Take a fresh look at your lifestyle.

ಟೊಯೋಟಾ ಕಾರ್ಮಿಕರಿಗೆ ಜೆಸಿಟಿಯು ಬೆಂಬಲ

ಶಿವಶಂಕರ್, ವಿಜಯಬಾಸ್ಕರ್, ಮೀನಾಕ್ಷಿ ಸುಂದರಮ್ ,ಕಾಳಪ್ಪ, ಕೆ.ವಿ.ಭಟ್ ರವರನ್ನು ಒಳಗೊಂಡ ಜೆಸಿಟಿಯು ನಿಯೋಗ ಕಾರ್ಮಿಕರಿಗೆ ಬೆಂಬಲ ಸೂಚಿಸಿದರು. ಜೊತೆ ಟೊಯೋಟಾಗೆ ಆಟೋ ಬಿಡಿಭಾಗಗಳನ್ನು ಸರಬರಾಜು ಮಾಡುವ ಕಂಪನಿಗಳ ಕಾರ್ಮಿಕರು ಒಂದು ದಿನದ ಉಪವಾಸ ಆರಂಭಿಸಿದ್ದಾರೆ

0
post ad

ಬಿಡದಿ: ಟಿಕೆಎಂ ಆಡಳಿತ ಮಂಡಳಿ ನಡವಳಿಕೆ ಪತ್ರಕ್ಕೆ ಸಹಿ ಷರತ್ತು ಹಾಕಿ ಲಾಕ್ ಔಟ್ ತೆರವುಗೊಳಿಸಿರುವ ಕ್ರಮದ ವಿರುದ್ಧ ಕಾರ್ಮಿಕರು ಹೋರಾಟವನ್ನು ಮುಂದುವರೆಸಿದ್ದಾರೆ.
ಮ್ಯಾನೇಜ್ಮೆಂಟ್ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ಶಮನವಾಗದ ಹಿನ್ನಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ಕಾರ್ಮಿಕರಿಗೆ ಬೆಂಬಲ ಘೋಷಿಸಿದರು.
ಮುಂದೆ, ಕಾರ್ಮಿಕ ಸಂಘ ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಕಾರ್ಮಿಕ ಮುಖಂಡರು ವಿವರಿಸಿದರು.
ಟೊಯೋಟಾ  ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜೆಸಿಟಿಯು ನಿಯೋಗ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಶಿವಶಂಕರ್, ವಿಜಯಬಾಸ್ಕರ್, ಮೀನಾಕ್ಷಿ ಸುಂದರಮ್ ,ಕಾಳಪ್ಪ, ಕೆ.ವಿ.ಭಟ್ ಸೇರಿದಂತೆ ರಾಷ್ಟ್ರ, ರಾಜ್ಯ ಮಟ್ಟದ ಕಾರ್ಮಿಕ ಮುಖಂಡರು ಕಾರ್ಮಿಕರನ್ನು ಉದ್ದೇಶಿಸಿ ಭಾಷಣವನ್ನು ಮಾಡಿದರು.
ಜೆಸಿಟಿಯು ಸಂಚಾಲಕ ಕೆ.ವಿ.ಭಟ್ ಮಾತನಾಡಿ, ನಿರಂತರವಾಗಿ ಶೋಷಣೆ ಮಾಡುತ್ತಿರುವ ಆಡಳಿತ ಮಂಡಳಿಯ ನಡೆಯ ವಿರುದ್ಧ ಕಿಡಿಕಾರಿದರು. ಈ ತಿಂಗಳ 26 ರಂದು ರೈತ, ಕಾರ್ಮಿಕ, ದಲಿತ ಐಕ್ಯ ಸಮಿಯ ವತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಟಿಯುಸಿಸಿ ರಾಜ್ಯಾಧ್ಯಕ್ಷ ಜಿಆರ್ ಶಿವಶಂಕರ್ ಮಾತನಾಡಿ ದೇಶದಲ್ಲಿ ದುಡಿಯುವ ಶ್ರಮಿಕ ವರ್ಗ ಅನ್ಯಾಯಕ್ಕೆ ಒಳಗಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಮತ್ತು ಅಧಿಕಾರಿ ವರ್ಗ ನಿದ್ದೆ ಮಾಡುತ್ತಿದೆ. ಕಾರ್ಮಿಕ ಇಲಾಖೆ ಸಮಗ್ರ ತನಿಖೆ ನಡೆಸಿ ಸಮಸ್ಯೆಯನ್ನು ಬಗೆಹರಿಸದಿರುವುದು ದುರಂತ ಎಂದರು. ಜಪಾನೀಸ್ ಕಂಪನಿಗಳು ಕೇವಲ ದುಡ್ಡಿಗೋಸ್ಕರ ಇಲ್ಲಿ ಬಂದಿದ್ದಾರೆ. ನಮ್ಮ ಸಂಪತ್ತನ್ನು ಲೂಟಿ ಮಾಡಿ ದೇಶದ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕಿಡಿಕಾರಿದ ಶಿವಶಂಕರ್, ಟಿಕೆಎಂಇಯು ಮುಂದಿನ ಹೋರಾಟಕ್ಕೆ ಜೆಸಿಟಿಯು ಜೊತೆ ನಿಲ್ಲುವುದಾಗಿ ಭರವಸೆ ನೀಡಿದರು.
