Take a fresh look at your lifestyle.

ಸರ್ಕಾರಿ ನೌಕರರಿಗೆ 2021 ಸಾಲಿನ ರಜೆಗಳು

ಪ್ರತಿ ತಿಂಗಳ ಎಲ್ಲ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಪ್ರತಿ ಭಾನುವಾರ ಸಾರ್ವತ್ರಿಕ ಸರ್ಕಾರಿ ರಜಾ ದಿನಗಳಾಗಿವೆ

0
post ad

ಬೆಂಗಳೂರು:  ಮುಂದಿನ ವರ್ಷ  2021ನೇ ಸಾಲಿನ ಸರ್ಕಾರಿ ನೌಕರರ ರಜಾ ದಿನಗಳನ್ನು ಕರ್ನಾಟಕ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಬಗ್ಗೆ  ಅಧಿಸೂಚನೆ ಹೊರಡಿಸಿರುವ  ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಈ ಬಗ್ಗೆ  ಆದೇಶ ಮಾಡಿ, ಒಟ್ಟು 19 ಪರಿಮಿತ ರಜಾ ದಿನಗಳನ್ನು ಘೋಷಣೆ ಮಾಡಿದೆ.
ರಾಜ್ಯಪಾಲರ ಆದೇಶದಂತೆ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಮೊಹಮ್ಮದ್ ನಯೀಮ್ ಮೊಮಿನ್ ಅವರು ಆದೇಶ ಹೊರಡಿಸಿದ್ದಾರೆ.
ಪ್ರತಿ ತಿಂಗಳ ಎಲ್ಲ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಪ್ರತಿ ಭಾನುವಾರ ಸಾರ್ವತ್ರಿಕ ಸರ್ಕಾರಿ ರಜಾ ದಿನಗಳಾಗಿವೆ.
ರಾಜ್ಯ ಸರ್ಕಾರವು 2021ನೇ ಸಾಲಿನಲ್ಲಿ ಸರ್ಕಾರಿ ನೌಕರರಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಈ ಮುಂದಿನಂತಿದೆ.

ಜನವರಿ 14 – ಗುರುವಾರ ಉತ್ತರಾಯಣ ಪುಣ್ಯ ಕಾಲ, ಮಕರ ಸಂಕ್ರಾಂತಿ
ಜನವರಿ 26 – ಮಂಗಳವಾರ ಗಣರಾಜ್ಯೋತ್ಸವ
ಮಾರ್ಚ್‌ 11 – ಗುರುವಾರ ಮಹಾ ಶಿವರಾತ್ರಿ
ಏಪ್ರಿಲ್‌ 2 – ಶುಕ್ರವಾರ ಗುಡ್‌ ಫ್ರೈಡೇ
ಏಪ್ರಿಲ್‌ 13 – ಮಂಗಳವಾರ ಯುಗಾದಿ
ಏಪ್ರಿಲ್‌ 14 – ಬುಧವಾರ ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ
ಮೇ 1 – ಶನಿವಾರ ಕಾರ್ಮಿಕ ದಿನಾಚರಣೆ
ಮೇ 14 – ಶುಕ್ರವಾರ ಬಸವ ಜಯಂತಿ/ಅಕ್ಷಯ ತೃತೀಯ/ ಖುತುಬ್‌ ಎ ರಂಜಾನ್
ಜುಲೈ 21 – ಬುಧವಾರ ಬಕ್ರೀದ್
ಆಗಸ್ಟ್‌ 20 – ಶುಕ್ರವಾರ ಮೊಹರಂ ಕಡೇ ದಿನ
ಸೆಪ್ಟೆಂಬರ್‌ 10 – ಶುಕ್ರವಾರವರ ಸಿದ್ಧಿವಿನಾಯಕ ವ್ರತ
ಅಕ್ಟೋಬರ್‌ 2 – ಶನಿವಾರ ಗಾಂಧಿ ಜಯಂತಿ
ಅಕ್ಟೋಬರ್ ‌6 – ಬುಧವಾರ ಮಹಾಲಯ ಅಮವಾಸ್ಯೆ
ಅಕ್ಟೋಬರ್‌ 14 – ಗುರುವಾರ ಮಹಾ ನವಮಿ, ಆಯುಧ ಪೂಜೆ
ಅಕ್ಟೋಬರ್‌ 15 – ಶುಕ್ರವಾರ ವಿಜಯ ದಶಮಿ
ಅಕ್ಟೋಬರ್‌ 20 – ಬುಧವಾರ ಮಹರ್ಷಿ ವಾಲ್ಮೀಕಿ ಜಯಂತಿ, ಈದ್‌ ಮಿಲಾದ್‌
ನವೆಂಬರ್‌ 1 – ಸೋಮವಾರ ಕನ್ನಡ ರಾಜ್ಯೋತ್ಸವ
ನವೆಂಬರ್‌ 3 – ಬುಧವಾರ ನರಕ ಚತುರ್ದಶಿ
ನವೆಂಬರ್‌ 5 – ಶುಕ್ರವಾರ, ಬಲಿ ಪಾಡ್ಯಮಿ, ದೀಪಾವಳಿ
ನವೆಂಬರ್‌ 22 – ಸೋಮವಾರ ಕನಕದಾಸ ಜಯಂತಿ

