Take a fresh look at your lifestyle.

ಟೊಯೋಟಾ ಕಂಪನಿ ವಿರುದ್ಧ ಹರಿಹಾಯ್ದ ಹೆಚ್.ಡಿ.ಕೆ

ಆಡಳಿತ ವರ್ಗ ಕಾರ್ಮಿಕ ಬಿಕ್ಕಟ್ಟುನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ವಿಸ್ಟ್ರಾನ್ ಘರ್ಷಣೆಯನ್ನು ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ

0
post ad

ರಾಮನಗರ: ಟೊಯೋಟಾದ ಸ್ಥಳೀಯ ಆಡಳಿತ ವ್ಯವಸ್ಥಾಪಕರು ಜಪಾನ್‌ನಲ್ಲಿರುವ ಕಂಪನಿಯ ಮುಖ್ಯಸ್ಥರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಆಡಳಿತ ವರ್ಗಕ್ಕೆ ಕಾರ್ಮಿಕರ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟಿಕೆಎಂ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.
ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಪತ್ರಕರ್ತರ
ಜೊತೆ ಮಾತನಾಡುತ್ತಾ, ಟೊಯೋಟಾ ಆಡಳಿತಾಧಿಕಾರಿಗಳಲ್ಲಿ ನಾನು ಸಾಕಷ್ಟು ಬಾರಿ ವಿನಂತಿಸಿಕೊಂಡಿದ್ದೇನೆ. ಆದರೆ ಅವರು ಈ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವಂತಿದೆ. ಇತ್ತೀಚೆಗೆ ನರಸಾಪುರದ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಘಟನೆಗೆ ಯಾರು ಹೊಣೆ. ಅಂತಹ ಘಟನೆ ಮರುಕಳಿಸಿದರೆ ಕರ್ನಾಟಕದಲ್ಲಿ ಬಂಡವಾಳ ಹೂಡಲು ಯಾರು ಬರುತ್ತಾರೆ ಎಂದು ಪ್ರಶ್ನಿಸಿದರು.
ಟೊಯೋಟಾ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ನಿವಾರಣೆಗೆ ನಮ್ಮೆಲ್ಲರನ್ನೂ ಒಳಗೊಂಡಂತೆ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಮತ್ತು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ಅವರಿಗೆ ತಿಂಗಳ ಹಿಂದೆಯೇ ತಿಳಿಸಿದ್ದೆ. ಆದರೆ ಅವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ’ ಎಂದು ತಿಳಿಸಿದರು.
ಇನ್ನು, ರಾಜ್ಯದಲ್ಲಿ ನೆಲ, ಜಲ, ವಿದ್ಯುತ್‌ ಮತ್ತು ತೆರಿಗೆ ವಿನಾಯಿತಿ ಎಲ್ಲಾ ಸೌಲಭ್ಯವನ್ನು ಪಡೆಯುವ
ಬಂಡವಾಳ ಹೂಡಿಕೆದಾರರು ಹೊರ ರಾಜ್ಯದವರಿಗೆ ಖಾಯಂ ಕೆಲಸ ಕೊಡುವುದು, ಸ್ಥಳೀಯರನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳುವ ಕೆಟ್ಟ ಪದ್ದತಿ ರಾಜ್ಯದ ಎಲ್ಲಾ ಕಡೆ ಆರಂಭವಾಗಿದೆ. ಸ್ಥಳೀಯರಿಗೆ ಕೆಲಸ ಕೊಡುತ್ತೇವೆಂದು ಹೇಳಿ ದ್ರೋಹ ಬಗೆಯುವ ವಾತಾವರಣ ಸೃಷ್ಠಿಯಾಗಿದೆ. ಸಂಸ್ಥೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ಸ್ಥಳೀಯರಿಗೆ ಕೊಟ್ಟ
ಮಾತಿನಂತೆ ನಡೆದುಕೊಳ್ಳದೇ ಮಾಲೀಕರು ಮೋಸ
ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದ ಪದ್ದತಿಯ ದುರ್ಬಳಕೆ ಆಗುತ್ತಿದ್ದು, ಆರು ತಿಂಗಳು ದುಡಿಸಿಕೊಂಡು ಹೊರದಬ್ಬುವ ಕೆಲಸ ನಡೆಯುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕದಿದ್ದರೇ ಕಾರ್ಮಿಕರ ಸ್ಥಿತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹೀನಾಯವಾಗಲಿದೆ ಎಂದು ಎಚ್ಚರಿಸಿದರು.