ಕಾ. ಕಾಳಪ್ಪ ಮಾತನಾಡಿ ಸರ್ಕಾರ ಉದ್ದಟತನ ಬಿಟ್ಟು ಬಿಕ್ಕಟ್ಟು ಶಮನಗೊಳಿಸಬೇಕೆಂದು ಆಗ್ರಹಿಸಿ, ಬಹುರಾಷ್ಟ್ರೀಯ ಕಂಪನಿಗಳು ದೇಶಿಯ ಕಾನೂನುಗಳನ್ನು ಹೇಗೆ ಉಲ್ಲಂಘಿಸುತ್ತಿವೆ ಎಂದು ಸವಿಸ್ತಾರವಾಗಿ ವಿವರಿಸಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ದೇಶಾದ್ಯಂತ ಹೋರಾಟ ನಡೆಯುತ್ತಿದ್ದರೆ ಮಧ್ಯಮಗಳಿಗೆ ಕಣ್ಣು ಕಾಣುತ್ತಿಲ್ಲ. ಮಾಧ್ಯಮಗಳು ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿವೆ. ಕಾರ್ಮಿಕರು, ರೈತರು ಬೀದಿಗೆ ಬಿದ್ದಿದ್ದಾರೆ. ಬಂಡವಾಳ ಶಾಹಿಗಳು, ರಾಜಕಾರಣಿಗಳು ಅಪವಿತ್ರ ಮೈತ್ರಿ ಮಾಡಿಕೊಂಡು ದೇಶವನ್ನು ಶೋಷಣೆ ಮಾಡುತ್ತಿವೆ ಎಂದರು. ಲಾಭಕ್ಕಾಗಿ ಮಾಲೀಕರು ಏನು ಬೇಕಾದರೂ ಮಾಡುತ್ತಾರೆ, ಆದರೆ ಕಾರ್ಮಿಕ ಸಂಘಟನೆಗಳು ಸದಾ ನಿಮ್ಮ ಜೊತೆ ಬೆಂಬಲವಾಗಿ ಇರುತ್ತವೆ ಎಂದರು.
ಕಾಂಗ್ರೆಸ್ ರೈತ ಮೋರ್ಚಾ ಅಧ್ಯಕ್ಷ ಸಚಿನ್ ಮಾತನಾಡಿ ಟಿಕೆಎಂ ಹೋರಾಟವು ದಾಖಲೆಯ ಪುಟ ಸೇರಲಿದೆ.
ಇಲ್ಲಿ ಕೆಲಸ ಮಾಡುತ್ತಿರುವ ಬಹತೇಕರು ರೈತರ ಮಕ್ಕಳೆ ಅಗಿದ್ದಾರೆ. ಅವರಿಗೆ ಅನ್ಯಾಯವಾದರೆ ನಾವು ಸುಮ್ಮನಿರುವುದಿಲ್ಲ, ಕಾರ್ಮಿಕರಿಗೆ ಕಾನೂನು ಸಲಹೆ ನೀಡುವುದಾಗಿ ಭರವಸೆ ನೀಡಿದರು.
HMS ನ ನಾಗನಾಥ ಮಾತನಾಡಿ, ವಿದೇಶಿ ಕಂಪನಿಗಳು ನಮ್ಮ ನೆಲ, ಜಲ ಬಳಸಿಕೊಂಡು ನಮಗೆ ಅನ್ಯಾಯ ಮಾಡುತ್ತಿವೆ. ಇವು ನಿಲ್ಲಬೇಕೆಂದರು. ರಾಜ್ಯಾದ್ಯಂತ ಎಲ್ಲಾ ಸಂಘಟನೆಗಳು ಟಿಕೆಎಂ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲಿವೆ ಎಂದರು.
GATWU ನ ಜಯರಾಮ್ ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ರಾಜಕೀಯ ದಿಗ್ಗಜರು ಇದ್ದರೂ ಬಿಕ್ಕಟು ಬಗೆಹರೆಯದೆ ಇರುವುದು ದುರಾದೃಷ್ಷಕರ ಎಂದರು. ಸಮಸ್ಯೆ ಬಗೆಹರೆಯುವವರೆಗೂ  ಹೋರಾಟ ಮುಂದುವರೆಸುವುದಾಗಿ ಹೇಳಿದರು.
ಎಐಟಿಯುಸಿಯ ವಿಜಯ್ ಭಾಸ್ಕರ್ ಮಾತನಾಡಿ, ಆಡಳಿತ ಮಂಡಳಿ ಸರ್ಕಾರ ಮತ್ತು ಸಚಿವರಿಗೆ ದಿಕ್ಕು ತಪ್ಪಿಸುತ್ತಾ, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾರ್ಮಿಕರನ್ನು ಅಮಾನತ್ತು ಮಾಡಿ ಕಾರ್ಮಿಕ ಸಂಘಕ್ಕೆ ಒತ್ತಡ ತರುತ್ತಿದ್ದಾರೆ. ಇದಕ್ಕೆಲ್ಲ ಕಾರ್ಮಿಕ ಎದೆಗುಂದುವುದು ಬೇಡ. ಟಿಕೆಎಂಇಯು ಹೋರಾಟವು ನ್ಯಾಯಸಮ್ಮತವಾಗಿದೆ ಎಂದರು.

