Take a fresh look at your lifestyle.

ಏಜೆನ್ಸಿಗಳು ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ ಎಚ್ ನಾಗೇಶ್

ಐವತ್ತು ಕಾರ್ಮಿಕರ ಮೇಲ್ಪಟ್ಟ ಕಾರ್ಮಿಕ ಏಜನ್ಸಿಯು ಅಂಗೀಕೃತ ಸ್ಥಾಯೀ ಆದೇಶಗಳನ್ನು ಜಾರಿಗೆ ತರಬೇಕು ಎಂದು ಕಾರ್ಮಿಕ ಕಾನೂನುಗಳು ಹೇಳುತ್ತವೆ

0
post ad

ಕೋಲಾರ : ಜಿಲ್ಲೆಯಲ್ಲಿ ಕಾರ್ಮಿಕರಿಗೆ ಗುತ್ತಿಗೆದಾರರು ವೇತನ ಪಾವತಿಸದ ಬಗೆಗೆ ದೂರುಗಳು ಬರುತ್ತಿವೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.
ವಿಸ್ಟ್ರಾನ್ ಸೇರಿ ಬಹುತೇಕ ಕೈಗಾರಿಕೆಗಳಲ್ಲಿ ಸಿಬ್ಬಂದಿ ನೇಮಿಸಿಕೊಂಡರುವ ಏಜೆನ್ಸಿಗಳು ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಸದಿರುವ ಬಗ್ಗೆ ದೂರುಗಳು ಇವೆ.
ಈ ಬಗ್ಗೆ ನಾನು ಕಾರ್ಮಿಕ ಸಚಿವರ ಜೊತೆ ಚರ್ಚಿಸುತ್ತೇನೆ ಎಂದ ಅವರು ಜಿಲ್ಲಾಡಳಿತ ಹಾಗೂ ಶಾಸಕರ ಸಮ್ಮುಖದಲ್ಲಿ ಜಿಲ್ಲೆಯ ಎಲ್ಲ ಕೈಗಾರಿಕೆಗಳ ಮುಖ್ಯಸ್ಥರು ಹಾಗೂ ಮಾನವ ಸಂಪನ್ಮೂಲ ಒದಗಿಸುವ ಏಜೆನ್ಸಿಗಳ ಸಭೆ ಕರೆದು ಕಾರ್ಮಿಕ ಇಲಾಖೆ ನಿಬಂಧನೆಗೆ ಒಳಪಟ್ಟು ಕಾರ್ಯ ನಿರ್ವಹಿಸಲು ಸೂಚಿಸುತ್ತೇನೆ ಎಂದು ತಿಳಿಸಿದರು.
ಜೊತೆಗೆ ವಿಸ್ಟ್ರಾನ್ ಕಂಪನಿ ದಾಂದಲೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ ಎಂದರು.
ಸಚಿವರ ಜೊತೆ ಕೋಲಾರ ಜಿಲ್ಲಾ ಅಧೀಕ್ಷಕ ಕಾರ್ತೀಕ್ ರೆಡ್ಡಿ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
‌ಐವತ್ತು ಕಾರ್ಮಿಕರ ಮೇಲ್ಪಟ್ಟ ಕಾರ್ಮಿಕ ಏಜನ್ಸಿಯು ಅಂಗೀಕೃತ ಸ್ಥಾಯೀ ಆದೇಶಗಳನ್ನು ಜಾರಿಗೆ ತರಬೇಕು ಎಂದು ಕಾರ್ಮಿಕ ಕಾನೂನುಗಳು ಹೇಳುತ್ತವೆ. ಆದರೆ ರಾಜ್ಯದಲ್ಲಿ ಯಾರೊಬ್ಬರೂ ಈ ನಿಯಮಗಳನ್ನು ಪಾಲಿಸುವುದೇ ಇಲ್ಲ.
ಈ ಬಗೆಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕಲು ವಿಫಲರಾಗುತ್ತಿರುವ ಕಾರಣದಿಂದಲೇ ಕೆಲ ಮುಜುಗರದ ಘಟನೆಗಳು ನಡೆದು ಹೋಗುತ್ತವೆ.