Take a fresh look at your lifestyle.

ಟೊಯೋಟಾ ಕಾರ್ಮಿಕರಿಂದ ಮಾನವ ಸರಪಳಿ

ಮೂರೂವರೆ ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಾಣ... ಕೆಲ ಪದಾಧಿಕಾರಿಗಳು ಜೆಸಿಟಿಯು ಹಮ್ಮಿಕೊಂಡಿರುವ ರೈತಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು...

0
post ad

ರಾಮನಗರ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕರು ತಮ್ಮ ಹೋರಾಟದ ಭಾಗವಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಟಿಕೆಎಂಇಯು ಸಂಘದ ಸ್ವಾಭಿಮಾನಿ ಹೋರಾಟ 47ನೇ ದಿನಕ್ಕೆ ಕಾಲಿಟ್ಟಿದ್ದು ಕಾರ್ಮಿಕರು ತಮ್ಮ ಹೋರಾಟದ ಅಂಗವಾಗಿ ಸುಮಾರು ಮೂರೂವರೆ ಕಿಲೋ ಮೀಟರ್ ದೂರ ಮಾನವ ಸರಪಳಿ ರೂಪಿಸಿ ಪ್ರತಿಭಟನೆಯನ್ನು ಹೊರಹಾಕಿದರು.


ಬೆಂಗಳೂರು ಮೈಸೂರು ಮುಖ್ಯ ಮಾರ್ಗದಲ್ಲಿ ಕಾಡಿಮನೆ ಹೋಟಲ್ ನಿಂದ ಬಿಡದಿ ವರೆಗೂ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಾರ್ಮಿಕರು ರಸ್ತೆ ಬದಿ ನಿಂತು ಮಾನವ ಸರಪಳಿ ರೂಪಿಸಿದ್ದರು.
ಟೊಯೋಟಾ ಸಂಸ್ಥೆ ಅಮಾನತು ಮಾಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು, ನ್ಯಾಯಯುತವಾಗಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಬಿಗಿಪಟ್ಟು ಹಿಡಿದಿರುವ ಕಾರ್ಮಿಕರು ಸರ್ಕಾರ, ಕಾರ್ಮಿಕ ಇಲಾಖೆ ಏಕಪಕ್ಷೀಯ ನಡೆಯ ನಡುವೆಯೂ
ತಮ್ಮ ಸ್ವಾಭಿಮಾನಿ ಹೋರಾಟವನ್ನು ಯಶಸ್ವಿಯಾಗಿ ಮುನ್ನಡೆಸುವತ್ತ ಭಿನ್ನ ವಿಭಿನ್ನ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ.


ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಜಟ್ಟು ಇಂದು 65 ಕಾರ್ಮಿಕರ ಅಮಾನತ್ತು, 47 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.

ಹೆಚ್ಎಎಲ್ ಕಾರ್ಮಿಕರು ಟಿಕೆಎಂ ಕಾರ್ಮಿಕರ ಮಾನವ ಸರಪಳಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಟಿಕೆಎಂಇಯು ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ‌ ಬೆಂಬಲ ಸೂಚಿಸಿ ಜೆಸಿಟಿಯು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಧರಣಿಯಲ್ಲಿ ಕಾರ್ಮಿಕ ಸಂಘದ ಕೆಲ ಪದಾಧಿಕಾರಿಗಳು ಭಾಗವಹಿಸಿದ್ದಾರೆ.