ವಕೀಲರಾದ ಜಗದೀಶ್ ಆಗಮಿಸಿ ಕಾನೂನು ಸಲಹೆ ನೀಡಿ ಬೆಂಬಲ ನೀಡಿದರು.
ಕಾರ್ಮಿಕ ಇಂದಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯ ಆಡಳಿತ ಮಂಡಳಿಯ ಅಸಹಜ ಕಾರ್ಮಿಕ ವಿಧಾನಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಕಾರ್ಮಿಕ ಸಂಘದ ಸ್ವಾಭಿಮಾನಿ ಹೋರಾಟವು 68ನೇ ದಿನಕ್ಕೆ ಕಾಲಿಟ್ಟಿದೆ.
ಇನ್ನು, ಟಿಕೆಎಂ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಾ, ಕಂಪೆನಿಗೆ ಬಿಡಿ ಭಾಗಗಳನ್ನು ಸರಬರಾಜು ಮಾಡುವ ಕಂಪನಿಗಳ ಕಾರ್ಮಿಕರು ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು.

ಟಿಕೆಎಂಗೆ ಆಟೋ ಪಾರ್ಟ್ಸ್ ಸರಬರಾಜು ಮಾಡುವ ಕಂಪನಿಗಳಾದ ಡೆನ್ಸೋ, ಎಸ್ಟಿಟಿಐ, ಟಿಬಿಐ, ಟಿಟಿಐಎಪಿ ಕಂಪನಿಗಳ ಕಾರ್ಮಿಕರು ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿ ಕಾರ್ಮಿಕರಿಗೆ ಬೆಂಬಲ ಸೂಚಿಸಿದರು.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು  66 ಕಾರ್ಮಿಕರ ಅಮಾನತ್ತು, 68 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.