Take a fresh look at your lifestyle.

ಕಾರ್ಮಿಕರ ನೋಂದಾಣಿಗೆ ಶ್ರಮಿಸುವಂತೆ ಶಾಸಕರ ಮನವಿ

ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಿಗುವ ನಾನಾ ಸವಲತ್ತುಗಳ ಬಗೆಗೆ ಅರಿವು ಮೂಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ

0
post ad

ಚಿತ್ರದುರ್ಗ : ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಲು ನೆರವಾಗುವ ಮೂಲಕ ಕಾರ್ಮಿಕರಿಗೆ, ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಒದಗಿಸಲು ಶ್ರಮಿಸುವಂತೆ ಕಾರ್ಮಿಕ ಮುಖಂಡರಿಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸಲಹೆ ನೀಡಿದರು. ನಗರದ ಹೊಳಲ್ಕೆರೆ ರಸ್ತೆಯಲ್ಲಿ ಸಮೃದ್ಧಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೋಂದಣಿ ಕಾರ್ಯ ಚುರುಕುಗೊಳಿಸಬೇಕು ಹಾಗೂ ಸವಲತ್ತುಗಳು ನೈಜ ಕಾರ್ಮಿಕರಿಗೆ ಸಿಗುವಂತಾಗಬೇಕೆಂದರು.
ಈ ವೇಳೆ, ತಾಲೂಕಿಗೆ ಇನ್ನು 10 ಸಾವಿರ ಕೋವಿಡ್‌ ಪರಿಹಾರ್ಥ ಆಹಾರ ಧಾನ್ಯಗಳ ಕಿಟ್‌ ಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿರುವುದಾಗಿ ತಿಳಿಸಿದರು. ಕಾರ್ಮಿಕ ಅಧಿಕಾರಿ ಡಿ.ರಾಜಣ್ಣ ಇಲಾಖೆಯಿಂದ ಕಾರ್ಮಿಕರಿಗೆ ಸಿಗುವ ನಾನಾ ಸವಲತ್ತುಗಳ ಕುರಿತು ವಿವರಿಸಿದರು. ಸಂಘದ ಅಧ್ಯಕ್ಷ ಎನ್‌.ರಮೇಶ್‌, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ವೆಂಕಟೇಶ್‌, ಉಪಾಧ್ಯಕ್ಷೆ ಶ್ವೇತಾ ವಿರೇಶ್‌,ಸದಸ್ಯ ಶಶಿಧರ್‌, ಕಾರ್ಮಿಕ ನಿರೀಕ್ಷಕಿ ಟಿ.ಕುಸುಮ,ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಸತೀಶ್‌ ಹಾಗೂ ಮುಖಂಡ ಎಂ.ಭೈರೇಶ್‌ ಮತ್ತಿತತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.