Take a fresh look at your lifestyle.

ಇಂದು ಟೊಯೋಟಾ ಕಾರ್ಮಿಕರ ಜೊತೆ ಕಾರ್ಮಿಕ ಸಚಿವರ ಚರ್ಚೆ

ವಿಧಾನ ಸಭೆಯ ಕಲಾಪದಲ್ಲಿ ಪ್ರತಿಧ್ವನಿಸಿದ್ದ ಟೊಯೋಟಾ ಬಿಕ್ಜಟಿಗೆ ಉತ್ತರಿಸಿದ್ದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ರವರು ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವಿನ ವಿವಾದವನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸಲಾಗುತ್ತದೆ ಎಂದಿದ್ದರು.

0
post ad

ಬೆಂಗಳೂರು/ಬಿಡದಿ :ಭವಿಷ್ಯವನ್ನೆ ಮುಡುಪಾಗಿಟ್ಟು ಆತ್ಮಗೌರವಕ್ಕಾಗಿ ಆಡಳಿತ ಮಂಡಳಿಯ ವಿರುದ್ಧ ಸ್ವಾಭಿಮಾನಿ ಹೋರಾಟ ನಡೆಸುತ್ತಿರುವ ಟೊಯೋಟಾ ಕಾರ್ಮಿಕರ ಜೊತೆಗೆ ಕಾರ್ಮಿಕ ಸಚಿವರು ಸಭೆ ನಡೆಸಲಿದ್ದಾರೆ.
ಇಂದು ಕಾರ್ಮಿಕರು ರಾಮನಗರ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದು, ಪ್ರವಾಸದ ಬಹುಪಾಲು ಸಮಯವನ್ನು ಟೊಯೋಟಾ ಕಾರ್ಮಿಕ ಬಿಕ್ಕಟ್ಟಿನ ಇತ್ಯರ್ಥ್ಯಕ್ಕೆ ಮೀಸಲಿಡಲಿದ್ದಾರೆ.
ಬೆಳಗ್ಗೆ 9.30 ಕ್ಕೆ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಬಳಿಗೆ ಆಗಮಿಸುವ ಸಚಿವರು ಪ್ರತಿಭಟನಾನಿರತ ಕಾರ್ಮಿಕರ ಬೇಟಿ, ಪರಿಶೀಲನೆ ಮತ್ತು ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಶಾಸಕ ಕರುಣಾಕರ ರೆಡ್ಡಿ ಅವರು ಸದನದಲ್ಲಿ ಮಾತನಾಡುತ್ತಾ “ಕಾರ್ಮಿಕರನ್ನು ಕೆಲಸದಿಂದ ಕಿತ್ತು ಹಾಕುವ ಪ್ರಯತ್ನ ನಡೆಯುತ್ತಿದೆ. ಮೂರು ನಿಮಿಷದಲ್ಲಿ ಮಾಡಬಹುದಾದ ಕೆಲಸವನ್ನು ಎರಡೂವರೆ ನಿಮಿಷದಲ್ಲೇ ಮಾಡಬೇಕು ಎಂದು ಕಾರ್ಮಿಕರ ಮೇಲೆ ಒತ್ತಡ ಹಾಕಲಾಗುತ್ತಿದೆ. ಕಾರ್ಮಿಕರ ಹಿತದ ಬಗ್ಗೆಯೂ ಸರ್ಕಾರ ಗಮನಹರಿಸಬೇಕು” ಎಂದು ಒತ್ತಾಯಿಸಿದ್ದರು.
ಇದಕ್ಕೆ ಉತ್ತರಿಸಿದ್ದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ರವರು ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವಿನ ವಿವಾದವನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸಲಾಗುತ್ತದೆ ಎಂದು ವಿಧಾನಸಭೆಯಲ್ಲಿ ತಿಳಿಸಿದ್ದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಕಾರ್ಮಿಕ ಬಿಕ್ಕಟ್ಟನ್ನು ಪರಿಹರಿಸುವಂತೆ ಸರ್ಕಾರವನ್ನು ಎಚ್ಚರಿಸಿದ್ದರು.
ನೆನ್ನೆಯೇ ಕಾರ್ಮಿಕ ಸಚಿವರು ಟೊಯೋಟಾ ಕಾರ್ಮಿಕರನ್ನು ಬೇಟಿಯಾಗುವ ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದರು, ಆದರೆ ಕಾರಣಾಂತರಗಳಿಂದ ನೆನ್ನೆಯ ಬೇಟಿ ರದ್ದಾಗಿತ್ತು.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 66 ಕಾರ್ಮಿಕರ ಅಮಾನತ್ತು, 8 ಕಾರ್ಮಿಕ ವಜಾ, 88 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿದ್ದು, ಈ ವಿಷಯ ಸದನದಲ್ಲೂ ಪ್ರತಿಧ್ವನಿಸಿದೆ.