Take a fresh look at your lifestyle.

ಕಾರ್ಮಿಕ ಕಲ್ಯಾಣ ನಿಧಿ ವಂತಿಗೆ ಪಾವತಿ ಅವಧಿ ವಿಸ್ತರಣೆ

ಕಾರ್ಖಾನೆಗಳು, ಸಂಘ ಸಂಸ್ಥೆಗಳು ತನ್ನ ಕಾರ್ಮಿಕರಿಂದಲೂ 20 ಗಳನ್ನು ಅವರ ಡಿಸೆಂಬರ್‌ ತಿಂಗಳ ವೇತನದಲ್ಲಿ ಕಡಿತಗೊಳಿಸಿ ಮಾಲೀಕರು ರೂ. 40 ಗಳನ್ನು ಸೇರಿಸಿ ಒಟ್ಟು ರೂ. 60 ಗಳಂತೆ ಪ್ರತಿ ಕಾರ್ಮಿಕನಿಗೆ ಪ್ರತಿ ವರ್ಷ ಜನವರಿ 15 ರೊಳಗೆ ಪಾವತಿಸುವುದು ಕಡ್ಡಾಯವಾಗಿತ್ತು. ಈಗ ಆ ಅವಧಿಯನ್ನು ತಿಂಗಳಾಂತ್ಯದವರೆಗೂ ವಿಸ್ತರಿಸಲಾಗಿದೆ.

0
post ad

ಬೆಂಗಳೂರು : ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ 50ಕ್ಕಿಂತ ಹೆಚ್ಚು ಕಾರ್ಮಿಕರನ್ನೊಳಗೊಂಡ ಕಾರ್ಖಾನೆ, ಸಂಸ್ಥೆಗಳು ಸಲ್ಲಿಸಬೇಕಾದ ವಂತಿಗೆಯ ಅವಧಿಯನ್ನು ವಿಸ್ತರಿಸಿ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ. ಈ ಬಗೆಗೆ ಕಲ್ಯಾಣ ಆಯುಕ್ತರಾದ ಎಂ.ಎಸ್‌. ಚಿದಾನಂದರವರು  ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ.
ಕೆಲ ತಾಂತ್ರಿಕ ಕಾರಣಗಳಿಂದ ನಿಗಧಿತ ಅವಧಿಯೊಳಗೆ ವಂತಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲವೆಂದು ಕಾರ್ಖಾನೆಗಳು/ಕಾರ್ಯಸಂಸ್ಥೆಗಳ ಮಾಲೀಕರು/ಆಡಳಿತ ವರ್ಗದವರು ವಂತಿಗೆ ಪಾವತಿಸುವ ಬಗೆಗೆ ಕಾಲಾವಕಾಶ ಕೋರಿರುವುದರಿಂದ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆಯ ಪಾವತಿಯನ್ನು ದಿನಾಂಕವನ್ನು 31 ಜನವರಿವರೆಗೂ ವಿಸ್ತರಿಸಿದ್ದಾರೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ 1965ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾರ್ಖಾನೆಗಳು, ಪ್ಲಾಂಟೀಷನ್‌ಗಳು, ಮೋಟಾರು ವಾಹನ ಸಂಸ್ಥೆಗಳು ಹಾಗೂ 50 ಮತ್ತು ಅದಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು,  ಐಟಿ/ಬಿಟಿ ಸಂಸ್ಥೆಗಳು, ಚಾರಿಟಬಲ್‌ ಶಿಕ್ಷಣ ಸಂಸ್ಥೆಗಳು, ಕರ್ನಾಟಕ ಸೊಸೈಟಿ ಕಾಯ್ದೆ 1960 ರಡಿಯಲ್ಲಿ ನೊಂದಣಿಯಾಗಿರುವ ಸಂಘಗಳು ಕಾರ್ಮಿಕರಿಂದಲೂ 20 ಗಳನ್ನು ಅವರ ಡಿಸೆಂಬರ್‌ ತಿಂಗಳ ವೇತನದಲ್ಲಿ ಕಡಿತಗೊಳಿಸಿ ಮಾಲೀಕರು ರೂ. 40 ಗಳನ್ನು ಸೇರಿಸಿ ಒಟ್ಟು ರೂ. 60 ಗಳಂತೆ ಪ್ರತಿ ಕಾರ್ಮಿಕನಿಗೆ ಪ್ರತಿ ವರ್ಷ ಜನವರಿ 15 ರೊಳಗೆ ಪಾವತಿಸುವುದು ಕಡ್ಡಾಯವಾಗಿತ್ತು. ಈಗ ಆ ಅವಧಿಯನ್ನು ತಿಂಗಳಾಂತ್ಯದವರೆಗೂ ವಿಸ್ತರಿಸಲಾಗಿದೆ.
ಪ್ರಸ್ತುತ ಕಾರ್ಮಿಕ ಕಲ್ಯಾಣ ಮಂಡಳಿಯು 2020ನೇ ಕ್ಯಾಲೆಂಡರ್‌ ವರ್ಷಕ್ಕೆ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಸಾಪ್ಟ್‌ವೇರ್‌ ಅಭಿವೃದ್ದಿ ಪಡಿಸಿದ್ದು ಆನ್ ಲೈನ್  ಮೂಲಕ ವಂತಿಕೆ ಪಾವತಿಸಲು ಅವಕಾಶ ಕಲ್ಪಿಸಿದೆ.
ಆನ್ ಲೈನ್  ಮುಖಾಂತರ ವಂತಿಗೆ ಪಾವತಿಸಬೇಕಾದ ವೆಬ್‌ಸೈಟ್‌ ವಿಳಾಸ www.klwb.karnataka.gov.in ಗೆ ಬೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8277291175, 82771209505, 080-23475188 ಮೂಲಕ ಸಂಪರ್ಕಿಸಬಹುದಾಗಿದೆ.

