Take a fresh look at your lifestyle.

ಕಾರ್ಮಿಕ ಇಲಾಖೆಯ ಅಣಕು ಶವಯಾತ್ರೆ

ಕಾರ್ಮಿಕ ಇಲಾಖೆಯಲ್ಲಿನ ಅಧಿಕಾರಿಗಳ ಭ್ರಷ್ಟಾಚಾರ, ಅಪ್ರಾಮಾಣಿಕತೆಗಳಿಂದ ಕಾನೂನು ರೀತ್ಯಾ ಕಾರ್ಮಿಕರಿಗೆ ದೊರೆಯಬೇಕಿರುವ ಸವಲತ್ತುಗಳು ದೊರೆಯುತ್ತಿಲ್ಲವೆಂದು ಆರೋಪಿಸಿ ಟಿಯುಸಿಸಿ ಕಾರ್ಮಿಕ ಸಂಘಗಳು ಕಾರ್ಮಿಕ ಭವನದ ಎದುರು ಕಾರ್ಮಿಕ ಇಲಾಖೆಯ ಅಣಕು ಶವಯಾತ್ರೆ ನಡೆಸಿದವು

0
post ad

ಬೆಂಗಳೂರು : ಕಾರ್ಮಿಕ ಇಲಾಖೆಯು ಕಾರ್ಮಿಕರ ಪರ ತೋರುತ್ತಿರುವ ನಿರ್ಲಕ್ಷ್ಯತನ, ಅಸಮರ್ಪಕ ವಿಲೇವಾರಿ, ಅಧಿಕಾರಿಗಳ ಬೇಜವಾಬ್ದಾರಿತನವನ್ನು ಖಂಡಿಸುತ್ತಾ ಟಿಯುಸಿಸಿ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯ ಅಣಕು ಶವಯಾತ್ರೆ ನಡೆಯಿತು.

)
ಕಾರ್ಮಿಕ ಇಲಾಖೆಯಲ್ಲಿನ ಅಧಿಕಾರಿಗಳ ಭ್ರಷ್ಟಾಚಾರ, ಅಪ್ರಾಮಾಣಿಕತೆಗಳಿಂದ ಕಾನೂನು ರೀತ್ಯಾ ಕಾರ್ಮಿಕರಿಗೆ ದೊರೆಯಬೇಕಿರುವ ಸವಲತ್ತುಗಳು ದೊರೆಯುತ್ತಿಲ್ಲವೆಂದು ಆರೋಪಿಸಿ ಟ್ರೇಡ್ ಯೂನಿಯನ್ ಕೋ-ಆರ್ಡಿನೇಷನ್ ಸೆಂಟರ್ ನ ಸಮ್ಮಿಳಿತದ ಕಾರ್ಮಿಕ ಸಂಘಗಳು, ಕಾರ್ಮಿಕರು ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕ ಭವನದ ಎದುರು ಕಾರ್ಮಿಕ ಇಲಾಖೆಯ ಅಣಕು ಶವಯಾತ್ರೆ ನಡೆಸಿದರು.


ಟಿಯುಸಿಸಿನ ರಾಜ್ಯಾಧ್ಯಕ್ಷ ಜಿ ಆರ್ ಶಿವಶಂಕರ್ ರವರ ನೇತೃತ್ವದಲ್ಲಿ ಕೈಗೊಂಡಿದ್ದ ಈ ಅಣಕು ಶವ ಯಾತ್ರೆಯಲ್ಲಿ ಬೋನಸ್, ತುಟ್ಟಿಭತ್ಯೆ ನಂತಹ ಮೂಲ ಸವಲತ್ತುಗಳ ವಂಚಿತ ಕಾರ್ಮಿಕರು ಪಾಲ್ಗೊಂಡಿದ್ದರು.
ಹಲವು ವರ್ಷಗಳಿಂದ ಕಾರ್ಮಿಕ ಇಲಾಖೆಯಲ್ಲಿ ದೂರುಗಳನ್ನು ನೀಡಿದ್ದರು, ಅವುಗಳನ್ನು ಇತ್ಯರ್ಥಪಡಿಸದ ಇಲಾಖೆಯು ಇದ್ದರೂ ಸತ್ತಂತೆ ಎಂದು ಭಾವಿಸಿದ ಕಾರ್ಮಿಕರು ತಮ್ಮ ಆಕ್ರೋಶವನ್ನು ಹೊರಹಾಕಲು ಮತ್ತು ಇಲಾಖೆಯ ಅಧಿಕಾರಿಗಳನ್ನು ಸರಿ ದಾರಿಗೆ ತರಲು ಈ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಆರ್ ಶಿವಶಂಕರ್ ವಾಯ್ಸ್ ಆಫ್ ವರ್ಕರ್ಸ್ ಗೆ ತಿಳಿಸಿದರು.
ಕಾರ್ಮಿಕ ಇಲಾಖೆ ಮತ್ತು ಇನ್ಸ್ ಪೆಕ್ಟರ್ ಆಫ್ ಬಾಯ್ಲರ್ಸ್ ಇಲಾಖೆಯಲ್ಲಿ ಅಧಿಕಾರಿಗಳು ಮಾಲೀಕರ ಪರವಾಗಿಯೇ ನಿಲ್ಲುತ್ತಾರೆ ಕಾರ್ಮಿಕರನ್ನು ಬೀದಿ ಪಾಲು ಮಾಡುತ್ತಾರೆ, ಕಾರ್ಮಿಕರ ಸಮಸ್ಯೆಗಳನ್ನು ವರ್ಷಾನುಗಟ್ಟಲೇ ಇತ್ಯರ್ಥಪಡಿಸದೇ ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಾರೆ. ಅಧಿಕಾರಿಗಳಲ್ಲಿ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ. ಕಿರಿಯ ಅಧಿಕಾರಿಗಳ ಶಿಪಾರಸ್ಸುಗಳನ್ನು ಹಿರಿಯ ಅಧಿಕಾರಿಗಳು ಪರಿಗಣಿಸದೇ ಕಾರ್ಮಿಕರ ಸಮಸ್ಯೆಗಳ ಮೇಲೆ ಸಮಾದಿ ಕಟ್ಟುತ್ತಾರೆ ಎಂದು ಕಾರ್ಮಿಕ ಮುಖಂಡ ಶಿವಶಂಕರ್ ಆರೋಪಿಸಿದರು.