ಏಪ್ರಿಲ್‌ 25 ರಂದು ಮಹಾವೀರ ಜಯಂತಿ ಹಾಗೂ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬರಲಿದೆ. ಡಿಸೆಂಬರ್‌ 25 ರಂದು ಕ್ರಿಸ್‌ಮಸ್‌ ನಾಲ್ಕನೇ ಶನಿವಾರದಂದು ಬರಲಿದೆ. ಹಾಗಾಗಿ ಈ ದಿನಗಳಂದು ಸಾರ್ವತ್ರಿಕ ರಜೆ ಘೋಷಿಸಿಲ್ಲ.

ಪರಿಮಿತ ರಜೆಗಳು :
* 01.01.2021 – ನೂತನ ವರ್ಷಾರಂಭ
* 30.03.2021 – ಷಬ್-ಎ-ಬರಾತ್
* 03.04.2021 – ಹೋಲಿ ಸ್ಯಾಟರ್‌ಡೇ
* 17.04.2021 – ದೇವರ ದಾಸಿಮಯ್ಯ ಜಯಂತಿ
* 21.04.2021 – ಶ್ರೀರಾಮ ನವಮಿ
* 07.05.2021 – ಜುಮತ್-ಉಲ್-ವಿದಾ
* 10.05.2021 – ಷಬ್-ಎ-ಖದರ್
* 17.05.2021 – ಶ್ರೀ ಶಂಕರಾಚಾರ್ಯ ಜಯಂತಿ
* 26.05.2021 – ಬುದ್ಧ ಪೂರ್ಣಿಮ
* 20.08.2021 – ವರಮಹಾಲಕ್ಷ್ಮಿ ವ್ರತ
* 21.08.2021 – ಓಣಂ ಹಬ್ಬ, ಋಗ್ ಉಪಾಕರ್ಮ
* 23.08.2021 – ಬ್ರಹ್ಮಶ್ರೀ ನಾರಾಯಣಗುರು ಜಯಂತಿ
* 08.09.2021 – ಕನ್ಯ ಮಾರಯಮ್ಮ ಜಯಂತಿ
* 09.09.2021 – ಸ್ವರ್ಣಗೌರಿ ವ್ರತ
* 17.09.2021 – ವಿಶ್ವಕರ್ಮ ಜಯಂತಿ
* 18.10.2021 – ತುಲಾ ಸಂಕ್ರಮಣ
* 19.11.2021 – ಗುರುನಾನಕ್ ಜಯಂತಿ
* 20.11.2021 – ಹುತ್ತರಿ ಹಬ್ಬ
* 24.12.2021 – ಕ್ರಿಸ್‌ಮಸ್ ಈವ್