Take a fresh look at your lifestyle.

ವೇತನ ಸಂಹಿತೆಯ ಸಲಹಾ ಮಂಡಳಿಗೆ ನಿಬಂಧನೆಗಳ ಅಧಿಸೂಚನೆ

ಕನಿಷ್ಠ ವೇತನದ ಪ್ರಮಾಣವನ್ನು ಲೆಕ್ಕ ಹಾಕಲು ಆರು ಮಾನದಂಡಗಳು... ಮೂರು ಭೌಗೋಳಿಕ ಪ್ರದೇಶಗಳ ವಿಭಾಗಗಳು... ಕುಶಲ, ಅರೆ ಕುಶಲ, ಕುಶಲತೆ ಮತ್ತು ಹೆಚ್ಚು ಕೌಶಲ್ಯವುಳ್ಳ ನಾಲ್ಕು ವರ್ಗಗಳು....

0
post ad

ನವದೆಹಲಿ: ವೇತನ ಸಂಹಿತೆಗಾಗಿ ಸಲಹಾ ಮಂಡಳಿ ರಚನೆಗೆ ಸಂಬಂಧಿಸಿದ ನಿಬಂಧನೆಗಳನ್ನು ಕಾರ್ಮಿಕ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ವೇತನ ಸಂಹಿತೆಯು ಮುಂದಿನ ವರ್ಷ ಏಪ್ರಿಲ್ 1ರಿಂದ ಜಾರಿಗೆ ಬರುವ ನಾಲ್ಕು ಕಾರ್ಮಿಕ ಕಾಯ್ದೆಗಳಲ್ಲಿ ಒಂದಾಗಿದೆ. ಈ ನಾಲ್ಕು ಸಂಹಿತೆಗಳು ಎಲ್ಲಾ ಕೇಂದ್ರೀಯ ಕಾನೂನುಗಳನ್ನು ಒಳಗೊಂಡಿದೆ.

ಈ ಅಧಿಸೂಚನೆಯು ಸೆಕ್ಷನ್ 42ರ ಐದು ಉಪವಿಭಾಗಗಳನ್ನು, ಸೆಕ್ಷನ್ 67 ಮತ್ತು ಸೆಕ್ಷನ್ 69 ರ ಎರಡು ಉಪವಿಭಾಗಗಳನ್ನು ಒಳಗೊಂಡಿದೆ. ಇನ್ನು, ಕಲಂ 42 ಸಲಹಾ ಮಂಡಳಿಯನ್ನು ಸೂಚಿಸಿದ್ದು, ಕೇಂದ್ರ ಸರ್ಕಾರ ಕೇಂದ್ರ ಸಲಹಾ ಮಂಡಳಿ ರಚಿಸಲಿದೆ ಎಂದು ಹೇಳಿದೆ.
ಇದರಲ್ಲಿ ಉದ್ಯೋಗದಾತರು ಮತ್ತು ನೌಕರರನ್ನು ಪ್ರತಿನಿಧಿಸುವ ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡುವ ವ್ಯಕ್ತಿಗಳು, ಸ್ವತಂತ್ರ ವ್ಯಕ್ತಿಗಳು ಇರುತ್ತಾರೆ. ಕೇಂದ್ರ ಸರ್ಕಾರದಿಂದ ನಾಮನಿರ್ದೇಶನ ಗೊಳ್ಳಬಹುದಾದಂತಹ ರಾಜ್ಯ ಸರ್ಕಾರಗಳ ಐದು ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ.
ಇಲ್ಲಿ ಮೂರನೇ ಒಂದು ಭಾಗದಷ್ಟು ಸದಸ್ಯರು ಮಹಿಳೆಯರೇ ಇರಲಿದ್ದು, ಕೇಂದ್ರ ಸರ್ಕಾರ ಈ ಸದಸ್ಯರಲ್ಲಿ ಒಬ್ಬರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿದೆ.

