Take a fresh look at your lifestyle.

ಭಾರತದಲ್ಲಿರುವ ಕಾರ್ಮಿಕ ಕಾನೂನುಗಳು

ದೇಶ ಈಗ ಚಾಲ್ತಿಯಲ್ಲಿರುವ ಕಾರ್ಮಿಕ ಕಾನೂನುಗಳು ಯಾವುವು. ಕಾರ್ಮಿಕನ ನೆರವಿಗೆ ಬರುವ ಕಾಯ್ದೆಗಳು ಯಾವುವು, ಮಾಲೀಕನ ಪರವಿರುವ ಕಾನೂನುಗಳು ಯಾವುವು, ಅವು ಏನನ್ನು ತಿಳಿಸುತ್ತವೆ

0
post ad

ಕೈಗಾರಿಕಾ ಕ್ರಾಂತಿಯ ನಂತರ, ಬಂಡವಾಳಗಾರರು ಕಡಿಮೆ ಕೂಲಿಯನ್ನು ನೀಡಿ ಹೆಚ್ಚಿನ ಲಾಭ ಗಳಿಸಲು  ದೀರ್ಘ ಕಾಲ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಅಲ್ಲದೆ, ಕೆಲಸದ ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು  ಒದಗಿಸದೆ ಕಾರ್ಮಿಕರನ್ನು ಶೋಷಣೆಗೆ ಒಳಪಡಿಸಲಾಗಿತ್ತು.
ಇದರ ಪರಿಣಾಮವಾಗಿ, ಪ್ರಪಂಚದಾದ್ಯಂತ ಹಲವಾರು ಕಾರ್ಮಿಕ ಚಳುವಳಿಗಳು  ಆರಂಭವಾದವು. ಈ ಬೆಳವಣಿಗೆಗಳ ನಂತರ ವಿಶ್ವದ ಎಲ್ಲಾ ರಾಷ್ಟ್ರಗಳು ವಿವಿಧ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತಂದವು.
ಕಾರ್ಮಿಕ ಕಾನೂನುಗಳು.. ಕಾರ್ಮಿಕರ ಶಾಸನಬದ್ಧ ಹಕ್ಕುಗಳನ್ನು ರಕ್ಷಿಸುತ್ತಾ,  ನ್ಯಾಯಬದ್ಧವಾಗಿ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಲಭಿಸುವಂತೆ ಮಾಡುತ್ತವೆ.
ಈ ಕಾನೂನುಗಳು ಕೈಗಾರಿಕಾ ಸಂಬಂಧಗಳು, ಕಾರ್ಮಿಕ ಒಕ್ಕೂಟಗಳ ಗುರುತಿಸುವಿಕೆ ಮತ್ತು ಕಾರ್ಮಿಕ ಹಾಗೂ ಮಾಲೀಕರ ಸಂಬಂಧಗಳಿಗೆ ಸಹಾಯವಾಗುತ್ತವೆ.
ಕೆಲಸದ ಸ್ಥಳದಲ್ಲಿ ಆರೋಗ್ಯಕರವಾದ ಪರಿಸ್ಥಿತಿಗಳನ್ನು ಒದಗಿಸುವುದು, ಉದ್ಯೋಗ ಭದ್ರತೆ, ಉದ್ಯೋಗ ದರ್ಜೆಗಳನ್ನು ಸುಧಾರಿಸುವುದು, ಸಾಮಾನ್ಯ ರಜೆಗಳು, ಸಾಂದರ್ಭಿಕ ರಜೆಗಳು, ಕೆಲಸದ ಅವಧಿ, ಕನಿಷ್ಠ ವೇತನ, ಕಾನೂನುಬಾಹಿರ ವಜಾಗಳು ಮತ್ತು ವೇತನ ಕಡಿತಗಳಲ್ಲಿ ಕಾರ್ಮಿಕ ಕಾಯ್ದೆಗಳು ಅತ್ಯಗತ್ಯವಾಗಿವೆ.
1919ರಲ್ಲಿ ಅಸ್ಥಿತ್ವಕ್ಕೆ ಬಂದ ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟ (ILO) 187 ದೇಶಗಳ ಅಧಿಕಾರಿಗಳು, ಕೈಗಾರಿಕಾ ಉದ್ಯಮಿಗಳು ಮತ್ತು ಟ್ರೇಡ್ ಯೂನಿಯನ್ ಪ್ರತಿನಿಧಿಗಳೊಂದಿಗೆ ತ್ರಿಪಕ್ಷೀಯ ಸಭೆಯೊಂದನ್ನು ಏರ್ಪಡಿಸಿತ್ತು.
