Take a fresh look at your lifestyle.

ಬೀದಿಗೆ ಬಿದ್ದ ಉದಯಟಿವಿ ನೌಕರರಿಗೆ ಸಂಘಟನೆಗಳ ಸಾಥ್

ಮುಂದಿನ ದಿನಗಳಲ್ಲಿ ಉದಯ ಟಿವಿ ಕಚೇರಿಯ ಮುಂದೆಯೇ ಬಹಿರಂಗ ಪ್ರತಿಭಟನೆಗೆ ರಾಜ್ಯಮಟ್ಟದ ಸಂಘಟನೆಗಳ ಕಾರ್ಯತಂತ್ರ

0
post ad

ಬೆಂಗಳೂರು : ದಕ್ಷಿಣ ಭಾರತದ ಜನಪ್ರಿಯ ಮನೋರಂಜನಾ ವಾಹಿನಿಗಳ ಸಂಸ್ಥೆಯಾದ ಉದಯ ಟಿವಿ ಮಾತೃ ಸಂಸ್ಥೆ ಸನ್ ಟಿವಿ ನೆಟ್‌ವರ್ಕ್ ವಿರುದ್ಧ ಅದರ ನೌಕರರೇ ಬೀದಿ ಇಳಿದು ಹೋರಾಟ ಮಾಡುತ್ತಿದ್ದು, ಅವರ ಬೆಂಬಲಕ್ಕೆ ರಾಷ್ಟ್ರಮಟ್ಟ ಹಾಗೂ ರಾಜ್ಯಮಟ್ಟದ ಸಂಘಟನೆಗಳು ನಿಂತಿವೆ.
ಇತ್ತೀಚೆಗೆ ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದ ಉದಯ ಟಿವಿ ನೌಕರರಿಗೆ ರಾಜಕೀಯ ಪಕ್ಷಗಳು ಸೇರಿದಂತೆ ಹಲವು ಕನ್ನಡ ಪರ-ರೈತ-ದಲಿತ-ಕಾರ್ಮಿಕ ಸಂಘಟನೆಗಳು ಬೆಂಬಲ ಘೋಷಿಸಿದವು.
ಸನ್ ಟಿವಿ ನೆಟ್‌ವರ್ಕ್ ನ ಅಂಗ ಸಂಸ್ಥೆಯಾದ ಉದಯ ಟಿವಿ ಆಡಳಿತ ಮಂಡಳಿ‌ ಕಾರ್ಮಿಕ ವಿರೋಧಿ ನೀತಿ ಅನುಸರಿಸುತಮುಂದಿನಹತ್ತಾರು ವರ್ಷಗಳಿಂದ ಬೋನಸ್, ತುಟ್ಟಿ ಭತ್ಯೆಗಳನ್ನು ನೀಡುತ್ತಿಲ್ಲ ಎಂದು ಆರೋಪಿಸುತ್ತ, ಸಂಸ್ಥೆ ತಕ್ಷಣವೇ ಶಾಸನಾತ್ಮಕ ಮೂಲಭೂತ ಸವಲತ್ತುಗಳನ್ನು ಕಲ್ಪಿಸಬೇಕೆಂದು, ಕಾನೂನುಬಾಹಿರವಾದ, ಪ್ರತೀಕಾರದ ವರ್ಗಾವಣೆಯನ್ನು ರದ್ದುಗೊಳಿಸಿ, ಸಿಬ್ಬಂದಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದರು. ಇಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಗೆ ಐಕ್ಯ ಹೋರಾಟದ ಸಮಿತಿಯ ಬಹುತೇಕ ಸಂಘಟನೆಗಳು ಬೆಂಬಲ ಘೋಷಿಸಿದವು.
ಈ ವೇಳೆ ಮಾತನಾಡಿದ್ದ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಜನಪ್ರಿಯ ವಾಹಿನಿಯಾಗಿರುವ ಉದಯ ಟಿವಿಗೆ ಕಾರ್ಮಿಕರ ಪರವಾಗಿ ಪತ್ರವನ್ನು ಬರೆಯುತ್ತೇನೆ, ನವದೆಹಲಿಯಲ್ಲಿ ದಯಾನಿಧಿ ಮಾರನ್ ರನ್ನು ಬೇಟಿಯಾದಾಗ ಅವರ ಗಮನಕ್ಕೂ ಕಾರ್ಮಿಕರ ಬಿಕ್ಕಟ್ಟುನ್ನು ತರುತ್ತೇನೆ ಎಂದರು. ಇನ್ನು ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್ ಮಾತನಾಡುತ್ತ, ತಕ್ಷಣವೇ ಉದಯಟಿವಿ ಆಡಳಿತ ತನ್ನ ಧೋರಣೆಯನ್ನು ಬದಲಿಸಿಕೊಂಡು ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದರು.
ಆರ್ ಪಿಐ ಪಕ್ಷದ ಮುಖಂಡ ಮೋಹನ್ ರಾಜ್ ಮಾತನಾಡಿ ಆಡಳಿತ ಮಂಡಳಿ ಅನುಸರಿಸುತ್ತಿರುವ ಕಾರ್ಮಿಕ ತಾರತಮ್ಯ ನೀತಿಯನ್ನು ಖಂಡಿಸಿದರು.
ಉದಯ ಟಿವಿ ಮ್ಯಾನೇಜ್ಮೆಂಟ್ ತನ್ನ ನೌಕರರಿಗೆ ಮಾಡುತ್ತಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಮಿಕ ಒಕ್ಕೂಟಗಳು ಮತ್ತು ಕನ್ನಡ ಪರ-ದಲಿತ-ರೈತ ಸಂಘಟನೆಗಳ ಸಹಯೋಗದೊಂದಿಗೆ ಸಂಸ್ಥೆಯ ಮುಂದೆಯೇ ಬಹಿರಂಗ ಪ್ರತಿಭಟನೆಯನ್ನು ಮಾಡಲು ಮುಂದಾಗುತ್ತೇವೆ ಎಂದು ಟಿಯುಸಿಸಿ ರಾಜ್ಯಾಧ್ಯಕ್ಷ ಜಿ.ಆರ್. ಶಿವಶಂಕರ್ ‘ವಾಯ್ಸ್ ಆಫ್ ವರ್ಕರ್ಸ್’ಗೆ ಹೇಳಿಕೆಯನ್ನು ನೀಡಿದರು.
ಆಡಳಿತ ಮಂಡಳಿ ಮಾಡಿರುವ ವರ್ಗಾವಣೆ ಕಾನೂನುಬಾಹಿರವೆಂದು ಆರೋಪಿಸುತ್ತ, ಕನ್ನಡಿಗರಿಗೆ ಬೆಂಗಳೂರು ಕೇಂದ್ರದಲ್ಲಿಯೇ ಕೆಲಸವನ್ನು ನೀಡಬೇಕೆಂದು ಆಗ್ರಹಿಸಿ ನೌಕರರು ಹಲವು ದಿನಗಳಿಂದ ಪ್ರತಿಭಟನೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.