Take a fresh look at your lifestyle.

ಕಿರ್ಲೋಸ್ಕರ್ ಎಲೆಕ್ಟ್ರಿಕಲ್ಸ್ ನ ಕಾರ್ಮಿಕ ಅನುಚಿತ ಖಂಡಿಸಿ ಕಾರ್ಮಿಕ ಭವನದ ಎದುರು ಪ್ರತಿಭಟನೆ

ಅಕ್ರಮ ಲೇ ಆಪ್, ರೆಟ್ರೆಂಚ್ಮೆಂಟ್, ದುಡಿದ ವೇತನ ಪಾವತಿ ಮಾಡದಿರುವ ವಿರುದ್ಧ ಹೋರಾಟಕ್ಕೆ ಕರೆ ನೀಡಲಾಗಿದೆ

0
post ad

ಬೆಂಗಳೂರು : ಕಿರ್ಲೋಸ್ಕರ್ ಎಲೆಕ್ಟ್ರಿಕಲ್ಸ್ ಆಡಳಿತವರ್ಗದ ಕಾರ್ಮಿಕ ಅನುಚಿತ ನೀತಿ ವಿರೋಧಿಸಿ ಕಾರ್ಮಿಕ ಆಯುಕ್ತರ ಕಚೇರಿಯ ಎದುರು ಪ್ರತಿಭಟನೆಗೆ ಕರೆ ನೀಡಲಾಗಿದೆ. ಕಿರ್ಲೋಸ್ಕರ್ ಎಲೆಕ್ಟ್ರಿಕಲ್ಸ್ ಆಡಳಿತ ಮಂಡಳಿಯ ವಿರುದ್ಧ ನಿರಂತರ ಕಾನೂನು ಹಾಗು ಐಕ್ಯ ಹೋರಾಟವನ್ನು ಮುಂದುವರಿಸಲು ಕಂಪನಿಯ ಕಾರ್ಮಿಕ ಸಂಘಟನೆಯ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಿಐಟಿಯು ಸಮ್ಮಿಳಿತ ಕಾರ್ಮಿಕ ಸಂಘಟನೆಯಾದ ಕಿರ್ಲೋಸ್ಕರ್ ಎಲೆಕ್ಟ್ರಿಕಲ್ಸ್ ಕಾರ್ಮಿಕ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಂಸ್ಥೆಯ ಅಕ್ರಮ ಲೇ ಆಪ್, ರೆಟ್ರೆಂಚ್ಮೆಂಟ್, ದುಡಿದ ವೇತನ ಪಾವತಿ ಮಾಡದಿರುವ ವಿರುದ್ಧ ಹೋರಾಟಕ್ಕೆ ಕರೆ ನೀಡಲಾಗಿದ್ದು, ಜನವರಿ 8ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕ ಭವನದ ಬಳಿ ಮಧ್ಯಾಹ್ನ 3 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಬಂಡವಾಳಗಾರ ಪರವಾದ ಕಾರ್ಮಿಕ ಕಾನೂನುಗಳ ತಿದ್ದುಪಡಿ, ಕಾನೂನು ಉಲ್ಲಂಘನೆ ಮಾಡುವ ಕಿರ್ಲೋಸ್ಕರ್ ಎಲೆಕ್ಟ್ರಿಕಲ್ಸ್ ಆಡಳಿತ ವರ್ಗ ಸೇರಿದಂತೆ ಎಲ್ಲಾ ಮಾಲಿಕರ ಮೇಲೆ ಕ್ರಮ ವಹಿಸಲು ಒತ್ತಾಯಿಸಿ ಹಾಗು ಕಾರ್ಮಿಕರ ಹಕ್ಕುಗಳ ರಕ್ಷಣೆ ಒತ್ತಾಯಿಸಿ ಕಾರ್ಮಿಕ ಆಯುಕ್ತರ ಕಚೇರಿ ಎದುರು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ಸಿಐಟಿಯು ಕಾರ್ಮಿಕ ಒಕ್ಕೂಟ ತೀರ್ಮಾನ ತೆಗೆದುಕೊಂಡಿದೆ.