ಕಾರ್ಮಿಕರ ಪರಿಸ್ಥಿತಿಗಳನ್ನು ಸುಧಾರಿಸುವುದು ಮತ್ತು ಕಾರ್ಮಿಕ – ಮಾಲೀಕರ ನಡುವೆ ಸೌಹಾರ್ದಯುತ ಸಂಬಂಧಗಳ  ಸ್ಥಾಪನೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇಂಗ್ಲೆಂಡಿನ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲೆಂದು 1883ರಲ್ಲಿ ಫ್ಯಾಕ್ಟರಿ ಕಾಯಿದೆಯನ್ನು ಜಾರಿಗೆ ತರಲಾಯಿತು. ನಂತರ 1929ರಲ್ಲಿ ವಾಣಿಜ್ಯ ವಿವಾದಗಳ ಕಾಯಿದೆಯನ್ನು ತರಲಾಯಿತು. ಆದರೆ, ಈ ಕಾಯಿದೆಯನ್ನು ರದ್ದು ಮಾಡಿ ಇದರ ಬದಲು 1947ರ ಏಪ್ರಿಲ್ 1ರಂದು ಕೈಗಾರಿಕಾ ವಿವಾದಗಳ ಕಾಯಿದೆಯನ್ನು 
ಜಾರಿಗೆ ತರಲಾಯಿತು.
ಸ್ವಾತಂತ್ರ್ಯಾನಂತರ ದೇಶದಲ್ಲಿ ಯೋಜಿತ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ ಸಾಧನೆಯ ಜೊತೆಗೆ ಕೈಗಾರಿಕಾ ಶಾಂತಿಯನ್ನು ಸ್ಥಾಪಿಸುವುದು, ಕಾರ್ಮಿಕರ ಕಲ್ಯಾಣವನ್ನು  ಪ್ರಮುಖ ಗುರಿಯಾಗಿಸಿ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಮಿಕ ನೀತಿಗಳನ್ನು ರೂಪಿಸಕೊಳ್ಳಲಾಯಿತು.
ಕಾರ್ಮಿಕ ನೀತಿಗಳು ಈ ಕೆಳಗಿನ ಉದ್ದೇಶಗಳನ್ನು ಹೊಂದಿವೆ
* ಸಾರ್ವಜನಿಕ ಮತ್ತು ಖಾಸಗಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಜೊತೆಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸುವಂತಹ ಕಾರ್ಮಿಕ ನೀತಿಗಳನ್ನು ರಚಿಸುವುದು.
* ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾರ್ಡ್ ಗಳನ್ನು ಒದಗಿಸುವುದು.
* ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪರಿಚಯಿಸುವುದು.
* ಕಾರ್ಮಿಕರು ಮತ್ತು ಆಡಳಿತ ಮಂಡಳಿಗಳ ನಡುವೆ ಉತ್ತಮ ಬಾಂಧವ್ಯವನ್ನು ಸೃಜಿಸುವುದು.
* ಕೈಗಾರಿಕಾ ಸಂಬಂಧಗಳ ಸಮಿತಿಗಳನ್ನು ರಚಿಸುವುದು.
* ಕಾರ್ಮಿಕ ಕಾನೂನುಗಳು ಮತ್ತು ಕೈಗಾರಿಕಾ ನೀತಿಗಳನ್ನು ಕಾಲಕಾಲಕ್ಕೆ ಪರಿಚಯಿಸುವುದು.
* ಕಾರ್ಮಿಕ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡುವುದು.
* ಅತಿ ಹೆಚ್ಚು ಕಾರ್ಮಿಕರನ್ನು ಕನಿಷ್ಠ ವೇತನದ ವ್ಯಾಪ್ತಿಗೆ   ಕರೆತರುವುದು.
* ಬಾಲ ಕಾರ್ಮಿಕ ಕಾನೂನು ಅನ್ನು  ಪರಿಣಾಮಕಾರಿ ಅನುಷ್ಠಾನಕ್ಕೆ ತರುವುದು.
* ಕಾರ್ಮಿಕರಿಗೆ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು.
* ನಿರಾಶ್ರಿತ ಕಾರ್ಮಿಕರಿಗೆ ಪುನರ್ವಸತಿ ಸೌಲಭ್ಯ ಒದಗಿಸುವುದು.
