Take a fresh look at your lifestyle.

ನೋಂದಾಯಿತ ನಿರ್ಮಾಣ ಕಾರ್ಮಿಕ ಮಹಿಳೆಗೆ ಹೆರಿಗೆ ಸಹಾಯ ಧನ

ನಿರ್ಮಾಣ ಕ್ಷೇತ್ರದ ನೋಂದಾಯಿತ ಕಾರ್ಮಿಕ ಮಹಿಳೆಗೆ ಗಂಡು ಮಗುವಾದರೆ 20,000 ರೂಪಾಯಿ, ಹೆಣ್ಣು ಮಗುವಾದರೆ 30,000 ರುಪಾಯಿಗಳ ಆರ್ಥಿಕ ನೆರವು ಲಭಿಸುತ್ತದೆ, ಅರ್ಹರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು

0
post ad

ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ನಿರ್ಮಾಣ ಕ್ಷೇತ್ರದ ಮಹಿಳೆಗೆ ಹೆರಿಗೆ ಸಂದರ್ಭದಲ್ಲಿ ಅನುಕೂಲವಾಗಲೆಂದು ಸಹಾಯ ಧನವನ್ನು ನೀಡಿತ್ತದೆ. ಅದು ನಿರ್ಮಾಣ ಮಹಿಳೆಗೆ ಗಂಡು ಮಗುವಾದರೆ 20,000 ರೂಪಾಯಿ, ಹೆಣ್ಣು ಮಗುವಾದರೆ 30,000 ರುಪಾಯಿ ಗಳನ್ನು ಸಹಾಯವಾಗಿ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಹೆರಿಗೆಯ ಸಹಾಯ ಧನವನ್ನು ಪಡೆದುಕೊಳ್ಳಬೇಕೆಂದರೆ ಯಾವ ಷರತ್ತುಗಳು ಅನ್ವಯವಾಗುತ್ತವೆ. ಎಲ್ಲಿ ಈ ನೆರವನ್ನು ಪಡೆದುಕೊಳ್ಳಬೇಕು, ಯಾರು ಈ ಸಹಾಯವನ್ನು ನೀಡುತ್ತಾರೆ, ಎಷ್ಟು ದಿನಗಳಲ್ಲಿ ಇದನ್ನು ಪಡೆದುಕೊಳ್ಳಬೇಕು ಎಂಬುದರ ವಿವರ ಇಲ್ಲಿದೆ..
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ಕಾರ್ಮಿಕ ಮಹಿಳೆಯಿಂದ ಮಕ್ಕಳ ಹೆರಿಗೆ ಆದ ಕುರಿತು ದಾಖಲೆಗಳನ್ನು ಅರ್ಜಿಯೊಂದಿಗೆ ಪಡೆದು ಸಹಾಯ ಧನವನ್ನು ಬಿಡುಗಡೆ ಮಾಡುತ್ತಾರೆ.
ಮೊದಲ ಎರಡು ಹೆರಿಗೆಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಗಂಡು ಮಗುವಿನ ಜನನಕ್ಕೆ ರೂ. 20000/- ಮತ್ತು ಹೆಣ್ಣು ಮಗುವಿನ ಜನನಕ್ಕೆ ರೂ.30,000/- ಸಹಾಯಧನವನ್ನು ಮಂಡಳಿಯು ಮಂಜೂರು ಮಾಡುತ್ತದೆ.

ಸಹಾಯ ಧನ ಮಂಜೂರು ಆಗ ಬೇಕಾದರೆ ಕೆಲವು ಷರತ್ತುಗಳು ಇದ್ದು ಅವುಗಳಿಗೆ ಅನುಗುಣವಾಗಿ ಮಾತ್ರ ಹೆರಿಗೆ ಸಹಾಯ ಧನ ಮಂಜೂರಾಗುತ್ತದೆ.
ಈ ಷರತ್ತುಗಳನ್ನು ನೋಡುವುದಾದರೆ
* ನೋಂದಾಯಿತ ಕಾರ್ಮಿಕ ಮಹಿಳೆಯು ಎರಡು ಬಾರಿ ಮಾತ್ರ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.
* ಎರಡನೇ ಹಕ್ಕು ಸಾಧನೆ ಸಹಾಯ ಧನ ಅರ್ಜಿಯು ಎರಡನೇ ಮಗುವಿನ ಹೆರಿಗೆ ಎಂದು ಹೇಳುವ ಅಫೀಡೆವಿಟ್ ಅನ್ನು ಒಳಗೊಂಡಿರಬೇಕು
* ನೋಂದಾಯಿತ ಮಹಿಳಾ ಕಾರ್ಮಿಕಳು ಯಾವುದೇ ಬಾಕಿ ಇಲ್ಲದಂತೆ ಪೂರ್ಣವಾಗಿ ವಂತಿಗೆಯನ್ನು ಮಂಡಳಿಗೆ ಪಾವತಿಸಿರಬೇಕು
* ಒಂದು ವೇಳೆ ಈಗಾಗಲೇ ನೋಂದಾಯಿತ ಮಹಿಳಾ ಕಾರ್ಮಿಕಳಿಗೆ ಎರಡು ಜೀವಂತ ಮಕ್ಕಳಿದ್ದರೆ, ಅವಳು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗುವುದಿಲ್ಲ
* ಜನನ ಮತ್ತು ಮರಣದ ನೋಂದಾಣಾ ಅಧಿಕಾರಿಯಿಂದ ಜನನದ ಪ್ರಮಾಣ ಪತ್ರ ಪಡೆಯಬೇಕು ಅಥವಾ ಸರ್ಕಾರದಿಂದ ಜನನ ಪ್ರಮಾಣ ಪತ್ರ ಅಥವಾ  ಕರ್ನಾಟಕ ರಾಜ್ಯ ಸರ್ಕಾರದಿಂದ  ಮಾನ್ಯತೆ ಪಡೆದ ಖಾಸಗಿ ಆಸ್ವತ್ರೆಯ   ಮುಖ್ಯಸ್ಥರಿಂದ ಸಹಿ ಮಾಡಿದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು
* ಹೆರಿಗೆ ಸಹಾಯಧನವನ್ನು ತಾಯಿ ಹೆಸರಿನಲ್ಲಿ ಕನಿಷ್ಠ ಮೂರು ವರ್ಷಗಳ ಅವಧಿಗೆ ನಿಶ್ಚಿತ ಠೇವಣಿ ರೂಪದಲ್ಲಿ ಅಥವಾ ತಾಯಿ ಲಕ್ಷ್ಮೀ ಬಾಂಡ್ ಹೆಸರಿನಲ್ಲಿ ಬಾಂಡ್ ರೂಪದಲ್ಲಿ ನೀಡಲಾಗುತ್ತದೆ
* ಹೆರಿಗೆ ಸಹಾಯಧನದ ಹಕ್ಕು ಸಾಧನೆಗಾಗಿ ನಮೂನೆ 17 ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು
ಇನ್ನು, ಈ ಆರ್ಥಿಕ ನೆರವನ್ನು ಪಡೆದುಕೊಳ್ಳಲು ಕೆಲವು ದಾಖಲಾತಿಗಳು ಕಡ್ಡಾಯವಾಗಿ ಸಲ್ಲಿಬೇಕಾಗುತ್ತದೆ.
ಆ ಪೂರಕ ದಾಖಲಾತಿಗಳು ಯಾವುವು ಅಂದರೆ ;
* ಅರ್ಜಿದಾರರು ನಮೂನೆ 17 ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು
* ಬ್ಯಾಂಕ್ ಖಾತೆ ಪುರಾವೆ ಅಂದರೆ ಆಧಾರ್ ಕಾರ್ಡ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಯನ್ನು ಪಾಸ್ ಬುಕ್ ನಕಲು ಪ್ರತಿ ನೀಡಬೇಕು
* ಮಕ್ಕಳ ಛಾಯಾಚಿತ್ರ ಅಂದರೆ ಜನಿಸಿ ನವಜಾತ ಮಗುವಿನ ಫೋಟೋ ಪ್ರತಿ ನೀಡಬೇಕು
* ಉದ್ಯೋಗ ದೃಡೀಕರಣ ಪತ್ರವನ್ನು ಸಲ್ಲಿಸಬೇಕು
* ಮಂಡಳಿ ನೀಡಿರುವ ದೃಢೀಕೃತ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ ಪ್ರತಿ
* ಹೆರಿಗೆಯಾದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಾರಾಂಶದ ಪ್ರತಿಯನ್ನು ಸಲ್ಲಿಸಬೇಕು
* ಮಗುವಿನ ಜನನ ಪ್ರಮಾಣಪತ್ರ
* ಮಗುವಿನ ಜನನದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು
* ಎರಡನೇ ಮಗುವಿಗೆ  ಹೆರಿಗೆ ಸಹಾಯಧನ ಕೋರುವ ಸಂದರ್ಭದಲ್ಲಿ ‘ಎರಡನೇ ಮಗು’ ಎಂದು ಅಫಿಡವಿಟ್ ಸಲ್ಲಿಸುವುದು
* ವಂತಿಗೆ ಪ್ರಮಾಣ ಪತ್ರವನ್ನು ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಸಲ್ಲಿಸುವುದು
ಹೀಗೆ ನಿರ್ಮಾಣ ಕಾರ್ಮಿಕ ಮಹಿಳೆಯು ಹೆರಿಗೆ ಧನ ಸಹಾಯ ಅಥವಾ ತಾಯಿ ಲಕ್ಷ್ಮೀ ಬಾಂಡ್ ಅನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿದ ನಂತರ ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಅರ್ಜಿ ಪ್ರಕ್ರಿಯೆ ನಡೆಯುತ್ತದೆ, ಅಗತ್ಯವಿದಲ್ಲಿ ಪರಿಶೀಲನೆಯನ್ನು ಅಧಿಕಾರಿಗಳು ಮಾಡುತ್ತಾರೆ. ನಂತರ ಆ ಅರ್ಜಿಯು ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಆಗಿ ಅನುಮೋದನೆ ಪಡದುಕೊಳ್ಳುತ್ತದೆ.
ಈ ಆರ್ಥಿಕ ನೆರವು ಪಡೆಯಲು ಅರ್ಜಿದಾರರು ಸ್ಥಳೀಯ ಕಾರ್ಮಿಕ ನಿರೀಕ್ಷಕರ ಬಳಿ ಅರ್ಜಿಯನ್ನು ಸಲ್ಲಿಸಬಹುದು.
ಈ ಬಗೆಗೆ ಹೆಚ್ಚಿನ ಮಾಹಿತಿಗಾಗಿ ‘ ವಾಯ್ಸ್ ಆಫ್ ವರ್ಕರ್ಸ್’ ಪತ್ರಿಕೆಯ ಕಚೇರಿಗೆ ಬೇಟಿ ನೀಡಿ ಪಡೆದುಕೊಳ್ಳಬಹುದು