Take a fresh look at your lifestyle.

ಸಾರಿಗೆ ನೌಕರರ ಮುಷ್ಕರ ಅಂತ್ಯ ಮತ್ತೆ ಆರಂಭ

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರವು ಸಾರಿಗೆ ಸಚಿವ ಮತ್ತು ಯೂನಿಯನ್ ನಾಯಕರ ನಡುವೆ ನಡೆದ ಸಂಧಾನದ ನಂತರ ಅಂತ್ಯಗೊಂಡಿದ್ದು, ನಿಗಮಗಳ ಸಿಬ್ಬಂದಿ ವರ್ಗ ಈ ರಾತ್ರಿಯಿಂದಲೇ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇತ್ತು.

0
post ad

ಬೆಂಗಳೂರು : ಸರ್ಕಾರಿ ನೌಕರರ ಸ್ಥಾನಮಾನ ಹೊರತುಪಡಿಸಿ ರಾಜ್ಯ ಸಾರಿಗೆ ಸಿಬ್ಬಂದಿ ಒತ್ತಾಯಿಸಿದ್ದ ಕೆಲ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪಿಕೊಂಡಿದ್ದರಿಂದ ಸಾರಿಗೆ ನೌಕರರು ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿತ್ತು, ಆದರೆ ನೌಕರರು ಮತ್ತೆ ಮುಷ್ಕರವನ್ನು ಮುಂದುವರೆಸಿದ್ದಾರೆ.
ಸಾರಿಗೆ, ಕಂದಾಯ ಸಚಿವರ ಜೊತೆ ನಡೆದ ಚರ್ಚೆಯ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ವಿಕಾಸ ಸೌಧದ ಬಳಿಮುಷ್ಕರ ಅಂತ್ಯದ ಬಗೆಗೆ ಸುಳಿವು ನೀಡಿದ್ದರು, ಆದರೆ, ಸ್ವಾತಂತ್ರ್ಯ ಉದ್ಯಾನವನದ ಪ್ರತಿಭಟನಾ ಸ್ಥಳದಲ್ಲಿ ಮುಷ್ಕರ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ. 

ಸತ್ಯಾಗ್ರಹ ನಿರತ ಯೂನಿಯನ್ ನಾಯಕರ ಜೊತೆ ಸರ್ಕಾರ ನಡೆಸಿದ ಮಾತುಕತೆ ಬಹುತೇಕ ಯಶಸ್ವಿಯಾಗಿದೆ ಎನ್ನಲಾಗಿತ್ತು.

ನಿಗಮದ ಸಿಬ್ಬಂದಿಗೆ ಆರೋಗ್ಯ ಸಂಜೀವಿನಿ ಯೋಜನೆ ಅನ್ವಯನಿಗಮದ ಸಿಬ್ಬಂದಿಗೆ ಆರೋಗ್ಯ ಸಂಜೀವಿನಿ ಯೋಜನೆ ಅನ್ವಯ, ವೇತನ ಪರಿಷ್ಕರಣೆಗೆ ಸಮಯಾವಕಾಶ, ಅಂತರ್ ನಿಗಮ ವರ್ಗಾವಣೆಗೆ ಸಮಿತಿ ರಚನೆ, ಕೋವಿಡ್‌ನಿಂದ ಮೃತಪಟ್ಟವರಿಗೆ 30 ಲಕ್ಷ ಪರಿಹಾರ, ಸಿಬ್ಬಂದಿಯ ತರಬೇತಿ ಅವಧಿ ಎರಡು ವರ್ಷಗಳಿಂದ ಒಂದು ವರ್ಷಕ್ಕೆ ಇಳಿಕೆ ಸೇರಿದಂತೆ ಮಹತ್ವದ ಕೆಲವು ಬೇಡಿಕೆಗಳ ಈಡೇರಿಕೆಗಳಿಗೆ ಸರ್ಕಾರ ಒಪ್ಪಿಕೊಂಡಿತ್ತು.
ಬಿಎಂಟಿಸಿ ಜೊತೆಗೆ ಇತರೆ ಮೂರು ಸಾರಿಗೆ ನಿಗಮಗಳಾದ ಕೆಎಸ್‍ಆರ್ ಟಿಸಿ, ವಾಯುವ್ಯ ಸಾರಿಗೆ ನಿಗಮ ಹಾಗೂ ನೈರುತ್ಯ ಸಾರಿಗೆ ನಿಗಮಗಳ ಕೆಲ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ನಂತರದಲ್ಲಿ ಕರ್ತವ್ಯಕ್ಕೆ ಗೈರಾಗಿ ಮುಷ್ಕರವನ್ನು ಮುಂದುವರೆಸುವಂತೆ ಚಂದ್ರಶೇಖರ್ ಹೇಳಿಕೆ ನೀಡಿದರು.

ಕೆಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ನಿಗಮಗಳಲ್ಲಿ ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಸದನದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡುತ್ತಾ, ರಾಜ್ಯ ಸರ್ಕಾರ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದರಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸಂಧಾನದ ನಂತರವೂ ಸಚಿವರು ಇದೆ ಮಾತುಗಳನ್ನು ಹೇಳಿದ್ದಾರೆ. ಈ ಕಾರಣಕ್ಕೆ ಮುಷ್ಕರವನ್ನು ನೌಕರರು ಮುಂದುವರೆಸಿದ್ದಾರೆ