* ಕೈಗಾರಿಕಾ ತರಬೇತಿಯೊಂದಿಗೆ ಕಾಲಕ್ಕನುಸಾರವಾಗಿ ಕೋರ್ಸ್ ಗಳ ವಿಷಯಗಳಲ್ಲಿ ಬದಲಾವಣೆಯನ್ನು ತರುವುದು.
* ಕಾರ್ಮಿಕ ಇಲಾಖೆ, ಕೈಗಾರಿಕಾ ಘಟಕಗಳು ಮತ್ತು ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ತರಲು ಜಂಟಿ ಕೋಶವನ್ನು  ಸ್ಥಾಪನೆ ಮಾಡುವುದು.

ನಮ್ಮ ದೇಶದಲ್ಲಿ  ಬಹುತೇಕ  ಕಾರ್ಮಿಕರು (ಶೇ.92%) ಕಡಿಮೆ ವೇತನದೊಂದಿಗೆ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಇವರೆಲ್ಲರೂ  ಸಾಮಾಜಿಕ ಭದ್ರತೆ ಇಲ್ಲದೆಯೇ ಉತ್ಪಾದನಾ(ಶೇ.92%), ಕಾಯ್ದೆಗಳನ್ನು ಜಾರಿಗೆ ತಂದಿದೆ.
ಸರ್ಕಾರಗಳು ಕನಿಷ್ಠ ವೇತನ, ಪರಿಹಾರ, ವಿವಾದಗಳು, ಸಾಮಾಜಿಕ ಭದ್ರತೆ, ಕಾರ್ಖಾನೆಗಳಲ್ಲಿ ದುಡಿಯುವ ಪರಿಸ್ಥಿತಿ ಇತ್ಯಾದಿಗಳ ಮೇಲೆ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತಂದಿವೆ.

ಸಂವಿಧಾನ ಮತ್ತು ಕಾರ್ಮಿಕ ಕಾನೂನುಗಳು

ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ  ಕಾರ್ಮಿಕ ನೀತಿಗಳ ಅಂಶಗಳನ್ನು ಸೇರ್ಪಡಿಸಲಾಗಿದೆ.
ಮೂಲಭೂತ ಹಕ್ಕುಗಳ 16, 19(1)ಸಿ, 23 ಮತ್ತು 24ನೇ ವಿಧಿಗಳು ಕಾರ್ಮಿಕರಿಗೆ ಸಂಬಂಧಿಸಿವೆ.
* ಅನುಚ್ಛೇದ 16ರ ಪ್ರಕಾರ, ಉದ್ಯೋಗ ಮತ್ತು ನೇಮಕಾತಿಗಳಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಬೇಕು.
* ಅರ್ಟಿಕಲ್ 19(1)ಸಿ ಅನ್ವಯ ಸಂಘ ಮತ್ತು ಯುನಿಯನ್ ಗಳನ್ನು ಸ್ಥಾಪಿಸುವ ಹಕ್ಕನ್ನು ಒದಗಿಸಲಾಗಿದೆ.
* ಅನುಚ್ಛೇದ 23  ಕಾರ್ಮಿಕರ ಬಲವಂತದ ಸಾಗಣೆಗೆ ನಿಷೇಧಿಸುತ್ತದೆ.
* 24ನೇ ವಿಧಿಯು ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಅಪರಾಧವಾಗಿದೆ.
* ರಾಜ್ಯ ನೀತಿ ನಿರ್ದೇಶಕ ತತ್ವಗಳ 41, 42, 43 ಮತ್ತು 43ಎ ವಿಧಿಗಳು ಕಾರ್ಮಿಕರ ಬಗ್ಗೆ ವ್ಯವಹರಿಸುತ್ತವೆ.
ಅವು..
* 41ನೇ ವಿಧಿಯ ಪ್ರಕಾರ ‘ಕೆಲಸದ ಹಕ್ಕು’
* ಅನುಚ್ಛೇದ 42 ರ ಪ್ರಕಾರ, ಮಾನವೀಯ ದುಡಿಯುವ ಪರಿಸ್ಥಿತಿಗಳು ಮತ್ತು ಮಹಿಳೆಯರಿಗೆ ಹೆರಿಗೆ ಸೌಲಭ್ಯಗಳನ್ನು ಒದಗಿಸುವುದು.
* 43ನೇ ವಿಧಿಯು ಕೆಲಸದ ಸುರಕ್ಷತೆ, ಜೀವನ ನಿರ್ವಹಿಸಲು ತಕ್ಕ ವೇತನ,  ಸೂಕ್ತ ಜೀವನ ಮಟ್ಟಗಳನ್ನು ಒದಗಿಸುವುದನ್ನು ವಿವರಿಸುತ್ತದೆ.
