Take a fresh look at your lifestyle.

ಸಾರಿಗೆ ನೌಕರರ ಮುಷ್ಕರ ಅಂತ್ಯ, ಬಸ್ ಸಂಚಾರ ಆರಂಭ

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಬಂಧಿಸಿದಂತೆ ಯೂನಿಯನ್ ನಾಯಕರೊಂದಿಗೆ ಸರ್ಕಾರ ನಡೆಸುತ್ತಿರುವ ಮಾತುಕತೆಯನ್ನು ಬಹುತೇಕ ಯಶಸ್ವಿಯಾಗಿದ್ದು, ಇಂದಿನಿಂದ ಸಾರಿಗೆ ಸಂಚಾರ ಸುಗಮವಾಗಲಿದೆ

0
post ad

ಬೆಂಗಳೂರು : ಸರ್ಕಾರಿ ನೌಕರರ ಸ್ಥಾನಮಾನಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಿಬ್ಬಂದಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಅಂತ್ಯಗೊಂಡಿದೆ. ಈ ಬಗೆಗೆ ರೈತ ಮುಖಂಡ, ಸಾರಿಗೆ ಒಕ್ಕೂಟಗಳ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ನೌಕರರ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದ ಪ್ರತಿಭಟನೆಯನ್ನು ನೌಕರರು ವಾಪಸ್ ಪಡೆದುಕೊಂಡಿದ್ದಾರೆ.

ಕೆಲ ನಾಟಕೀಯ ಬೆಳವಣಿಗೆಗಳ, ಹಲವು ಸುತ್ತು ಮಾತುಕತೆಗಳ ನಡುವೆ ಸರ್ಕಾರ ಮತ್ತು ನೌಕರರ ಯೂನಿಯನ್ ಗಳ ನಾಯಕರ ನಡುವಿನ ಸಂಧಾನ ಕೊನೆಗೆ ಯಶಸ್ವಿಯಾಗಿದೆ.
ಸಾರಿಗೆ ನೌಕರರ ಮುಷ್ಕರ ಕುರಿತು ವಿಕಾಸಸೌಧದಲ್ಲಿ ನಡೆದ ಸಭೆಯ ನಡವಳಿಗಳ ವಿವರ…


ನಿಗಮದ ಸಿಬ್ಬಂದಿಗೆ ಆರೋಗ್ಯ ಸಂಜೀವಿನಿ ಯೋಜನೆ ಅನ್ವಯ,
ವೇತನ ಪರಿಷ್ಕರಣೆಗೆ ಸಮಯಾವಕಾಶ, ಅಂತರ್ ನಿಗಮ ವರ್ಗಾವಣೆಗೆ ನೀತಿ ರಚನೆ, ಕೋವಿಡ್‌ನಿಂದ ಮೃತಪಟ್ಟವರಿಗೆ 30 ಲಕ್ಷ ಪರಿಹಾರ, ಸಿಬ್ಬಂದಿಯ ತರಬೇತಿ ಅವಧಿ ಎರಡು ವರ್ಷಗಳಿಂದ ಒಂದು ವರ್ಷಕ್ಕೆ ಇಳಿಕೆ, ಮೇಲಾಧಿಕಾರಿಗಳ ಕಿರುಕುಳ ನಿಯಂತ್ರಣಕ್ಕೆ ಮಾರ್ಗದರ್ಶನ, ಪರಿಣಾಮಕಾರಿ ಹೆಚ್ಆರ್ ಎಂಎಸ್ ಅನುಷ್ಟಾನಕ್ಕೆ ಸಮ್ಮತಿ ಸೇರಿದಂತೆ ಮಹತ್ವದ ಕೆಲವು ಬೇಡಿಕೆಗಳ ಈಡೇರಿಕೆಗಳಿಗೆ ಸರ್ಕಾರ ಒಪ್ಪಿಕೊಂಡಿದ್ದು, ಸರ್ಕಾರಿ ನೌಕರರ ಸ್ಥಾನಮಾನಕ್ಕೆ ಮಾತ್ರದ ಸರ್ಕಾರ ಒಪ್ಪಿಲ್ಲ. ಆದರೂ ಸಾರಿಗೆ ನೌಕರರು ಮುಷ್ಕರ ಅಂತ್ಯಗೊಳಿಸಲು ಸಮ್ಮತಿ ಸೂಚಿಸಿದ್ದು, ಕರ್ತವ್ಯಕ್ಕೆ ಹಾಜರಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿಎಂಟಿಸಿ ಜೊತೆಗೆ ಇತರೆ ಮೂರು ಸಾರಿಗೆ ನಿಗಮಗಳಾದ ಕೆಎಸ್‍ಆರ್ ಟಿಸಿ, ವಾಯುವ್ಯ ಸಾರಿಗೆ ನಿಗಮ ಹಾಗೂ ನೈರುತ್ಯ ಸಾರಿಗೆ ನಿಗಮಗಳ ನೌಕರರು ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ.
ಕೆಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ನಿಗಮಗಳಲ್ಲಿ ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಜನ ಕಾರ್ಯನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಸದನದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡುತ್ತಾ, ರಾಜ್ಯ ಸರ್ಕಾರ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದರಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.