಿರುವ ಹಿನ್ನಲೆಯಲ್ಲಿ ವಾರದ ನಾಲ್ಕು ದಿನ ಕೆಲಸ ಮಾಡಲು ಉದ್ಯೋಗಿಗಳಿಗೆ ಅವಕಾಶ ನೀಡಿ ವಾರಾಂತ್ಯವನ್ನು ಮೂರು ದಿನಗಳಿಗೆ ವಿಸ್ತರಿಸಬಹುದು ಎಂಬ ಮಾತುಗಳು‌ ಇವೆ.
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ನಿಯಮವನ್ನು ಜಾರಿಗೆ ತರುವುದು ಸೂಕ್ತವಲ್ಲ ಎಂಬ ಮಾತುಗಳು ಕಾರ್ಮಿಕ ಒಕ್ಕೂಟಗಳಿಂದ ಕೇಳಿಬರುತ್ತಿವೆ.