ಈ ವಂತಿಗೆಯಿಂದ ಕಾರ್ಮಿಕನಿಗೆ ಆಗುವ ಉಪಯೋಗಗಳು

ಈ ಕೆಳಕಂಡ ಕಲ್ಯಾಣ ಯೋಜನೆಗಳಿಗೆ ಕಾರ್ಮಿಕನ ಮಾಸಿಕ ಸಂಬಳ ರೂ.15,000/-ಗಳಿಗೆ ಮೀರಿರಬಾರದು.

ವಯೋಮಿತಿ 18-60 ಒಳಗೆ ಇರಬೇಕು.

ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ: ಪ್ರೌಡ ಶಾಲೆ (8 ರಿಂದ 10ನೇ ತರಗತಿವರೆಗೆ) ರೂ.3000/ ಪಿಯುಸಿ/ಡಿಪ್ಲೊಮಾ/ಐಟಿಐ/ಟಿಸಿಹೆಚ್ ಇತ್ಯಾದಿ ರೂ. 4000/-ಪದವಿ ತರಗತಿಗೆ ರೂ 5000/ ಸ್ನಾಕೋತ್ತರ ಪದವಿ ತರಗತಿಗಳಿಗೆ ರೂ.5000/-ಇಂಜಿನೀಯರಿಂಗ್/ವೈದ್ಯಕೀಯರೂ.10,000/-ಗಳ ಪ್ರೋತ್ಸಾಹ ಧನ ನೀಡಲಾಗುವುದು. (ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗ ಶೇ.50 ಪ.ಜಾ / ಪ.ಪಂ ಶೇ.45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು)

ಕಾರ್ಮಿಕರಿಗೆ ವೈದ್ಯಕೀಯ ನೆರವು : ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ಟ್ರಾನ್ಸ್‍ಪ್ಲಾಂಟೇಷನ್, ಕ್ಯಾನ್ಸರ್, ಆಂಜಿಯೋಪ್ಲಾಸ್ಟಿ, ಕಣ್ಣು, ಅರ್ಥೊಪೆಡಿಕ್, ಗರ್ಭಕೋಶದ ಶಸ್ತ್ರ ಚಿಕಿತ್ಸೆ, ಗಾಲ್ ಬ್ಲಾಡರ್ ತೊಂದರೆ, ಮೆದುಳಿನ ರಕ್ತಸ್ರಾವ ಚಿಕಿತ್ಸೆಗೆ ರೂ. 1,000/- ದಿಂದ ರೂ,10,000/-ವರೆಗೆ ಮತ್ತು ಆರೋಗ್ಯ ತಪಾಸಣೆಗೆ ರೂ. 500/-ರಿಂದ ರೂ. 1000/-ವರೆಗೆ ಧನ ಸಹಾಯ ನೀಡಲಾಗುವುದು.

ಕಾರ್ಮಿಕರಿಗೆ ಕೆಲಸದ ವೇಳೆಯಲ್ಲಿ ಅಪಘಾತವಾದಲ್ಲಿ ಧನ ಸಹಾಯ: ಕನಿಷ್ಠ ರೂ. 1000/- ಗರಿಷ್ಠ ರೂ 3000/- ವರೆಗೆ ಧನ ಸಹಾಯ ನೀಡಲಾಗುವುದು. ಸೌಲಭ್ಯ ಪಡೆಯುವ ಕಾರ್ಮಿಕರು ಅಪಘಾತವಾದ 3 ತಿಂಗಳೊಳಗೆ ಅರ್ಜಿ ಸಲ್ಲಿಸತಕ್ಕದ್ದು.

