Take a fresh look at your lifestyle.

ಟೊಯೋಟಾ ಕಾರ್ಮಿಕರನ್ನು ಬೇಟಿ ಮಾಡಿದ ಸಚಿವ ಯೋಗೇಶ್ವರ್

ಟಿಕೆಎಂ ಆಡಳಿತ ಮಂಡಳಿಯ ಸನ್ನಡತೆ ಪತ್ರದ ಷರತ್ತಿಗೆ ವಿರೋಧ ವ್ಯಕ್ತಪಡಿಸುತ್ತಾ, ನೌಕರರ ಆತ್ಮಗೌರವಕ್ಕೆ ವಿರುದ್ಧವಾದ ಲಾಕ್ ಔಟ್ ತೆರವನ್ನು ಖಂಡಿಸಿ ಕಾರ್ಮಿಕ ಸಂಘ ಹೋರಾಟವನ್ನು ಮುಂದುವರೆಸಿದೆ

0
post ad

ಬಿಡದಿ: ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯ ಕಾರ್ಮಿಕರನ್ನು ನೂತನ ಸಚಿವರಾದ ಸಿ.ಪಿ.ಯೋಗೇಶ್ವರ್ ಬೇಟಿ ಮಾಡಿದರು.
ನೂತನವಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಯೋಗೇಶ್ವರ್ ರವರಿಗೆ ಟಿಕೆಎಂ ಕಾರ್ಮಿಕರು ಹೂಗುಚ್ಚ ನೀಡಿ ಅಭಿನಂದನೆ ತಿಳಿಸಿದರು.

https://youtu.be/R4xCQdOXOTI
ಈ ವೇಳೆ, ಕಾರ್ಮಿಕರಿಗೆ ಎರಡು ಮೂರು ದಿನಗಳಲ್ಲಿ ಸಮಸ್ಯೆಯನ್ನು ಈಡೇರಿಸುವ ಭರವಸೆಯನ್ನು  ಸಚಿವರು ನೀಡಿದರು.

 ಇನ್ನು, ಟಿಕೆಎಂ ಆಡಳಿತ ಮಂಡಳಿಯ ಸನ್ನಡತೆ ಪತ್ರದ ಷರತ್ತಿಗೆ ವಿರೋಧ ವ್ಯಕ್ತಪಡಿಸುತ್ತಾ, ನೌಕರರ ಆತ್ಮಗೌರವಕ್ಕೆ ವಿರುದ್ಧವಾದ ಲಾಕ್ ಔಟ್ ತೆರವನ್ನು ಖಂಡಿಸಿ ಕಾರ್ಮಿಕ ಸಂಘ ಹೋರಾಟವನ್ನು ಮುಂದುವರೆಸಿದೆ..

ಟಿಕೆಎಂ ಆಡಳಿತ ಮಂಡಳಿಯ ಸನ್ನಡತೆ ಪತ್ರದ ಷರತ್ತಿಗೆ ವಿರೋಧ ವ್ಯಕ್ತಪಡಿಸುತ್ತಾ, ನೌಕರರ ಆತ್ಮಗೌರವಕ್ಕೆ ವಿರುದ್ಧವಾದ ಲಾಕ್ ಔಟ್ ತೆರವನ್ನು ಖಂಡಿಸಿ ಕಾರ್ಮಿಕ ಸಂಘ ಹೋರಾಟವನ್ನು ಮುಂದುವರೆಸಿದೆ.
ಆಡಳಿತ ವರ್ಗ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ಸಂಪೂರ್ಣವಾಗಿ ಶಮನವಾಗದ ಹಿನ್ನಲೆಯಲ್ಲಿ ಕಾರ್ಮಿಕರು ಹಮ್ಮಿಕೊಂಡಿರುವ ಸ್ವಾಭಿಮಾನಿ ಹೋರಾಟವು 71 ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು ಎಂದಿನಂತೆ ಹೋರಾಟದಲ್ಲಿ ಭಾಗಿಯಾಗಿ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
ಟಿಕೆಎಂ ಆಡಳಿತ ವರ್ಗ ಷರತ್ತು ವಿಧಿಸಿ ಬೀಗಮುದ್ರೆಯನ್ನು ತೆರವುಗೊಳಿಸಿರುವುದರಿಂದ ಅರವತ್ತಾರು ಕಾರ್ಮಿಕರು ಅತಂತ್ರಕ್ಕೆ ಒಳಗಾಗಿದ್ದಾರೆ. ಆದರೆ, ಪ್ರತಿಭಟನೆಯ ಮೂಲ ಕಾರಣಗಳನ್ನು ಬದಿಗಿಟ್ಟು ತೋರ್ಪಡಿಕೆಯ ಲಾಕ್ ಔಟ್ ತೆರವುಗೊಳಿಸಿರುವ ಆಡಳಿತ ಮಂಡಳಿಯ ಧೋರಣೆಯಿಂದ ಬೇಸತ್ತಿರುವ ಕಾರ್ಮಿಕರು ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸಲು ಪಣ ತೊಟ್ಟಿದ್ದಾರೆ.


ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು  66 ಕಾರ್ಮಿಕರ ಅಮಾನತ್ತು, 71 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.