* 43(ಎ) ವಿಧಿಯು  ಕೈಗಾರಿಕಾ ಯಜಮಾನಿಕೆಯಲ್ಲಿ ಕಾರ್ಮಿಕರೂ ಸಹಭಾಗಿಗಳು ಆಗುವುದನ್ನು ಹೇಳುತ್ತದೆ.
ಸಂವಿಧಾನದಲ್ಲಿ ‘ಕಾರ್ಮಿಕರಿಗೆ’ ಸಂಬಂಧಿಸಿದ ಅಂಶಗಳನ್ನು ಸಮವರ್ತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದ್ದರಿಂದಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎರಡೂ ಕಾರ್ಮಿಕ ಕಾನೂನುಗಳನ್ನು ರೂಪಿಸಿ ಜಾರಿಗೆ ತರಬಹುದು. ಆಯಾ ಸರ್ಕಾರಗಳು ರೂಪಿಸುವ ಕಾನೂನುಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು.
ಅವು…
ಕೇಂದ್ರದ ಕಾನೂನುಗಳು: ಅವುಗಳನ್ನು ಜಾರಿಗೆ ತರುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಈ ವರ್ಗದ ಕಾನೂನುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಎರಡು (ಕೇಂದ್ರ ಮತ್ತು ರಾಜ್ಯ) ಸರ್ಕಾರಗಳ ಮೇಲಿರುತ್ತದೆ.
ಕೇಂದ್ರದ ಕಾನೂನುಗಳು, ಈ ವರ್ಗದ ಕಾನೂನುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಮಾತ್ರ ರಾಜ್ಯ ಸರ್ಕಾರಗಳ ಮೇಲಿರುತ್ತದೆ.
ರಾಜ್ಯಗಳ ಕಾನೂನುಗಳು, ಈ ಕಾಯ್ದೆಗಳ ಅನುಷ್ಠಾನದ ಜವಾಬ್ದಾರಿ ರಾಜ್ಯಗಳ ಮೇಲಿರುತ್ತದೆ. ಈ ಕಾನೂನುಗಳು ಸಂಬಂಧಪಟ್ಟ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುತ್ತವೆ.
ಕೇಂದ್ರ ಸರ್ಕಾರದ ಅನುಷ್ಠಾನದ ಜವಾಬ್ದಾರಿ ಅಡಿ ಬರುವ  ಕಾಯ್ದೆಗಳು :
* ರಾಜ್ಯ ವಿಮಾ  ಕಾರ್ಮಿಕರ ಕಾಯ್ದೆ – 1948
* ನೌಕರರ ಭವಿಷ್ಯ ನಿಧಿ ಮತ್ತು ಮಿಸ್ಲೇನಿಯಸ್ ಪ್ರೊವಿಷನ್ ಆಕ್ಟ್ – 1952
* ದಿ ಡಾಕ್ ವರ್ಕರ್ಸ್ (ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ) ಕಾಯ್ದೆ -1986
* ಗಣಿ ಕಾಯ್ದೆ – 1952
* ಕಬ್ಬಿಣದ ಅದಿರು ಗಣಿಗಳು, ಮ್ಯಾಂಗನೀಸ್ ಅದಿರು ಮತ್ತು ಕ್ರೋಮ್ ಅದಿರು ಗಣಿ ಕಾರ್ಮಿಕರ ಕಲ್ಯಾಣ ಕಾಯ್ದೆ – 1976.