ಮಂಡಳಿಯ ಹೊಣೆಗಳು :

ಕೇಂದ್ರ ಸಲಹಾ ಮಂಡಳಿಯು ಕಾಲಕಾಲಕ್ಕೆ ಕನಿಷ್ಠ ವೇತನ ನಿಗದಿ ಅಥವಾ ಪರಿಷ್ಕರಣೆ ಮತ್ತಿತರ ವಿಷಯಗಳ ಬಗ್ಗೆ ಕೇಂದ್ರಕ್ಕೆ ಸಲಹೆ ನೀಡಲಿದೆ.
ಅಲ್ಲದೆ, ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಕೇಂದ್ರ ಸರ್ಕಾರ ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದಂತಹ ಸಂಸ್ಥೆಗಳಲ್ಲಿ ಅಥವಾ ಉದ್ಯೋಗಗಳಲ್ಲಿ ಮಹಿಳೆಯರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗಗಳನ್ನು ನೀಡಬಹುದು ಎಂಬುದನ್ನು ಅದು ಸೂಚಿಸುತ್ತದೆ.
ಕೇಂದ್ರ ಸಲಹಾ ಮಂಡಳಿಯು ಸಮಿತಿಗಳು ಮತ್ತು ಉಪಸಮಿತಿಗಳನ್ನು ಒಳಗೊಂಡಂತೆ ತನ್ನದೇ ಆದ ಕಾರ್ಯವಿಧಾನಗಳನ್ನು ನಿಯಂತ್ರಿಸುತ್ತದೆ ಎನ್ನಲಾಗಿದೆ. ಕಲಂ 67ರ ಉಪ-ವಿಭಾಗಗಳು ಮಂಡಳಿಯ ಸದಸ್ಯರ ನಿಯಮಗಳು ಮತ್ತು ನಿಬಂಧನೆಗಳನ್ನು ಕುರಿತು ವ್ಯವಹರಿಸುತ್ತವೆ.

ಸಂಹಿತೆಯ ಸೆಕ್ಷನ್ 69 ರ ಪ್ರಕಾರ 1936ರ ವೇತನ ಪಾವತಿ ಕಾಯ್ದೆ, 1948ರ ಕನಿಷ್ಠ ವೇತನ ಕಾಯ್ದೆ, ಬೋನಸ್ ಆಕ್ಟ್ 1965 ಮತ್ತು ಸಮಾನ ವೇತನ ಕಾಯ್ದೆ 1976 ಗಳನ್ನು ರದ್ದುಮಾಡಲಾಗಿದೆ.

ಜುಲೈನಲ್ಲಿ ಕೇಂದ್ರ ಸರ್ಕಾರ ನಿಯಮಾವಳಿಗಳ ಕರಡನ್ನು ಬಿಡುಗಡೆ ಮಾಡಿದೆ. ಒಂದು ಪ್ರಮುಖ ನಿಬಂಧನೆಯು ಕನಿಷ್ಠ ವೇತನ ನಿಗದಿಯ ಬಗ್ಗೆ ಮಾತನಾಡುತ್ತದೆ.
ಕರಡು ಪ್ರತಿಯ ಪ್ರಕಾರ,

ದಿನದ ಆಧಾರದ ಮೇಲೆ ಕನಿಷ್ಠ ವೇತನದ ಪ್ರಮಾಣವನ್ನು ಲೆಕ್ಕ ಹಾಕಲು ಆರು ಮಾನದಂಡಗಳನ್ನು ಬಳಸಬಹುದು ಎನ್ನಲಾಗಿದೆ.
ಅವು
* ಉದ್ಯೋಗಿ, ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಒಳಗೊಂಡಂತೆ ಪ್ರತಿ ನಿತ್ಯ 2,700 ಕ್ಯಾಲೊರಿಗಳ ಆಹಾರದ ವೆಚ್ಚ, ದುಡಿಯುವ ವರ್ಗದ ಕುಟುಂಬಕ್ಕೆ ವಾರ್ಷಿಕ 66 ಮೀಟರ್ ಬಟ್ಟೆ ವೆಚ್ಚ
* ಬಾಡಿಗೆ ವೆಚ್ಚಗಳು
* ಇಂಧನ, ನೀರು, ವಿದ್ಯುತ್ ಮತ್ತು ಇತರೇ ವೆಚ್ಚಗಳು
* ಮಕ್ಕಳ ಶಿಕ್ಷಣದ ವೆಚ್ಚ
* ವೈದ್ಯಕೀಯ ಅಗತ್ಯ
* ಮನರಂಜನೆ ಮತ್ತು ಇತರೇ ವೆಚ್ಚಗಳು
ಈ ಮಾನದಂಡಗಳನ್ನು ಆಧರಿಸಿ ಕನಿಷ್ಠ ವೇತನವನ್ನು ನಿಗದಿ ಮಾಡುವ ಸಾಧ್ಯತೆಗಳು ಇದೆ.

