Take a fresh look at your lifestyle.

ಮೈಸೂರು ಘಟಕದಲ್ಲಿ ಖಾಸಗೀಕರಣ ವಿರೋಧಿಸಿ ಬಿಇಎಂಎಲ್ ಜೆಎಸಿಯಿಂದ ಪ್ರತಿಭಟನೆ

ಬಿಇಎಂಎಲ್ ನ ಕಾರ್ಮಿಕರು ಎಲ್ಲಾ ಘಟಕಗಳಲ್ಲೂ ಸರಣಿ ಧರಣಿಯನ್ನು ಹಮ್ಮಿಕೊಂಡಿದ್ದು, ಒಂದೊಂದು ಘಟಕದಲ್ಲೂ ಸರಣಿಯಾಗಿ ಪ್ರತಿಭಟನಾ ಸಭೆಗಳು ನಡೆಯುತ್ತಿದ್ದು, ಇಂದು ಮೈಸೂರಿನಲ್ಲಿ ಪ್ರತಿಭಟನಾ ಸಭೆ ನಡೆಯಿತು.

0
post ad

ಮೈಸೂರು : ಬಿಇಎಂಎಲ್ ನ ಜಂಟಿ ಕಾರ್ಯಕಾರಿ ಸಮಿತಿಯು ಇಂದು ಮೈಸೂರು ಬೆಮೆಲ್ ಘಟಕದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿತ್ತು.
ಕೇಂದ್ರ ಸರ್ಕಾರ ಬಿಇಎಂಎಲ್ ‌ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ತನ್ನ ಆರಂಭಿಕ ಪ್ರಕ್ರಿಯೆಯನ್ನು ಪ್ರಾರಂಭಿಸಿರುವ ಕ್ರಮವನ್ನು ವಿರೋಧಿಸಿ ಮೈಸೂರು ಘಟಕದ ಸಂಕೀರ್ಣದಲ್ಲಿ ಕಾರ್ಮಿಕ ಸಂಘದ ಪದಾಧಿಕಾರಿಗಳು ಮತ್ತು ಕಾರ್ಮಿಕರು ಪ್ರತಿಭಟನೆಯ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಿಇಎಂಎಲ್ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯ ಸಭೆ ದಿನಾಂಕ 4 ನೇ ಜನವರಿ ರಂದು ಬೆಂಗಳೂರು ಕಾರ್ಮಿಕ ಸಂಘದ ಕಚೇರಿಯಲ್ಲಿ ಸನ್ಮಾನ್ಯ ಶ್ರೀ ದೊಮ್ಮಲೂರು ಶ್ರೀನಿವಾಸ ರೆಡ್ಡಿ ರವರ ಅಧ್ಯಕ್ಷತೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಇಂದು ಮೈಸೂರು ಕಾರ್ಖಾನೆಯ ಆವರಣದಲ್ಲಿ ಜಂಟಿ ಕಾರ್ಯಕಾರಿ ಸಮಿತಿ ಸಭೆ ಮೈಸೂರು ಕಾರ್ಮಿಕ ಸಂಘದ ಅಧ್ಯಕ್ಷರಾದ  ಮುನಿರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ನಿರ್ಣಯಗಳು

* ಬಿಇಎಂಎಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ತೀರ್ಮಾನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

* ಹಂತಹಂತವಾಗಿ ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನಿಸಲಾಯಿತು.

* ಮುಂದಿನ ದಿನಗಳಲ್ಲಿ ಅನಿರ್ದಿಷ್ಟಮುಷ್ಕರ ಮುಖಾಂತರ ಮುಷ್ಕರವನ್ನು ತೀವ್ರಗೊಳಿಸಲು ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ನೂರಕ್ಕಿಂತ ಹೆಚ್ಚು ಚುನಾಯಿತ ಸದಸ್ಯರು ಅಂದರೆ, ಬೆಂಗಳೂರು ಕಾರ್ಮಿಕ ಸಂಘದ ಎಲ್ಲಾ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಎಲ್ಲಾ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಕೇಂದ್ರ ಕಚೇರಿಯ ಕಾರ್ಮಿಕ ಸಂಘದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಕಾರ್ಮಿಕ ಸಂಘದ ಎಲ್ಲಾ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು, ಕೇರಳ ರಾಜ್ಯದ ಪಾಲಕ್ಕಾಡ್ ಘಟಕದ ಕಾರ್ಮಿಕ ಸಂಘದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಬೆಂಗಳೂರು ಬಿಇಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷರಾದ ದೊಮ್ಮಲೂರು ಶ್ರೀನಿವಾಸರೆಡ್ಡಿ, ಪ್ರಧಾನ ಕಾರ್ಯದರ್ಶಿ ನಾರಾಯಣ, ಆಂಜನೇಯ ರೆಡ್ಡಿ ಅಧ್ಯಕ್ಷರು ಕೆಜಿಎಫ್ ಕಾರ್ಮಿಕ ಸಂಘ , ಮುನಿರೆಡ್ಡಿ ಮೈಸೂರು ಕಾರ್ಮಿಕ ಸಂಘ ಹಾಗೂ  ಕೇಂದ್ರ ಕಚೇರಿ  ಕಾರ್ಮಿಕ ಸಂಘ ಅಧ್ಯಕ್ಷರಾದ ಮುನಿನಾಗಪ್ಪ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಸ್ಥೆಯ ಖಾಸಗೀಕರಣವನ್ನು ವಿರೋಧಿಸಲೆಂದೇ ಜಂಟಿ ಕಾರ್ಯಕಾರಿ ಸಮಿತಿ ಈ ಹಿಂದೆ ಸರಣಿ ಧರಣಿಗಳಿಗೆ ಕರೆ ನೀಡಿತ್ತು, ಅದರ ಭಾಗವಾಗಿ ಮೈಸೂರಿನ ಘಟಕದಲ್ಲಿ ಇಂದು ಸಮಿತಿಯ ಪದಾಧಿಕಾರಿಗಳು ಒಕ್ಕೊರಲಿನಿಂದ ಖಾಸಗೀಕರಣವನ್ನು ಖಂಡಿಸಿದರು.
ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿ ಕಾರ್ಮಿಕರು ಬೆಮೆಲ್ ಉಳಿಸಿ, ದೇಶ ರಕ್ಷಿಸಿ ಎಂಬ ಘೋಷಣೆಗಳನ್ನು ಕೂಗಿದರು.
ಕೇಂದ್ರ ಸರ್ಕಾರವು ಬೃಹತ್ ರಕ್ಷಣಾ ವಲಯದ ಉದ್ಯಮವಾದ ಬೆಮೆಲ್ ನ ತನ್ನ ಶೇಕಡ 54.03 ಷೇರಿನಲ್ಲಿ ಶೇಕಡ 26 ರಷ್ಟು ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಬಿಡ್ ಅನ್ನು ಕರೆದಿದ್ದು ಈಗಾಗಲೇ ಖಾಸಗೀಕರಣದ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಸಂಸ್ಥೆಯ ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರುವುದರಿಂದ ಹಾಗೂ ಈ ದೇಶದ ಸಂಪತ್ತನ್ನು ಬಹಳ ಕಡಿಮೆ ಮೊತ್ತಕ್ಕೆ ಖಾಸಗಿಯವರ ಪಾಲಾಗುವುದನ್ನು ಸಂಸ್ಥೆಯ ಒಂಬತ್ತು ಘಟಕಗಳ ಉದ್ಯೋಗಿಗಳು ಮತ್ತು ಕಾರ್ಮಿಕ ಸಂಘಟನೆಗಳು ವಿರೋಧಿಸಿ ಹೋರಾಟದ ಹಾದಿ ತುಳಿದಿದ್ದಾರೆ.