* ಮೈಕಾ ಗಣಿ ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆ -1946
* ಬೀಡಿ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ- 1976
* ಸುಣ್ಣದ ಕಲ್ಲು ಮತ್ತು ಡೋಲಮೈಟ್ ಗಣಿಕಾರ್ಮಿಕರ ಕಲ್ಯಾಣ ನಿಧಿ ಅಧಿನಿಯಮ -1972
* ಸಿನಿ ವರ್ಕರ್ಸ್ ವೆಲ್ ಫೇರ್ ಸೆಸ್ ಆಕ್ಟ್ -1981
* ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಅಧಿನಿಯಮ -1981
ಕೇಂದ್ರ ಮತ್ತು ರಾಜ್ಯಗಳು ಎರಡೂ ಅನುಷ್ಠಾನದ ಜವಾಬ್ದಾರಿ ಹೊಂದಿರುವ  ಕಾನೂನುಗಳು :
* ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ – 1986
* ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಅಧಿನಿಯಮ -1996
* ಸಮಾನ ಸಂಭಾವನೆ ಕಾಯ್ದೆ-1976
* ಕೈಗಾರಿಕಾ ವಿವಾದಗಳ ಅಧಿನಿಯಮ – 1947
* ಕಾರ್ಮಿಕ ಕಾನೂನುಗಳ ಅಧಿನಿಯಮ-1988
* 1961ರ ಹೆರಿಗೆ ಸೌಲಭ್ಯ ಕಾಯ್ದೆ
* ಬೋನಸ್ ಕಾಯ್ದೆ -1965
* 1972ರ ಗ್ರಾಚ್ಯುಯಿಟಿ ಕಾಯಿದೆ
* 1936ರ ವೇತನ ಪಾವತಿ ಕಾಯ್ದೆ
* ದಿ ಅಪ್ರೆಂಟಿಸ್ ಆಕ್ಟ್ – 1961
* ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ – 2008
* ಕಾರ್ಯನಿರತ ಪತ್ರಕರ್ತರ( ಫಿಕ್ಸೇಷನ್ ಆಫ್ ರೈಟ್ಸ್ ಆಫ್ ವೇಜಸ್) ಅಧಿನಿಯಮ -1958
* ಮರ್ಚೆಂಟ್ ಶಿಪ್ಪಿಂಗ್ ಆಕ್ಟ್ – 1958
* ಮಾರಾಟ ವರ್ಧನೆ ನೌಕರರ ಕಾಯ್ದೆ – 1976
* ಅಪಾಯಕಾರಿ ಯಂತ್ರಗಳ (ನಿಯಂತ್ರಣ) ಅಧಿನಿಯಮ – 1983
* ಖಾಸಗಿ ಭದ್ರತಾ ಏಜೆನ್ಸಿಗಳು (ನಿಯಂತ್ರಣ) ಕಾಯ್ದೆ – 2005
ಅನುಷ್ಠಾನದ ಜವಾಬ್ದಾರಿ ರಾಜ್ಯಗಳಿಗೆ ಸೀಮಿತವಾದ ಕಾನೂನುಗಳು :
* ಕಾರ್ಮಿಕರ ಹೊಣೆಗಾರಿಕೆ ಅಧಿನಿಯಮ -1938
* 1948ರ ಕಾರ್ಖಾನೆಗಳ ಕಾಯ್ದೆ
* ಮೋಟಾರು ಸಾರಿಗೆ ಕಾರ್ಮಿಕರ ಅಧಿನಿಯಮ -1961
* ದಿ ಪರ್ಸನಲ್ ಇಂಜೂರೀಸ್ ಆಕ್ಟ್ (ಪರಿಹಾರ ವಿಮೆ) – 1963
* ದಿ ಪರ್ಸನಲ್ ಇಂಜೂರೀಸ್ (ತುರ್ತು ಉಪಬಂಧ) ಆಕ್ಟ್  – 1962
* ದಿ ಪ್ಲಾಂಟೇಷನ್ ಲೇಬರ್ ಆಕ್ಟ್ -1951
* ದಿ ಟ್ರೇಡ್ ಯೂನಿಯನ್ ಆಕ್ಟ್ -1926
* ಸಾಪ್ತಾಹಿಕ ರಜಾದಿನಗಳ ಅಧಿನಿಯಮ -1942
* ಜೀತಕಾರ್ಮಿಕ ಪದ್ಧತಿ (ನಿಷೇಧ) ಅಧಿನಿಯಮ -1976

ಮೇಲೆ ತಿಳಿಸಿದ ಕಾರ್ಮಿಕ ಕಾಯ್ದೆಗಳು, ಅವುಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ಆಧರಿಸಿ ಈ ಕೆಳಗಿನ ರೀತಿಯಲ್ಲಿ ವಿಂಗಡಿಸಬಹುದು.
ಕೈಗಾರಿಕಾ ಸಂಬಂಧಗಳಿಗೆ ಸಂಬಂಧಿಸಿದ ಕಾನೂನುಗಳು,
ವೇತನಗಳಿಗೆ ಸಂಬಂಧಿಸಿದ ಕಾನೂನುಗಳು,
ಕೆಲಸದ ಅವಧಿ ಮತ್ತು ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದ ಕಾನೂನುಗಳು,
ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಕಾನೂನುಗಳು,
ಸಮಾಜದ ಹಿತಾಸಕ್ತಿಗಳಿಂದ ದೂರವಿರುವ ಮತ್ತು ದಮನಿತರಿಗೆ ಸಂಬಂಧಿಸಿದ ಕಾನೂನುಗಳು,
ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಕಾನೂನುಗಳು.