Take a fresh look at your lifestyle.

ಜಪಾನ್ ಜೊತೆ ಕುಶಲ ಕಾರ್ಮಿಕರ ಸಹಭಾಗಿತ್ವಕ್ಕೆ ಭಾರತ ಅಸ್ತು

ಭಾರತ ಮತ್ತು ಜಪಾನ್ ನಡುವೆ “ನಿರ್ದಿಷ್ಟ ಕುಶಲ ಕಾರ್ಮಿಕರ” ಸಹಭಾಗಿತ್ವದ ಸಹಕಾರ ಒಪ್ಪಂದ ಅಂಕಿತಕ್ಕೆ ಸಂಪುಟ ಅನುಮೋದನೆ ನೀಡಿದೆ...

0
post ad

ನವ ದೆಹಲಿ : ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ, “ನಿರ್ದಿಷ್ಟ ಕುಶಲ ಕಾರ್ಮಿಕ”ರಿಗೆ ಸಂಬಂಧಿಸಿದಂತೆ ಸೂಕ್ತ ಕಾರ್ಯಾಚರಣೆ ವ್ಯವಸ್ಥೆಗಾಗಿ ಮೂಲಭೂತ ಚೌಕಟ್ಟುನ ಕುರಿತಂತೆ ಭಾರತ ಸರ್ಕಾರ ಮತ್ತು ಜಪಾನ್ ಸರ್ಕಾರದ ನಡುವೆ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ವಿವರಗಳು:
ಪ್ರಸಕ್ತ ಸಹಕಾರ ಒಪ್ಪಂದವು  ಅಗತ್ಯ ಕೌಶಲ್ಯ ಮತ್ತು  ಜಪಾನ್ ಭಾಷಾ ಪರೀಕ್ಷೆಗೆ ಅರ್ಹತೆ ಪಡೆದ ನುರಿತ ಭಾರತೀಯ ಕಾರ್ಮಿಕರನ್ನು ಜಪಾನ್‌ನ ಹದಿನಾಲ್ಕು ನಿರ್ದಿಷ್ಟ ಕ್ಷೇತ್ರಗಳಲ್ಲಿ ಕರ್ತವ್ಯ ನಿಯೋಜನೆ ಮತ್ತು ಅಂಗೀಕಾರಕ್ಕೆ ಭಾರತ ಮತ್ತು ಜಪಾನ್ ನಡುವಿನ ಸಹಭಾಗಿತ್ವ ಮತ್ತು ಸಹಕಾರಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ. ಈ ಭಾರತೀಯ ಕಾರ್ಮಿಕರಿಗೆ ಜಪಾನ್ ಸರ್ಕಾರವು ‘ನಿರ್ದಿಷ್ಟಪಡಿಸಿದ ನುರಿತ ಕೆಲಸಗಾರ’ರಿಗೆ ನಿವಾಸಿಯ ಹೊಸ ಸ್ಥಾನಮಾನವನ್ನು ನೀಡುತ್ತದೆ.

ಅನುಷ್ಠಾನದ ಕಾರ್ಯತಂತ್ರ:

ಈ ಸಹಕಾರ ಒಪ್ಪಂದದ ಅಡಿಯಲ್ಲಿ, ಈ ಎಂ.ಓ.ಸಿ.ಯ ಅನುಷ್ಠಾನ ಮತ್ತು ಅನುಸರಣೆಗಾಗಿ ಜಂಟಿ ಕಾರ್ಯ ಗುಂಪನ್ನು ಸ್ಥಾಪಿಸಲಾಗುತ್ತದೆ.

ಪ್ರಮುಖ ಪರಿಣಾಮ:

ಈ ಸಹಕಾರ ಒಪ್ಪಂದ (ಎಂ.ಓ.ಸಿ.) ಜನರೊಂದಿಗಿನ ಸಂಪರ್ಕವನ್ನು ಹೆಚ್ಚಿಸುತ್ತದೆ, ಭಾರತದಿಂದ‌ ಜಪಾನ್‌ ಗೆ ಕಾರ್ಮಿಕರು ಮತ್ತು ನುರಿತ ವೃತ್ತಿಪರರ  ಸಂಚಲನತೆ ಹೆಚ್ಚಿಸುತ್ತದೆ.

ಪ್ರಯೋಜನಗಳು:

ಜಪಾನ್ ನಲ್ಲಿ ಕೆಲಸ ಮಾಡಲು ನುರಿತ ಭಾರತೀಯ  ಕೆಲಸಗಾರರಿಗೆ ಹದಿನಾಲ್ಕು ಕ್ಷೇತ್ರಗಳಲ್ಲಿ ಅಂದರೆ, ಶೃಶ್ರೂಷೆ; ಕಟ್ಟಡ ಸ್ವಚ್ಛತೆ; ಸರಕು ಸಂಸ್ಕರಣ ಕೈಗಾರಿಕೆ; ಕೈಗಾರಿಕಾ ಯಂತ್ರೋಪಕರಣ ಉತ್ಪಾದನೆ ಕೈಗಾರಿಕೆ; ವಿದ್ಯುತ್ ಮತ್ತು ವಿಧ್ಯುನ್ಮಾನ ಮಾಹಿತಿ ಸಂಬಂಧಿತ ಉದ್ದಿಮೆ; ನಿರ್ಮಾಣ; ಹಡಗು ನಿರ್ಮಾಣ ಮತ್ತು ಹಡಗು ಸಂಬಂಧಿತ ಕೈಗಾರಿಕೆ; ಮೀನುಗಾರಿಕೆ; ಆಹಾರ ಮತ್ತು ಪಾನೀಯ ಉತ್ಪಾದನೆ ಕೈಗಾರಿಕೆ ಮತ್ತು ಆಹಾರ ಸೇವಾ ಉದ್ದಿಮೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿರುತ್ತವೆ.