  ಕೆಳಗಿನ ಯೋಜನೆಗಳಿಗೆ ಮಾಸಿಕ ಸಂಬಳದ ಮಿತಿಯಿರುವುದಿಲ್ಲ. ವಯೋಮಿತಿ 18- 60.

ಮೃತ ಕಾರ್ಮಿಕನ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ :ಈ ಯೋಜನೆಯ ಸೌಲಭ್ಯ ಪಡೆಯಬೇಕಾದರೆ ಮೃತರ ಕುಟುಂಬದ ಅವಲಂಬಿತರು  ಕಾರ್ಮಿಕ ಮೃತ ಪಟ್ಟ 6 ತಿಂಗಳೊಳಗೆ ನಿಗದಿತ ಅರ್ಜಿ ನಮೂನೆಯಲ್ಲಿ ಸೂಕ್ತ ದಾಖ ಲೆಗಳೊಂದಿಗೆ ಸಲ್ಲಿಸಿದಲ್ಲಿ,  ಧನ ಸಹಾಯ ರೂ.5,000/ ನೀಡಲಾಗುವುದು.

ವಾರ್ಷಿಕ  ವೈಧ್ಯಕೀಯ ತಪಾಸಣೆಯನ್ನು ನಡೆಸುವ ಟ್ರೇಡ್ ಯೂನಿಯನ್/ಸಂಸ್ಥೆಗಳಿಗೆ ಧನಸಹಾಯ : ನೋಂದಾಯಿತ ಕಾರ್ಮಿಕ ಸಂಘಟನೆಗಳು/ಸರ್ಕಾರೇತರ ಸಂಸ್ಥೆಗಳು ಕಲ್ಯಾಣ ಆಯುಕ್ತರ ಪೂರ್ವಾನುಮತಿಯೊಂದಿಗೆ ನಡೆಸುವ ಆರೋಗ್ಯ ತಪಾಸಣೆ ಶಿಬಿರಕ್ಕೆ ರೂ. 30,000/- ವರೆಗೆ ಧನ ಸಹಾಯ ನೀಡಲಾಗುವುದು. ಒಂದು ಸಂಘಟನೆಗೆ ವರ್ಷದಲ್ಲಿ ಒಂದು ಬಾರಿ ಮಾತ್ರ ಈ ಸೌಲಭ್ಯ ನೀಡಲಾಗುವುದು.

ವಾರ್ಷಿಕ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳುವ ನೊಂದಾಯಿತ ಕಾರ್ಮಿಕ ಸಂಘಗಳಿಗೆ ಧನಸಹಾಯ : ನೋಂದಾಯಿತ ಕಾರ್ಮಿಕ ಸಂಘಟನೆಗಳು ಕಲ್ಯಾಣ ಆಯುಕ್ತರ ಪೂರ್ವಾನುಮತಿಯೊಂದಿಗೆ ವಾರ್ಷಿಕ ಕ್ರೀಡಾ ಚಟುವಟಿಕೆ ಹಮ್ಮಿಕೊಂಡಲ್ಲಿ ರೂ. 50,000/- ದವರೆಗೆ ಧನ ಸಹಾಯ ನೀಡಲಾಗುವುದು. ವರ್ಷದಲ್ಲಿ ಒಂದು ಸಂಘಟನೆಗೆ ಒಂದು ಬಾರಿ ಮಾತ್ರ ಈ ಸೌಲಭ್ಯ ನೀಡಲಾಗುವುದು.

ಮಂಡಳಿಯ ಸಮುದಾಯ ಭವನಗಳು  :ಬೆಂಗಳೂರಿನ ಬಾಪೂಜಿನಗರ, ಪೀಣ್ಯ ಬಾಗಲಗುಂಟೆ, ಬಿಜಾಪುರ ಮತ್ತು ಗದಗ್ನಲ್ಲಿ ಮಂಢಲಿಯಿಂದ ನಿರ್ಮಿಸಿರುವ ಕಾರ್ಮಿಕ ಸಮುದಾಯ ಭವನಗಳನ್ನು ಸಂಘಟಿತ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಮದುವೆ ಮತ್ತು ಇನ್ನಿತರ ಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ.