ಕಾರ್ಮಿಕರಿಗೆ ವೈದ್ಯಕೀಯ ನೆರವು
ಕಾರ್ಮಿಕರ ಗಂಭೀರ ಆರೋಗ್ಯ ಸಮಸ್ಯೆಗಳ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಹಾಯ ಧನ


ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಮಿಕ ಇಲಾಖೆಯ ಅಂಗ ಸಂಸ್ಥೆಯಾಗಿದೆ. ಇದರ ಸ್ಥಾಪನೆಯ ಉದ್ದೇಶ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಹಲವು ರೀತಿ ಕಲ್ಯಾಣ ಯೋಜನೆಗಳನ್ನು ರೂಪಿಸಿ, ಅವುಗಳಿಗೆ ಸಂಬಂಧಿಸಿದಂತೆ ಪ್ರೋತ್ಸಾಹ ಧನವನ್ನು ನೀಡುವುದೇ ಆಗಿದೆ.
ಈ ಮೂಲಕ ಕಾರ್ಮಿಕ ಕುಟುಂಬದ ಸಮಗ್ರ ಹಿತವನ್ನು ಕಾಪಾಡುವ ಗುರಿ ಹೊಂದಿದೆ.
ಈ ಮಂಡಳಿಯು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಕಾರ್ಮಿಕರಿಗೆ ವೈದ್ಯಕೀಯ ನೆರವು ಯೋಜನೆಯು ಒಂದಾಗಿದೆ. ಈ ಯೋಜನೆಯಡಿ ಕಾರ್ಮಿಕನ ಹಲವು ಗಂಭೀರ ಆರೋಗ್ಯ ಸಮಸ್ಯೆಗಳ ಭಾಗವಾಗಿ ಶಸ್ತ್ರಚಿಕಿತ್ಸೆ ಗಳಿಗೆ ಮತ್ತು ಆರೋಗ್ಯ ತಪಾಸಣೆಗೆ ಅನುಕೂಲವಾಗಲೆಂದು ಸ್ವಲ್ಪ ಸಹಾಯ ಧನವನ್ನು ನೀಡುತ್ತದೆ.
ಈ ಕಲ್ಯಾಣ ಯೋಜನೆಯ ಪ್ರಯೋಜನ ಪಡೆಯಲು ಕಾರ್ಮಿಕನ ಮಾಸಿಕ ಸಂಬಳ ರೂ.15,000/- ಗಳಿಗೆ ಮೀರಿರಬಾರದು. ಕಾರ್ಮಿಕರನ ವಯೋಮಿತಿ 18-60 ರ ನಡುವೆ ಇರಬೇಕು.
ಯಾವ್ಯಾವ ಚಿಕಿತ್ಸೆಗಳಿಗೆ ನೆರವು
ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್, ಕ್ಯಾನ್ಸರ್, ಆಂಜಿಯೋಪ್ಲಾಸ್ಟಿ, ಕಣ್ಣು, ಅರ್ಥೊಪೆಡಿಕ್, ಗರ್ಭಕೋಶದ ಶಸ್ತ್ರ ಚಿಕಿತ್ಸೆ, ಗಾಲ್ ಬ್ಲಾಡರ್ ತೊಂದರೆ, ಮೆದುಳಿನ ರಕ್ತಸ್ರಾವ ಚಿಕಿತ್ಸೆಗೆ ರೂ. 1,000/- ದಿಂದ ರೂ,10,000/-ವರೆಗೆ ಮತ್ತು ಆರೋಗ್ಯ ತಪಾಸಣೆಗೆ ರೂ. 500/-ರಿಂದ ರೂ. 1000/-ವರೆಗೆ ಧನ ಸಹಾಯ ನೀಡಲಾಗುವುದು.
ಈ ಯೋಜನೆ ಅನುಕೂಲವನ್ನು ಕಾರ್ಮಿಕ ಬಾಂಧವರು ತಪ್ಪದೇ ಪಡೆದುಕೊಳ್ಳಬೇಕು. ಯೋಜನೆಗೆ ಸಂಬಂಧ ಪಟ್ಟ ಮಾಹಿತಿಯನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಸಂಪರ್ಕಿಸಿ ಪಡೆಯಬಹುದು. ಈ ಬಗೆಗೆ ಮತ್ತಷ್ಟು ಯೋಜನೆಗಳನ್ನು ನಿಮಗೆ ಪರಿಚಯಿಸುವ ಪ್ರಯತ್ನವನ್ನು ನಿಮ್ಮ ‘ವಾಯ್ಸ್ ಆಫ್ ವರ್ಕರ್ಸ್’ ಮಾಡುತ್ತದೆ. ಅವುಗಳ ಮಾಹಿತಿಗಾಗಿ ನಿಮ್ಮ ‘ವಾಯ್ಸ್ ಆಫ್ ವರ್ಕರ್ಸ್’ ವೆಬ್ ಸೈಟ್ ಅನ್ನು ಫಾಲೋ ಮಾಡಿ.