Take a fresh look at your lifestyle.

ಅಳಪ್ಪುಳಂನಲ್ಲಿ ಕಾರ್ಮಿಕರ ಮ್ಯೂಸಿಯಂ

ಕಾರ್ಮಿಕ ಚಳವಳಿ ನಡೆದು ಬಂದ ದಾರಿ, ಅದಕ್ಕೆ ಸಂಬಂಧಿಸಿದ ದಾಖಲೆಗಳು, ಚಿತ್ರಗಳನ್ನು ಈ ಮ್ಯೂಸಿಯಂನಲ್ಲಿ ಪ್ರದರ್ಶಿಲ್ಪಡುತ್ತದೆ.

0
post ad

ಕೊಚ್ಚಿ:  ಕೇರಳದ ಅಳಪ್ಪುಳಂನಲ್ಲಿ ಕಾರ್ಮಿಕ ಕ್ರಾಂತಿಯನ್ನು ನೆನಪಿಸುವ ಪ್ರದರ್ಶನ ಮಂದಿರವೊಂದು ಶೀಘ್ರದಲ್ಲಿ ಸ್ಥಾಪನೆಯಾಗಲಿದೆ.
ಅಸ್ತಿತ್ವಕ್ಕೆ ಕಾರ್ಮಿಕ ಚಳವಳಿ ನಡೆದು ಬಂದ ಹಾದಿಯನ್ನು ಬಿಂಬಿಸುವ  ಮ್ಯೂಸಿಯಂವೊಂದು ಇದೇ ಮೊದಲ ಬಾರಿಗೆ ಸ್ಥಾಪನೆಯಾಗಲಿದೆ.

ಕಾರ್ಮಿಕ ಚಳವಳಿ ನಡೆದು ಬಂದ ದಾರಿ, ಅದಕ್ಕೆ ಸಂಬಂಧಿಸಿದ ದಾಖಲೆಗಳು, ಚಿತ್ರಗಳನ್ನು ಈ ಮ್ಯೂಸಿಯಂನಲ್ಲಿ ಪ್ರದರ್ಶಿಲ್ಪಡುತ್ತದೆ.
ಅಳಪ್ಪುಳಂ ನಗರವನ್ನು ಕೇರಳದ ಕಾರ್ಮಿಕ ಚಳವಳಿಯ ತೊಟ್ಟಿಲು ಎಂದೇ ಕರೆಯಲಾಗುತ್ತದೆ. ಹೀಗಾಗಿ ಇಲ್ಲಿಯೇ ಮ್ಯೂಸಿಯಂ ಸ್ಥಾಪಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ತಿಳಿಸಿದೆ.

ಇಲ್ಲಿರುವ ನ್ಯೂ ಮಾಡೆಲ್ ಕೋ–ಆಪರೇಟಿವ್‌ ಸೊಸೈಟಿ ಕಟ್ಟಡವನ್ನು ಮ್ಯೂಸಿಯಂ ಅಗಿ ಪರಿವರ್ತಿಸಲಾಗುವುದು. ಎಲ್‌ಡಿಎಫ್‌ ನೇತೃತ್ವದ ಸರ್ಕಾರ ಎರಡನೇ ಬಾರಿ ಅಸ್ತಿತ್ವಕ್ಕೆ ಬಂದ ನಂತರ ಆರಂಭಿಸಿರುವ 100 ದಿನಗಳ ಕಾರ್ಯಕ್ರಮದ ಭಾಗವಾಗಿ ಈ ಮ್ಯೂಸಿಯಂ ಅನ್ನು ಉದ್ಘಾಟಿಸಲಾಗುತ್ತದೆ ಎನ್ನಲಾಗುತ್ತಿದೆ.