Take a fresh look at your lifestyle.

ಕಾರ್ಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ

ಕಾರ್ಮಿಕ ಕಾರ್ಡ್ ಗೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ? ಹೇಗೆ ಪಡೆದುಕೊಳ್ಳಬೇಕು ? ಕಾರ್ಮಿಕನ ಬಳಿ ಏಕೆ ಕಡ್ಡಾಯವಾಗಿ ಮೊಬೈಲ್ ಫೋನ್ ಇರಲೇಬೇಕು ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯಿರಿ

0
post ad

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಣಿಯಾಗುವ ವಿಧಾನವು ಕೆಳಗಿನಂತೆ ಇರುತ್ತದೆ..
ಗಮನವಿಟ್ಟು ಗಮನಿಸಿ..
ಕಾರ್ಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾದ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರು  ವಯೋಮಿತಿಯು   18 ರಿಂದ 60 ವರ್ಷದೊಳಗಿರಬೇಕಾಗುತ್ತದೆ.
ಕಾರ್ಮಿಕ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಲಿಂಕ್ ಆಗಿರುವ  ಮೊಬೈಲ್ ಫೋನ್ ಕಡ್ಡಾಯವಾಗಿದ್ದು, ನೋಂದಣಿ ಬಯಸುವ ಕಾರ್ಮಿಕನಿಗೆ ಒಟಿಪಿ ಕಳುಹಿಸಿಕೊಡಲಾಗುತ್ತದೆ. ಈ ಒಟಿಪಿಯನ್ನು ಆನ್ ಲೈನ್ ಪೋರ್ಟಲ್ ನಲ್ಲಿ  ದಾಖಲಿಸಿದ ನಂತರವೇ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.  ಆದ್ದರಿಂದ ಕಾರ್ಮಿಕ ಖುದ್ದು ಸಿಎಸ್ ಸಿ ಕೇಂದ್ರಕ್ಕೆ ಬೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು.

ನೋಂದಣಿ ಮಾಡುವ ಕಛೇರಿಗಳು:
ಕಾರ್ಮಿಕ ಅಧಿಕಾರಿಗಳು/ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಮುಖ್ಯ ಅಭಿಯಂತರರು…

ಆನ್ ಲೈನ್ ಮುಖಾಂತರ ಸಿಎಸ್ ಸಿ ಕೇಂದ್ರಗಳಲ್ಲಿ, ನೋಂದಾಯಿತ ಕಾರ್ಮಿಕ ಸಂಘಗಳಲ್ಲಿ ಕಂಪ್ಯೂಟರ್ ಲಭ್ಯವಿದ್ದರೆ ಅಲ್ಲಿಯೂ ಅನ್ ಲೈನ್ ನಲ್ಲಿ ಕಾರ್ಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.

ನೋಂದಣಿಗಾಗಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯವಾಗಿವೆ… 

1) ನಮೂನೆ-V-I ರಲ್ಲಿ ಅರ್ಜಿ

2) ಕಾಮಗಾರಿ ನಡೆಯುವ ಕಟ್ಟಡದ ಮಾಲೀಕರು/ ಗುತ್ತಿಗೆದಾರರು, CREDAI (Confederation of Real Estate Developers Association of India), BAI (Builders Association of India) ಅಥವಾ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್ ನವರು ನಮೂನೆ-V (A) ರಲ್ಲಿ ನೀಡುವಂತಹ ‘ಉದ್ಯೋಗದ ದೃಢೀಕರಣ ಪತ್ರ’ ಅಥವಾ  ನೋಂದಾಯಿತ ಕಾರ್ಮಿಕ ಸಂಘಗಳು   ನಮೂನೆ-V(B) ರಲ್ಲಿ ನೀಡುವಂತಹ ‘ಉದ್ಯೋಗದ ದೃಢೀಕರಣ ಪತ್ರ’ ಅಥವಾ ಕಾರ್ಮಿಕ ಅಧಿಕಾರಿ / ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರು ನಮೂನೆ-V (C) ರಲ್ಲಿ ನೀಡುವಂತಹ ‘ಉದ್ಯೋಗದ ದೃಢೀಕರಣ ಪತ್ರ’ ಅಥವಾ ಪಂಚಾಯತಿ ಅಭಿವೃದ್ಧಿ ಅಧಿಕಾರಿ / ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ನಮೂನೆ- V (D)ರಲ್ಲಿ ನೀಡುವಂತಹ ‘ಉದ್ಯೋಗದ ದೃಢೀಕರಣ ಪತ್ರ’

