Take a fresh look at your lifestyle.

ಕೋಲಾರದಲ್ಲಿ ಮುಂದುವರಿದ ಸಾರಿಗೆ ನೌಕರರ ಮುಷ್ಕರ, ವಿರಳ ಪ್ರಮಾಣದಲ್ಲಿ ಬಸ್ ಸಂಚಾರ

ಕೋಲಾರ ಹೊಸ ಬಸ್ ನಿಲ್ದಾಣದಿಂದ ಎರಡು ಸರ್ಕಾರಿ ಬಸ್ ಗಳು ಸೇವೆ ಪ್ರಾರಂಭಿಸಿದವು

0
post ad

ಕೋಲಾರ: ಕೋಲಾರದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ, ನೆನ್ನೆ ಸರ್ಕಾರದ ಜೊತೆ ಕಾರ್ಮಿಕರ ಮಾತುಕತೆ ಪಲಪ್ರಧ ಹಾಗೂ ನಂತರ ಕಾರ್ಮಿಕ ಮುಖಂಡರ ಯೂಟರ್ನ್ ನಡೆಯ ಬಗ್ಗೆ ಗೊಂದಲಿದಲ್ಲಿರುವ ಮುಷ್ಕರ ನಿರತರು, ಕೆಲಸಕ್ಕೆ ಹಾಜರಾಗಬೇಕ ಬೇಡವೇ ಎಂಬ ಗೊಂದಲದಲ್ಲಿದ್ದಾರೆ. ಇನ್ನೂ ಕೋಲಾರ ಹೊಸಬಸ್ ನಿಲ್ದಾಣದಿಂದ ಎರಡು ಸರ್ಕಾರಿ ಬಸ್ ಗಳು ಸೇವೆ ಪ್ರಾರಂಭಿಸಿದವು,

ನಿಲ್ದಾಣದಿಂದ ಎರಡು ಬಸ್ ಗಳು ಶ್ರೀನಿವಾಸಪುರ ಹಾಗೂ ಬೆಂಗಳೂರಿಗೆ ಸೇವೆ ಪ್ರಾರಂಭಿಸಿತು‌. ಇನ್ನೂ ನಿಧಾನವಾಗಿ ಸಾರಿಗೆ ವ್ಯವಸ್ಥೆ ಪ್ರಾರಂಭವಾಗುವ ಅಶಭಾವನೆಯಲ್ಲಿ ಸಾರಿಗೆ ಇಲಾಖೆ ಆಧಿಕಾರಿಗಳು ಇದ್ದಾರೆ. ಸದ್ಯಕ್ಕೆ, ಕೋಲಾರ ಹೊಸಬಸ್ ನಿಲ್ದಾಣ ಖಾಲಿಖಾಲಿಯಾಗಿದೆ. ಬಸ್ ವ್ಯವಸ್ಥೆ ಪ್ರಾರಂಭವಾಗುವ ನಿಟ್ಟಿನಲ್ಲಿ ನಿಲ್ದಾಣಕ್ಕೆ ಅಗಮಿಸಿದ ಪ್ರಯಾಣಿಕರು ಬಸ್ ಇಲ್ಲದೇ ಪರದಾಟ ನಡೆಸಿ ಖಾಸಗಿ ಬಸ್ ಗಳನ್ನು ಅವಲಂಬಿಸಿದ್ರು. ಖಾಸಗಿ ಬಸ್ ಗಳಿಗೆ ಭಾರಿ ಡಿಮಾಂಡ್ ಉಂಟಾಗಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಆರೋಪ ಎದುರಾಗಿದೆ..