ಸಾರಿಗೆ ನೌಕರರ ವಿಚಾರದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕೋಡಿಹಳ್ಳಿ
ರಾಜ್ಯದಲ್ಲಿ ಮತ್ತೆ ಬಸ್ ಸಂಚಾರ ಸ್ಥಗಿತ ವಾಗುತ್ತಾ..! ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಎಚ್ಚರಿಕೆ.. 9 ಬೇಡಿಕೆಗಳಲ್ಲಿ ಸರ್ಕಾರ 5 ಬೇಡಿಕೆ ಈಡೇರಿಸಿದೆ ಆದರೆ ಅವು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ


ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನೌಕರರ ವಿವಿಧ 9 ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಮತ್ತೆ ಸಾರಿಗೆ ಸಂಚಾರ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಸಂಬಂಧ ಇಂದು ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ಉದ್ದಶಿಸಿ ಮಾತನಾಡಿದ ಸಾರಿಗೆ ನೌಕರರ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಸರ್ಕಾರಿ ನೌಕರರನ್ನಾಗಿ ಮಾಡಿ ಎಂಬ ಬೇಡಿಕೆಯನ್ನ ಕೈಬಿಟ್ಟು, ಆರನೇ ವೇತನ ಆಯೋಗದ ಪ್ರಕಾರ ಸಂಬಳ ನೀಡೋದಾಗಿ ಹೇಳಿತ್ತು. ಮೂರು ತಿಂಗಳ ಗಡುವು ಮಾರ್ಚ್ 15 ಕ್ಕೆ ಮುಗಿಯಲಿದೆ. ಮತ್ತೊಮ್ಮೆ ಸರ್ಕಾರಕ್ಕೆ ನೆನಪು ಮಾಡ್ತಾಯಿದ್ದಿವಿ. 5 ಬೇಡಿಕೆಗಳನ್ನ ಈಡೇರಿಸುವಂತೆ ನಾಲ್ಕು ನಿಗಮ ಎಂಡಿಗಳಿಗೆ ಸರ್ಕಾರ ಆದೇಶ ಮಾಡಿತ್ತು. ಆದ್ರೆ ಯಾವುದು ಕೂಡ ಜಾರಿಗೆ ಬಂದಿಲ್ಲ. ಹಾಗಾಗಿ ಮಾರ್ಚ್ 15 ರೊಳಗೆ ಸರ್ಕಾರ ಬೇಡಿಕೆ ಈಡೇರಿಸುವಂತೆ ನೆನಪು ಮಾಡ್ತಿದ್ದಿವಿ ಎಂದರು. ಇಲ್ಲದಿದ್ದರೆ ಮಾರ್ಚ್ 16 ರಿಂದ ಪ್ರತಿಭಟನೆ ಮಾಡುವ ಅನಿವಾರ್ಯ ಇದೆ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನ್ಯಾಯ ಕೇಳುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೂ ಇದೆ. ಹೋರಾಟಗಾರರನಾಗಿ ನೌಕರರ ಸಮಸ್ಯೆ ವಿರುದ್ದ ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ. ಸರ್ಕಾರ ಹೊರಾಟವನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕಾವೇರಿ ಹೋರಾಟ ಮಾಡುವಾಗ ಜಲತಜ್ಞ ರೂ ಕೂಡ ಹೋರಾಟದಲ್ಲಿದ್ರು. ಹಾಗಂದ ಮಾತ್ರಕ್ಕೆ ಅವರಿಗೂ , ಸಮಸ್ಯೆಗೂ ಸಂಬಂಧವಿಲ್ಲ ಅನ್ನೋಕಾಗಲ್ಲ. ಇದರಲ್ಲಿ ಸರ್ಕಾರದ ದುರ್ಬಲತೆ ಕಾಣ್ತಾಯಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ಮಾಡಿದ್ರು.
ಮೂರು ತಿಂಗಳ ಒಳಗೆ 9 ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಸರ್ಕಾರ ಇದುವರೆಗೆ 5 ಬೇಡಿಕೆಗಳನ್ನು ಮಾತ್ರ ಈಡೇರಿಸಿದೆ. ಆದ್ರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನು 4 ಬೇಡಿಕೆಗಳನ್ನು ಈಡೇರಿಸಲು ಮಿನ-ಮೇಷ ಎಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಕೋವಿಡ್- 19 ಸೋಂಕು ತಗಲಿ ಮೃತಪಟ್ಟ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಬೇಕು. ಅಂತರ್ ನಿಗಮ ವರ್ಗಾವಣೆಗೆ ಅವಕಾಶ ನೀಡಬೇಕು. ತರಬೇತಿ ಅವಧಿಯ ನ್ನ ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಕೆ ಮಾಡಬೇಕು. ಕಿರುಕುಳ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕಮಿಟಿ ರಚನೆ ಮಾಡಬೇಕು. ಆರನೇ ವೇತನ ಆಯೋಗ ಜಾರಿ ಮಾಡಬೇಕು. ಎನ್ ಐ ಎನ್ ಸಿ ವ್ಯವಸ್ಥೆ ಜಾರಿ ಮಾಡಬೇಕು. ಸಾರಿಗೆ ನಿಗಮದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ಗೆ ಎಚ್ಆರ್ ಎಂ ಎಸ್ ವ್ಯವಸ್ಥೆ ಜಾರಿ ಮತ್ತು ಉಚಿತ ಆರೋಗ್ಯ ಸೇವೆ ಕಲ್ಪಿಸಬೇಕು ಎಂದು ಪ್ರಮುಖ ಬೇಡಿಕೆಗಳಿವೆ.