3) ಮೂರು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು

4) ವಯಸ್ಸಿನ ದೃಢೀಕರಣ ಪತ್ರ: ಶಾಲಾ ದಾಖಲಾತಿ, ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಎಪಿಕ್‌ಕಾರ್ಡ್, ಆಧಾರ್‌ಕಾರ್ಡ್, ಎಲ್‌ಐಸಿ ವಿಮೆ ಪಾಲಿಸಿ ಅಥವಾ ಗ್ರಾಮ ಲೆಕ್ಕಿಗರು ಅಥವಾ ಕಂದಾಯ ನಿರೀಕ್ಷಕರು ಅಥವಾ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಅಥವಾ ಜನನ ಮತ್ತು ಮರಣ ನೋಂದಣಾಧಿಕಾರಿಗಳಿಂದ ವಿತರಿಸಿದ ಪ್ರಮಾಣ ಪತ್ರ ಅಥವಾ ಸರ್ಕಾರಿ ಆಸ್ಪತ್ರೆ/ಇಎಸ್‌ಐ ಆಸ್ಪತ್ರೆ/ಸ್ಥಳೀಯ ಸಂಸ್ಥೆಗಳ ಆಸ್ಪತ್ರೆ ಅಥವಾ ನೋಂದಾಯಿತ ಎಂಬಿಬಿಎಸ್, ಆಯುರ್ವೇದ, ಯುನಾನಿ ಅಥವಾ ಹೋಮಿಯೋಪತಿ ವೈದ್ಯರು, ನೋಂದಾಯಿತ ಖಾಸಗಿ ಬಿ.ಡಿ.ಎಸ್ ವಿದ್ಯಾರ್ಹತೆ ಹೊಂದಿದ ದಂತ ವ್ಶೆದ್ಯರಿಂದ ಪ್ರಮಾಣ ಪತ್ರ ಇವುಗಳಲ್ಲಿ ಯಾವುದಾದರೊಂದು ದಾಖಲೆ.

 ಅರ್ಜಿದಾರ ಹಾಗೂ ಆತನ / ಆಕೆಯ ಅವಲಂಭಿತರ ಆಧಾರ್‌ಕಾರ್ಡ್ ನ   ಸ್ವಯಂ ದೃಢೀಕೃತ ಪ್ರತಿ ಕಡ್ಡಾಯವಾಗಿ ಸಲ್ಲಿಸುವುದು

ನೋಂದಣಿ ಶುಲ್ಕ: ರೂ. 25/- ಹಾಗೂ ವಂತಿಗೆ ಶುಲ್ಕ: ಪ್ರತಿ ವರ್ಷಕ್ಕೊಮ್ಮೆ ರೂ.25/- 

ನೋಂದಣಿ ಸದಸ್ಯತ್ವ ಮುಂದುವರಿಕೆ: ಮುಂದಿನ ಒಂದು ವರ್ಷದವರೆಗೆ ಅಸ್ಥಿತ್ವದಲ್ಲಿರುವ ನೋಂದಣಿಯನ್ನು ಮುಂದುವರೆಸುವುದಕ್ಕಾಗಿ ಅರ್ಜಿ ನಮೂನೆ-V(E)  ರಲ್ಲಿ ಭರ್ತಿಕರಿಸಿ ಅಗತ್ಯ ದಾಖಲೆ ಮತ್ತು ರೂ.25/-ಗಳ ವಂತಿಗೆಯನ್ನು ಪಾವತಿಸಿ ಮುಂದುವರಿಸಿಕೊಳ್ಳುವುದು.

ನಕಲು ಗುರುತಿನ ಚೀಟಿ ಪಡೆಯುವ ಕುರಿತು : ಫಲಾನುಭವಿಯು ಒಂದು ವೇಳೆ ತನ್ನ ಗುರುತಿನ ಚೀಟಿಯನ್ನು ಕಳೆದುಕೊಂಡ ಪಕ್ಷದಲ್ಲಿ ನಕಲು ಗುರುತಿನ ಚೀಟಿ ಪಡೆಯಲು ಅರ್ಜಿ ನಮೂನೆ-V(F)ರಲ್ಲಿ ಭರ್ತಿಕರಿಸಿ ಅಗತ್ಯ ದಾಖಲೆ ಮತ್ತು ರೂ.50/-ಗಳನ್ನು ಪಾವತಿಸಿ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸಿ ಪಡೆಯಬಹುದು.

ಕಾರ್ಮಿಕ ಕಾರ್ಡ್ ಮಾಡಿಸಲು ಅಂದರೆ ನೋಂದಣಿ, ನವೀಕರಣ ಸೇರಿದಂತೆ ಯಾವುದೇ ಕಾರ್ಮಿಕ ಸಂಬಂಧಿ ಮಾಹಿತಿಗೆ ನಮ್ಮ ‘ವಾಯ್ಸ್ ಆಫ್ ವರ್ಕರ್ಸ್’ ಕಚೇರಿಗೆ ಬೇಟಿ ನೀಡಬಹುದು..
ನಮ್ಮ ವಿಳಾಸ :
ನಂ.43, 2ನೇ ಮಹಡಿ, ಎಂಐಜಿ, 2ನೇ ಹಂತ, ಕೆಹೆಚ್ ಬಿ ಕಾಲೋನಿ, ಪವಿತ್ರ ಪ್ಯಾರಡೈಸ್ ಹತ್ತಿರ, ಬಸವೇಶ್ವರ ನಗರ, ಬೆಂಗಳೂರು – 560079
ಹೆಚ್ಚಿನ ಮಾಹಿತಿ ಸಂಪರ್ಕಿಸಿ :
9538267179