Take a fresh look at your lifestyle.

ಗ್ರಾಚ್ಯುಟಿ ಅವಧಿ ಸಡಲಿಕೆ !

ಪ್ರಸ್ತುತ ಕೊಡುಗೆ ಭತ್ಯೆ ನಿಯಮಗಳು ಏನು ಹೇಳುತ್ತವೆ

0
post ad

ನವದೆಹಲಿ :  ಈಗ ಚಾಲ್ತಿಯಲ್ಲಿರುವ ಗ್ರಾಚ್ಯುಟಿ ನಿಯಮವನ್ನು ಐದು ವರ್ಷಗಳ ಪರಿಮಿತಿ ನಿಯಮವನ್ನು ಕಡಿಮೆ ಮಾಡುವ ಚಿಂತನೆಯನ್ನು ಕೇಂದ್ರ ಉದ್ಯೋಗ ಸಚಿವಾಲಯ ನಡೆಸುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ತಜ್ಞರು ಶಿಪಾರಸು ಮಾಡಿರುವ ವರದಿಗಳನ್ನು ಕೇಂದ್ರ ಸರ್ಕಾರ ಪರಿಶೀಲನೆಯನ್ನು ಮಾಡುತ್ತಿದ್ದು, ಶೀಘ್ರದಲ್ಲಿ ಕೊಡುಗೆ ಭತ್ಯೆಯ ನಿಯಮಗಳಲ್ಲಿ ಪರಿಷ್ಕರಣೆಗಳು ನಡೆಯಲಿವೆ. ಈ ನಿಯಮ ಸಡಲಿಕೆಯಿಂದ ಕಾರ್ಮಿಕ ವರ್ಗಕ್ಕೆ ಹೆಚ್ಚು ಪ್ರಯೋಜನವಾಗಲಿದೆ.
ಉದ್ಯೋಗದ ಪದವಿಯ ಕಾಲಾವಧಿಗಳು ಕಡಿಮೆಯಾಗುತ್ತಿರುವುದು, ಉದ್ಯೋಗ ಭದ್ರತೆ ಕುಸಿಯುತ್ತಿರುವುದು ಮತ್ತು ಗುತ್ತಿಗೆ ಆಧಾರಿತ ಉದ್ಯೋಗಗಳು ಹೆಚ್ಚಾಗುತ್ತಿರುವುದರಿಂದ ಗ್ರಾಚ್ಯುಟಿ ಯ ಮಿತಿಯನ್ನು ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಬಹಳ ಹಿಂದೆಯೇ ರೂಪಿಸಲಾದ ಈ ನಿಯಮಗಳನ್ನು ತಿದ್ದುಪಡಿ ಮಾಡಬೇಕು ಎಂದು ಕಾರ್ಮಿಕ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
ಸದ್ಯ ಭಾರತದಲ್ಲಿ 1972ರ ಗ್ರಾಚ್ಯುಟಿ ಕಾಯ್ದೆ ಪ್ರಕಾರ ಗ್ರಾಚ್ಯುಟಿಯನ್ನು ಕಾರ್ಮಿಕರಿಗೆ ಪಾವತಿ ಮಾಡಲಾಗುತ್ತಿದೆ.

ಪ್ರಸ್ತುತ ಗ್ರಾಚ್ಯುಯಿಟಿ ನಿಯಮಗಳು:

*  ಒಂದೇ ಸಂಸ್ಥೆಯಲ್ಲಿ ಕನಿಷ್ಠ ಐದು ವರ್ಷಗಳನ್ನು ಪೂರೈಸಿದಾಗ ಮಾತ್ರ ಅಂತಹ ನೌಕರನು ಗ್ರಾಚ್ಯುಟಿಗೆ ಅರ್ಹನಾಗುತ್ತಾನೆ.
* ಯಾವುದೇ ಅಡೆ ತಡೆ ಇಲ್ಲದೆ ಸಂಸ್ಥೆಯಲ್ಲಿ ಐದು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿರಬೇಕು.
* ಅನಾರೋಗ್ಯ ಅಥವಾ ಅಪಘಾತದಿಂದ ಅಂಗವೈಕಲ್ಯ ಉಂಟಾಗಿದ್ದರೆ ಐದು ವರ್ಷ ಸತತ ಕೆಲಸದ ಹೊರತಾಗಿಯೂ ಗ್ರಾಚ್ಯುಟಿ ಪಡೆಯಲು ಆ ಕಾರ್ಮಿಕ ಅರ್ಹ.
* ಸರ್ಕಾರಿ ನೌಕರ ಪಡೆದ ಗ್ರಾಚ್ಯುಟಿಗೆ  ತೆರಿಗೆಯಿಂದ ಸಂಪೂರ್ಣ ವಿನಾಯ್ತಿಯನ್ನು ಕಲ್ಪಪಾವತಿಸಬಹುದು. ಸರ್ಕಾರೇತರ ನೌಕರನಿಗೆ, ತೆರಿಗೆ ಸಲ್ಲಿಸುವ ಅರ್ಹತೆಯುಳ್ಳ ಗ್ರಾಚ್ಯುಯಿಟಿಯ ಮೊತ್ತ, ಅಥವಾ ರೂ. 20 ಲಕ್ಷ ಅಥವಾ, ಗ್ರಾಚ್ಯುಟಿ ಯ ವಾಸ್ತವಕ್ಕೆ ಪಡೆದ ಗ್ರಾಚ್ಯುಟ್ ಮೇಲೆ ಕನಿಷ್ಠ ತೆರಿಗೆ ವಿನಾಯಿತಿ ಇರುತ್ತದೆ.
* ಗ್ರಾಚ್ಯುಟಿಯು ತೆರಿಗೆ ವಿನಾಯಿತಿಯನ್ನು ಮೀರಿದ್ದರೆ, ಉದ್ಯೋಗಿಗೆ ಅನ್ವಯವಾಗುವ ಸ್ಲಾಬ್ ದರಕ್ಕೆ ಅನುಗುಣವಾಗಿ ತೆರಿಗೆಯು ಅನ್ವಯವಾಗುತ್ತದೆ.
* ಉದ್ಯೋಗಿ ಮೃತಪಟ್ಟಾಗ, ನಾಮಿನಿಗೆ ಗ್ರಾಚ್ಯುಟಿ ಸಿಗುತ್ತದೆ. ಐದು ವರ್ಷಗಳ ಸೇವಾವಧಿಯ ಕಡ್ಡಾಯ ನಿಯಮ ನೌಕರ ಮೃತಪಟ್ಟಾಗ  ಅನ್ವಯವಾಗುವುದಿಲ್ಲ.

“ಪೇಮೆಂಟ್ ಆಫ್ ಗ್ರಾಚ್ಯುಟಿ ಆಕ್ಟ್ 1972” ಅನ್ವಯ, 12 ಕಾರ್ಖಾನೆ, ಗಣಿ, ತೈಲಕ್ಷೇತ್ರ, ತೋಟ, ಬಂದರು, ರೈಲ್ವೆ ಕಂಪನಿಗಳಲ್ಲಿ  ಅಥವಾ ಅಂಗಡಿಗಳಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಜನರು ಕೆಲಸ ಮಾಡುತ್ತಿದ್ದರೆ, ಅಥವಾ ಒಂದು ಸಂಸ್ಥೆ ಈ ಹಿಂದೆ ಪಾವತಿಸಿದ್ದರೆ ಕಡ್ಡಾಯವಾಗಿ ಗ್ರಾಚ್ಯುಟಿಯನ್ನು ಕಾರ್ಮಿಕರಿಗೆ ಪಾವತಿಸಬೇಕು.
ಈ ಕಾಯ್ದೆಯ ವ್ಯಾಪ್ತಿಗೆ ಒಳಪಡದ ಉದ್ಯೋಗದಾತರು ಸಹ ಗ್ರಾಚ್ಯುಯಿಟಿ ಯನ್ನು  ಪಾವತಿಸಬಹುದು.