Take a fresh look at your lifestyle.

ಶೇ.50ರಷ್ಟು ನಿರುದ್ಯೋಗ ಭತ್ಯೆಯ ಹಾದಿ ಸುಗಮ

ಈ ಯೋಜನೆಯನ್ನು 2020ರ ಜುಲೈ 1ರಿಂದ ಒಂದು ವರ್ಷಕಾಲಕ್ಕೆ ವಿಸ್ತರಿಸಲಾಗಿದ್ದು, ಅದು ಜೂನ್ 30,2021ರವರೆಗೆ ಜಾರಿಯಲ್ಲಿರುತ್ತದೆ

0
post ad

ನವ ದೆಹಲಿ : ಕಾರ್ಮಿಕ ಸಚಿವಾಲಯ ಅಟಲ್ ಬೀಮಿತ್ ಕಾರ್ಮಿಕ ಕಲ್ಯಾಣ ಯೋಜನೆಯಡಿ ವೇತನ ಹೆಚ್ಚಳ ಮಾಡಿ, 2020ರ ಡಿಸೆಂಬರ್ 31ರವರೆಗೆ ಸಡಿಲವಾದ ಅರ್ಹತಾ ಷರತ್ತುಗಳೊಂದಿಗೆ ಕಾರ್ಮಿಕರ ರಾಜ್ಯ ವಿಮಾ ಯೋಜನೆಯ ಚಂದಾದಾರರಿಗೆ ಶೇ.50ರಷ್ಟು ನಿರುದ್ಯೋಗ ಭತ್ಯೆಯನ್ನು ನೀಡಲು ಅಧಿಸೂಚನೆ ಹೊರಡಿಸಿದೆ. ಈ ಕ್ರಮವು ಇಎಸ್ ಐಸಿ ಅಡಿಯಲ್ಲಿ ನೊಂದಾಯಿತ ಅಧಿಕೃತ ಕಾರ್ಮಿಕರಿಗೆ ಅನುಕೂಲವಾಗಲಿದೆ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಇದರಿಂದ ಲಾಭವಾಗಲಿದೆ.

ಇದಲ್ಲದೆ, ಈ ಯೋಜನೆಯನ್ನು 2020ರ ಜುಲೈ 1ರಿಂದ ಒಂದು ವರ್ಷಕಾಲಕ್ಕೆ ವಿಸ್ತರಿಸಲಾಗಿದ್ದು,  ಅದು ಜೂನ್ 30,2021ರವರೆಗೆ ಜಾರಿಯಲ್ಲಿರುತ್ತದೆ. ಆದರೆ, ಮೂಲ ನಿಬಂಧನೆಗಳು ಜನವರಿ 1, 2021 ರಿಂದ ಆರಂಭವಾಗುತ್ತವೆ.

ಪರಿಷ್ಕೃತ ಮಾನದಂಡದಡಿ  41,94,176 ಅರ್ಹ ಚಂದಾದಾರರು ಈ ಯೋಜನೆಯು ಪ್ರಯೋಜನವನ್ನು ಪಡೆಯಬಹುದೆಂದು ಅಂದಾಜಿಸಲಾಗಿದ್ದು, 6710.67 ಕೋಟಿ ರೂ. ಮೊತ್ತವನ್ನು  ಇಎಸ್ ಐಸಿ ಪಾವತಿಸಲಿದೆ.

ಇಎಸ್ ಐಸಿ ದತ್ತಾಂಶವು ಈ ಯೋಜನೆಯ ಅಡಿಯಲ್ಲಿ 80,43,305 ಚಂದಾದಾರರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪಾವತಿಮಾಡಿಲ್ಲ ಮತ್ತು ಮಾರ್ಚ್ 2020ಕ್ಕೆ ಅಂತ್ಯವಾದ ದೇಣಿಗೆ ಅವಧಿಯಲ್ಲಿ ಯೋಜನೆಯಿಂದ  ಒಟ್ಟು  81,95,765 ಕಾರ್ಮಿಕರು ನಿರ್ಗಮಿಸಿದ್ದಾರೆ.

ವಿಮೆ ಮಾಡಿದ ವ್ಯಕ್ತಿಯು ನಿರುದ್ಯೋಗದ ಮೊದಲು ಕನಿಷ್ಠ ಎರಡು ವರ್ಷಗಳ ಕಾಲ ವಿಮಾ ಉದ್ಯೋಗದಲ್ಲಿರಬೇಕು ಮತ್ತು ನಿರುದ್ಯೋಗಕ್ಕೆ ಮುಂಚೆ, ನಿರುದ್ಯೋಗದ ಮುಂಚಿನ ದೇಣಿಗೆ ಅವಧಿಯಲ್ಲಿ 78 ದಿನಗಳಿಗಿಂತ ಕಡಿಮೆಯಾಗಿರಬೇಕು ಮತ್ತು ನಿರುದ್ಯೋಗಕ್ಕೆ ಮುಂಚೆ ಎರಡು ವರ್ಷಗಳಲ್ಲಿ ಉಳಿದ ಮೂರು ಕೊಡುಗೆ ಅವಧಿಗಳಲ್ಲಿ ಕನಿಷ್ಠ 78 ದಿನಗಳು ಇರಬೇಕು.