Take a fresh look at your lifestyle.

ಆಯುಷ್ ವೈದ್ಯರಿಗೆ ಶಸ್ತ್ರಚಿಕಿತ್ಸೆ  ಅನುಮತಿಯ ವಿರುದ್ಧ ಪ್ರತಿಭಟನೆ

ಜಿಲ್ಲಾ ಕೇಂದ್ರ ಕೋಲಾರದಲ್ಲಿ ಖಾಸಗಿ ವೈದ್ಯರಿಂದ ಪ್ರತಿಭಟನೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ.. ಜಿಲ್ಲೆಯ ಐಎಂಎ ವೈದ್ಯರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

0
post ad

ಕೋಲಾರ : ಕೇಂದ್ರ ಸರ್ಕಾರವು  ಅಲೋಪತಿ ಮತ್ತು ಆಯುರ್ವೇದ ಪದ್ಧತಿಯನ್ನು ಮಿಶ್ರಣಗೊಳಿಸಿ  ಆಯುರ್ವೇದ ವೈದ್ಯರಿಗೆ ಶಸ್ರ್ತ ಚಿಕಿತ್ಸೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ  ಜಿಲ್ಲಾ ಖಾಸಗಿ ವೈದ್ಯರುಗಳು ಪ್ರತಿಭಟನೆಯನ್ನು ನಡೆಸಿದರು.


ನಗರದ ಬಂಗಾರಪೇಟೆ ರಸ್ತೆಯಲ್ಲಿರುವ  ಐಎಂಎ  ಕಚೇರಿಯ ಮುಂಬಾಗ ಕಾರ್ಯದರ್ಶಿ ದೇವರಾಜ್ ಹಾಗೂ ಅಧ್ಯಕ್ಷರಾದ ಆರ್. ಎಂ. ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಐಎಂಎ ಜಿಲ್ಲಾಧ್ಯಕ್ಷ, ಡಿಎಸ್ ನಾರಾಯಣಸ್ವಾಮಿರವರು ಮಾತನಾಡಿ ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ  ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿರುವುದನ್ನು ವಿರೋಧಿಸಿ ಇಂದು ದೇಶದಾದ್ಯಂತ ಮುಷ್ಕರವನ್ನು ನಡೆಸಲಾಗುತ್ತಿದ್ದು ಅದರಂತೆ ಜಿಲ್ಲಾ ಕೇಂದ್ರದಲ್ಲಿಯೂ ಸಹ ನಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸ ಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಆದೇಶದಿಂದ ಸಾಕಷ್ಟು ಅನಾಹುತಗಳು ಉಂಟಾಗಲಿದ್ದುˌ ಸಾವು ನೋವುಗಳು ಸಹ ಸಂಭವಿಸಲಿದೆ. ಕೇಂದ್ರ ಸರ್ಕಾರವು ಈ ಆದೇಶವನ್ನು ತಕ್ಷಣ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಮ್ಮ ಈ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ನೀಡಲಾಗುವುದೆಂದರು..