Take a fresh look at your lifestyle.

ಅಧಿವೇಶನದಲ್ಲಿ ಮೂರು ಹೊಸ ಕಾರ್ಮಿಕ ಸಂಹಿತೆಗಳ ಮಂಡನೆಗೆ ಕೇಂದ್ರ ಸಜ್ಜು

ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ವರ್ಕಿಂಗ್ ಕಂಡೀಷನ್ಸ್ ಕೋಡ್ -2019, ಸಾಮಾಜಿಕ ಭದ್ರತೆ ಕುರಿತ ಕೋಡ್ - 2019 ಮತ್ತು ಕೈಗಾರಿಕಾ ಸಂಬಂಧಗಳ ಸಂಹಿತೆ - 2019

0
post ad

ನವದೆದಲಿ : ಮುಂಬರುವ ಸಂಸತ್ ಅಧಿವೇಶನದಲ್ಲಿ ಮೂರು ಕಾರ್ಮಿಕ ಸಂಹಿತೆಗಳನ್ನು ತಮ್ಮ ಸಚಿವಾಲಯ ಮಂಡಿಸಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ಇವುಗಳಲ್ಲಿ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸ ಪರಿಸ್ಥಿತಿಗಳ ಸಂಹಿತೆ -2019, ಸಾಮಾಜಿಕ ಭದ್ರತೆಯ ಸಂಹಿತೆ – 2019 ಮತ್ತು ಕೈಗಾರಿಕಾ ಸಂಬಂಧಗಳ ಸಂಹಿತೆ – 2019 ಸೇರಿವೆ.
ಸೆಪ್ಟೆಂಬರ್ 14ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ..
ಮುಂಬರುವ ಅಧಿವೇಶನದಲ್ಲಿ ನಾವು ಇನ್ನೂ ಮೂರು ಮಸೂದೆಗಳನ್ನು ಚರ್ಚೆಗೆ ಮಂಡಿಸಲಿದ್ದೇವೆ ಎಂದು ಪಿಕ್ಕಿ(Ficci) ವೆಬ್ ನಾರ್ ನಲ್ಲಿ ಮಾತನಾಡುತ್ತಾ ಗಂಗ್ವಾರ್ ಅವರು ಹೇಳಿದರು.
ಕಾನೂನುಗಳನ್ನು ರೂಪಿಸುವಲ್ಲಿ ಉದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಾ ದೃಷ್ಟಿಕೋನಗಳನ್ನು ಗಣನೆಗೆ ತೆಗೆದುಕೊಳ್ಳುವ ಸಲುವಾಗಿ ಅಗತ್ಯ ಬದಲಾವಣೆಗಳನ್ನು ಹಂಚಿಕೊಳ್ಳಲು ನಾನು, ನಿಮ್ಮನ್ನು (ಉದ್ಯಮಗಳನ್ನು) ಒತ್ತಾಯಿಸುತ್ತೇನೆ” ಎಂದು ಅವರು ಹೇಳಿದರು.
ಕಾರ್ಮಿಕ ಸುಧಾರಣೆಗಳು ಈ ಸರ್ಕಾರದ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದು ಎಂದು ಸಚಿವ ಗಂಗ್ವಾರ್ ಹೇಳಿದ್ದಾರೆ ಎಂದು ಫಿಕ್ಕಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಕ್ಷೇತ್ರವು ಒಂದು ಕೋಟಿ ಜನರಿಗೆ ಉದ್ಯೋಗ ವನ್ನು ಕಲ್ಪಿಸುತ್ತದೆ ಮತ್ತು ಸರ್ಕಾರದ ಯೋಜನೆಗಳ ಲಾಭಗಳನ್ನು ಕಾರ್ಮಿಕರ ಕುಟುಂಬದ ಮೂಲಕ ನಾಲ್ಕು ಕೋಟಿ ಜನರನ್ನು ಸಂಪರ್ಕಿಸುತ್ತದೆ. ಖಾಸಗಿ ಭದ್ರತಾ ಕಾರ್ಮಿಕರನ್ನು ಕೇಂದ್ರ ಮತ್ತು ರಾಜ್ಯ ಕನಿಷ್ಠ ವೇತನದ ಅಡಿಯಲ್ಲಿ ‘ಕೌಶಲ್ಯಯುತ’ ಮತ್ತು ‘ಅತ್ಯಂತ ಕೌಶಲ್ಯಯುತ’ ವರ್ಗಗಳನ್ನಾಗಿ ಮೇಲ್ದರ್ಜೆಗೇರಿಸುವ ಮಹತ್ವದ ನಿರ್ಧಾರವನ್ನು ಕೆಲವು ವರ್ಷಗಳ ಹಿಂದೆ ನಮ್ಮ ಸಚಿವಾಲಯ ಕೈಗೊಂಡಿತ್ತು ಎಂದು ಸಚಿವರು ಹೇಳಿದ್ದಾರೆ.