Take a fresh look at your lifestyle.

ಸಾರಿಗೆ ನೌಕರರ ಮುಷ್ಕರದಿಂದ ಇಂದು ಬಿಎಂಟಿಸಿ ಸ್ತಬ್ಧ

ಬಿಎಂಟಿಸಿ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಕೆಎಸ್‍ಆರ್ ಟಿಸಿ, ವಾಯುವ್ಯ ಸಾರಿಗೆ ಹಾಗೂ ನೈರುತ್ಯ ಸಾರಿಗೆ ನಿಗಮ ವ್ಯಾಪ್ತಿಯ ಬಸ್ ಗಳು ಇಂದು ಬಾಗಶಃ ರಸ್ತೆಗೆ ಇಳಿಯುವುದು ಅನುಮಾನವಾಗಿದೆ.

0
post ad

ಬೆಂಗಳೂರು : ರಾಜ್ಯ ಸಾರಿಗೆ ಸಿಬ್ಬಂದಿಗೆ ಸರ್ಕಾರಿ ನೌಕರರ ಸ್ಥಾನಮಾನ ಕಲ್ಪಿಸಬೇಕೆಂದು ಒತ್ತಾಯಿಸಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರವು ಇಂದೂ ಮುಂದುವರೆಯಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಸೇರಿದಂತೆ, ಇತರೆ ಯುನಿಯನ್ ನಾಯಕರು ಈ ಬಗೆಗೆ ಸಾಮಾಜಿಕ ಮಾಧ್ಯಮಗಳ ಮೂಲಕ ದೃಡಪಡಿಸಿದ್ದಾರೆ.
ಸಾರಿಗೆ ನೌಕರರು ಅನಿರ್ದಿಷ್ಟಾವಧಿವರೆಗೂ ಮುಷ್ಕರವನ್ನು ಹಮ್ಮಿಕೊಂಡಿದ್ದು, ಸರ್ಕಾರಿ ನೌಕರರ ಸ್ಥಾನಮಾನ ಸೇರಿದಂತೆ, ಇತರೆ ಬೇಡಿಕೆಗಳು ಈಡೇರಿಕೆಯಾಗುವ ತನಕ
ಮುಷ್ಕರ ಮುಂದುವರೆಯುತ್ತದೆ ಎಂದು ನೌಕರರ ಒಕ್ಕೂಟಗಳು ಹೇಳುತ್ತಿವೆ. ನೌಕರರನ್ನ ಕೊರೋನಾ ವಾರಿಯರ್ಸ್‌ ಎಂದು ಪರಿಗಣಿಸಿರುವುದನ್ನು ಕೆಲ ಯೂನಿಯನ್ ಗಳು ಸ್ವಾಗತಿಸಿವೆ.
ಕೆಲ ಯೂನಿಯನ್ ಗಳನ್ನು ಬಿಟ್ಟು, ಸಾರಿಗೆ ಸಚಿವರು ಸಭೆ ನಡೆಸಿರುವುದೇ ಒಂದು ಬಣದ ಕೋಪಕ್ಕೆ ಕಾರಣವೆಂದು ತಿಳಿಯುತ್ತಿದೆ.
ಇಂದು ಸಹ ಬೆಂಗಳೂರಿನಲ್ಲಿ ಬಹುತೇಕ ಬಿಎಂಟಿಸಿ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಅವಲಂಭಿಸುವುದು ಸೂಕ್ತವಾಗಿದೆ.
ಬಿಎಂಟಿಸಿ ಜೊತೆಗೆ ಇತರೆ ಮೂರು ಸಾರಿಗೆ ನಿಗಮಗಳಾದ ಕೆಎಸ್‍ಆರ್ ಟಿಸಿ, ವಾಯುವ್ಯ ಸಾರಿಗೆ ನಿಗಮ ಹಾಗೂ ನೈರುತ್ಯ ಸಾರಿಗೆ ನಿಗಮದ ನೌಕರರು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸುವುದರಿಂದ ರಾಜ್ಯಾದ್ಯಂತ ಸಾರಿಗೆ ಸಂವಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳು ದಟ್ಟವಾಗಿದೆ.
ಕೆಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ನಿಗಮಗಳಲ್ಲಿ ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಜನ ಕಾರ್ಯನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಸದನದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡುತ್ತಾ, ರಾಜ್ಯ ಸರ್ಕಾರ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದರಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲಿಂದ ಹೊತ್ತಿಕೊಂಡ ಸಾರಿಗೆ ಸಿಬ್ಬಂದಿಯ ಕಿಚ್ಚು ಇಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ದಾರಿಯಾಗಿದೆ.
ಒಟ್ಟಾರೆ, ನೌಕರರ ಒಕ್ಕೂಟಗಳ ನಡುವೆ ಸಾಮರಸ್ಯ ಕೊರತೆ ಕಾಡುತ್ತಿರುವುದರಿಂದ ಹೋರಾಟದ ಹಾದಿಯ ಸುಗಮದ ಬಗೆಗೆ ಸಂಶಯಗಳು ಕಾಡತೊಡಗಿವೆ.