ಕರಡು ನಿಯಮ ಪ್ರಸ್ತಾವನೆಗಳು :

ಕರಡು ಪ್ರತಿಯು ಭೌಗೋಳಿಕ ಪ್ರದೇಶಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲು ಉದ್ದೇಶಿಸಿದೆ
ಮೆಟ್ರೋಪಾಲಿಟನ್, ಮೆಟ್ರೋಪಾಲಿಟನ್ ಅಲ್ಲದ ಮತ್ತು ಗ್ರಾಮೀಣ ವಿಭಾಗಗಳಾಗಲಿವೆ.
ಕುಶಲ, ಅರೆ ಕುಶಲ, ಕುಶಲತೆ ಮತ್ತು ಹೆಚ್ಚು ಕೌಶಲ್ಯವುಳ್ಳ ನಾಲ್ಕು ವರ್ಗಗಳ ಪಟ್ಟಿಯಲ್ಲಿ ನಿರ್ದಿಷ್ಟ ಉದ್ಯೋಗಗಳನ್ನು ಸೂಚಿಸಲು, ಮಾರ್ಪಡಿಸಲು, ಸೇರಿಸಲು ಅಥವಾ ಅಳಿಸಲು ಒಂದು ತಾಂತ್ರಿಕ ಸಮಿತಿಯೊಂದನ್ನು ರಚಿಸುವ ಪ್ರಸ್ತಾವನೆ ಇದೆ.

ಕೌಶಲ್ಯರಹಿತ ವರ್ಗದಲ್ಲಿ ಲೋಡರ್/ಅನ್ ಲೋಡರ್, ವುಡ್ ಕಟರ್, ಆಫೀಸ್ ಬಾಯ್, ಕ್ಲೀನರ್, ಗೇಟ್ ಮ್ಯಾನ್, ಸ್ವೀಪರ್, ಪರಿಚಾರಕರು, ಬೆಲ್ದಾರ್ ಸೇರಿದಂತೆ 123 ಉದ್ಯೋಗಗಳು ಈ ಕರಡು ಪಟ್ಟಿಯಲ್ಲಿ ಸೇರಿವೆ.
ಅರೆ ಕುಶಲವರ್ಗದಲ್ಲಿ ಅಡಿಗೆ ಭಟ್ಟರು, ಕಮ್ಮಾರರು, ಚಮ್ಮಾರರು, ಧೋಬಿ ಮತ್ತು ಜಾಮದಾರ್ ಸೇರಿದಂತೆ 127 ಬಗೆಯ ಕಸುಬುಗಳಿವೆ.
ನುರಿತ ವಿಭಾಗದಲ್ಲಿ ಮುನ್ಷಿ, ಬೆರಳಚ್ಚುಗಾರ, ಪುಸ್ತಕ ಪಾಲಕ, ಗ್ರಂಥಪಾಲಕ, ಅನುವಾದಕರು ಮತ್ತು ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ 320 ಬಗೆಯ ಉದ್ಯೋಗಗಳಿವೆ. ಅತ್ಯಂತ ಕುಶಲತೆ ಯುಳ್ಳ ಈ ವಿಭಾಗದಲ್ಲಿ ಸಶಸ್ತ್ರ ಭದ್ರತಾ ಸಿಬ್ಬಂದಿ, ಹೆಡ್ ಮೆಕ್ಯಾನಿಕ್ಸ್, ಕಾಂಪೌಂಡರ್ ಸೇರಿದಂತೆ 111 ಬಗೆಯ ಕಸುಬುಗಳಿವೆ.