Take a fresh look at your lifestyle.

ಮಳೆಯನ್ನ ಲೆಕ್ಕಿಸದೇ ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ ಶುರು

ಕಾರ್ಮಿಕ ಒಕ್ಕೂಟಗಳ ಮುಖಂಡರು, ಕಾರ್ಮಿಕ ಸಂಘಟನೆಗಳು, ಸಮ್ಮಿಳಿತ ಸಂಘಟನೆಗಳ ಕಾರ್ಮಿಕರು ಮಳೆಯನ್ನು ಲೆಕ್ಕೆಸದೇ ಸ್ವಾತಂತ್ರ್ಯ ಉದ್ಯಾನವನದ ಕಡೆಗೆ ರಾಲಿಯನ್ನು ಮನ್ನಡೆಸುತ್ತಿದ್ದಾರೆ

0
post ad

ಬೆಂಗಳೂರು: ನಿಹಾರ್ ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೇ ಜೆಸಿಟಿಯು ಹಮ್ಮಿಕೊಂಡಿರುವ ಪ್ರತಿಭಟನಾ ರಾಲಿ ರೈಲ್ವೇ ನಿಲ್ದಾಣದಿಂದ ಆರಂಭವಾಗಿ ಮುಂದೆ ಸಾಗಿದೆ.
ಕಾರ್ಮಿಕ ಒಕ್ಕೂಟಗಳ ಮುಖಂಡರು, ಕಾರ್ಮಿಕ ಸಂಘಟನೆಗಳು, ಸಮ್ಮಿಳಿತ ಸಂಘಟನೆಗಳ ಕಾರ್ಮಿಕರು ಮಳೆಯನ್ನು ಲೆಕ್ಕೆಸದೇ ಸ್ವಾತಂತ್ರ್ಯ ಉದ್ಯಾನವನದ ಕಡೆಗೆ ರಾಲಿಯನ್ನು ಮನ್ನಡೆಸುತ್ತಿದ್ದಾರೆ. ಕಾರ್ಮಿಕರ ಜೊತೆ ರೈತಪರ ಮತ್ತು ದಲಿತ ಪರ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಕೇಂದ್ರ ರಾಜ್ಯ ಸರ್ಕಾರಗಳ ವಿರುದ್ಧ ದಿಕ್ಕಾರದ ಕೂಗುಗಳನ್ನು ಹಾಕಿದರು. ಇದಲ್ಲದೇ ನಗರದ ನಾನಾ ಭಾಗಗಳಿಂದ ಆಗಮಿಸುತ್ತಿರುವ ಕಾರ್ಮಿಕರು ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಹಾಗೂ ಜನವಿರೋಧಿ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಸಾರ್ವತ್ರಿಕ ರಾಷ್ಟ್ರೀಯ ಮುಷ್ಕರದ ಅಂಗವಾಗಿ ರಾಜ್ಯಾದ್ಯಂತ ಕಾರ್ಮಿಕರು ಬೆಳಗ್ಗೆಯಿಂದಲೇ ಮುಷ್ಕರ ನಡೆಸುತ್ತಿದ್ದಾರೆ.
ಪೀಣ್ಯ, ದಾಬಸ್‌ಪೇಟೆ, ವೈಟ್‌ಫೀಲ್ಡ್, ಜಿಗಣಿ, ಬೊಮ್ಮಸಂದ್ರ, ರಾಜಾಜಿನಗರ ಸೇರಿ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿನ ಮಳೆಯ ನಡುವೆಯೇ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ.
ಸಾರ್ವತ್ರಿಕ ಮುಷ್ಕ್ರರದಲ್ಲಿ ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಹಿಂದ್ ಮಜ್ದೂರ್ ಸಭಾ (ಎಚ್‌ಎಂಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಟಿಯುಸಿ), ಟ್ರೇಡ್ ಯೂನಿಯನ್ ಸಮನ್ವಯ ಕೇಂದ್ರ (ಟಿಯುಸಿಸಿ), ಸ್ವ-ಉದ್ಯೋಗ ಮಹಿಳಾ ಸಂಘ (ಸೆವಾ), ಅಖಿಲ ಭಾರತ ಕೇಂದ್ರ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು), ಕಾರ್ಮಿಕ ಪ್ರಗತಿಪರ ಒಕ್ಕೂಟ (ಎಲ್‌ಪಿಎಫ್) ಮತ್ತು ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಯುಟಿಯುಸಿ) ಮುಂತಾದ ಸಂಘಟನೆಗಳು ಮತ್ತು ಅವುಗಳ ಸಮ್ಮಿಳಿತ ಸಂಘಟನೆಗಳು, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟದ ಕಾರ್ಯಕರ್ತರು ಪ್ರತಿಭಟನೆಗೆ ಸಾಕ್ಷಿಯಾಗಲಿದ್ದಾರೆ.