Take a fresh look at your lifestyle.

ಕಾರ್ಮಿಕ ಧೋರಣೆ ಖಂಡಿಸಿ ಹೆಲ್ತಿಯಂ ಕಾರ್ಮಿಕರ ತುರ್ತು ಸಭೆ

ಕಾರ್ಮಿಕ ಸಂಘಟನೆಯಲ್ಲಿ ಭಾಗವಹಿಸಿದ್ದರು ಎಂಬ ಜಿದ್ದಿಗೆ ಬಿದ್ದು ಆಡಳಿತ ವರ್ಗ ಐದು ಜನರಿಗೆ ಕೆಲಸ ನಿರಾಕರಣೆಗೆ ಮುಂದಾಗಿದೆ

0
post ad

ಬೆಂಗಳೂರು : ಹೆಲ್ತಿಯಂ (ಸುಚುರ್‌ ಇಂಡಿಯಾ ಲಿ.) ಕಾರ್ಖಾನೆಯಲ್ಲಿ ಕಾರ್ಮಿಕರ ಮೇಲೆ ನಡೆಸುತ್ತಿರುವ ನಿರಂತರ ಶೋಷಣೆ, ಕಾರ್ಮಿಕ ಕಾಯಿದೆಗಳ ಉಲ್ಲಂಘನೆ ಹಾಗೂ ಕಾರ್ಮಿಕ ಅನುಚಿತ ನೀತಿಗಳನ್ನು ಖಂಡಿಸುವ ಸಲುವಾಗಿ ಕಾರ್ಮಿಕರು ಇಂದು ತುರ್ತು ಸಭೆ ಸೇರಿ ಮುಂದಿನ ಕ್ರಮಗಳ ಬಗೆಗೆ ಚರ್ಚಿಸಿದರು.

ಸೆಪ್ಟೆಂಬರ್ 29 ರಂದು ನಡೆಸಬೇಕಾಗಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ ಕಾರ್ಮಿಕರು, ಮುಂದೆ ಕೈಗೊಳ್ಳಬೇಕಾದ ಕ್ರಮಗಳನ್ನು, ಸಾಧಕ ಬಾಧಕಗಳನ್ನು ಚರ್ಚಿಸಿದರು.
ಅಧ್ಯಕ್ಷರಾದ ಜಿಆರ್ ಶಿವಶಂಕರ್ ನೇತೃತ್ವದಲ್ಲಿ ಬಸವೇಶ್ವರ ನಗರದ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಪದಾಧಿಕಾರಿಗಳು, ಕಾರ್ಮಿಕರು ಒಮ್ಮತದಿಂದ ಆಡಳಿತ ವರ್ಗದ ಕಾರ್ಮಿಕರ ಅನುಚಿತ ನೀತಿಯನ್ನು ಖಂಡಿಸಿದರು.
ಕಾರ್ಮಿಕ ಸಹಾಯಕ ಆಯುಕ್ತರು ರಾಜೀಸಂದಾನ ಸಭೆ ಕರೆದಿದ್ದು, ಕೋವಿಡ್ ಹಿನ್ನಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಅವರು ಬಂದ ಮೇಲೆ ಸಭೆ ನಡೆಸಿ ಮುಷ್ಕರದ ಬಗೆಗೆ ಅಂತಿಮಗೊಳಿಸುವ ಬಗೆಗೂ ತೀರ್ಮಾನಿಸಲಾಯಿತು.

ಸಹಾಯಕ ಕಾರ್ಮಿಕ ಆಯುಕ್ತರು, ಬೆಂ.ವಿಭಾಗ-01 ಇವರು ಸಹ 22-09-2020ರಂದು ಸಂಸ್ಥೆಯಲ್ಲಿ ಕೆಲಸ
ಮಾಡುತ್ತಿರುವ 3 ಜನ ಗುತ್ತಿಗೆದಾರರು ಗುತ್ತಿಗೆ ಲೈಸೆನ್ಸ್‌ ಪಡೆದಿರುವ ಬಗ್ಗೆ ಮತ್ತು ಕೆಲಸವನ್ನು ನಿರ್ವಹಿಸದೇ ಖಾಯಂ ಸ್ವಭಾವದ ಕೆಲಸ ಮಾಡುತ್ತಿರುವದರ ಬಗೆಗೆ ತುರ್ತು ಸಭೆಯನ್ನು ಸೆಪ್ಟೆಂಬರ್ 25 ರಂದು ಕರೆದಿದ್ದರು. ಆ ಸಭೆಗೆ ಆಡಳಿತ ವರ್ಗದವರಾಗಲೀ, ಗುತ್ತಿಗೆದಾರರಾಗಲೀ ರಾಜೀಸಂಧಾನ ಸಭೆಗೆ ಹಾಜರಾಗಿರಲಿಲ್ಲ.
ಇನ್ನು ಹಲವು ವಿವಾದಗಳು ಕಾರ್ಮಿಕ ಇಲಾಖೆಯಲ್ಲಿ ದಾಖಲಾಗಿ ವಿಚಾರಣೆಯ ಹಂತದಲ್ಲಿದ್ದರೂ, ಸರ್ಕಾರ ಮತ್ತು ಇಲಾಖೆಗೆ ಮಾನ್ಯತೆ ನೀಡದ ಸದರಿ ಹೆಲ್ತಿಯಂ ಆಡಳಿತ ವರ್ಗ ಕಾರ್ಮಿಕ ಸಂಘಟನೆಯಲ್ಲಿ ಭಾಗವಹಿಸಿದ್ದರು ಎಂಬ ಜಿದ್ದಿಗೆ ಬಿದ್ದು ಪ್ರಶಾಂತ್‌ ಬಿ.ಕೆ, ಶೋಭ ಕೆ.ಎಸ್‌, ಅಬ್ದುಲ್‌, ರಾಮಕೃಷ್ಣ ಬಿ.ಎಸ್‌, ಸುಪ್ರಿಯ ಎಸ್‌.ಕುಲಕರ್ಣಿ ಸೇರಿದಂತೆ ಐದು ಜನರಿಗೆ ಕೆಲಸ ನಿರಾಕರಣೆಗೆ ಮುಂದಾಗಿದೆ.
ಈ ಬಗೆಗೆ ಆಡಳಿಯ ವರ್ಗ ಸೂಕ್ತ ಕ್ರಮಗಳನ್ನು ಕೈಗೊಳ್ಳವವರೆಗೂ ನಿರಂತರ ಹೋರಾಟವನ್ನು ನಡೆಸುವುದಾಗಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.