Take a fresh look at your lifestyle.

ಬಿಇಎಂಎಲ್ ಪ್ರತಿಭಟನೆಗೆ ಶಾಸಕಿ ಸಾಥ್

ಕೆ.ಜಿ.ಎಫ್. ನ ಆರ್.ಟಿ.ಒ. ಕಛೇರಿ ಬಳಿಯಿಂದ ಬೆಮೆಲ್ ಮೈನ್ ಗೇಟ್ ಬಳಿ 10 ದಿನಗಳಿಂದ ಸರಣಿ ಧರಣಿ ಹಮ್ಮಿಕೊಂಡಿರುವ ಕಾರ್ಮಿಕರಿಗೆ ಶಾಸಕಿ ಬೆಂಬಲವನ್ನು ಘೋಷಿಸಿದರು.

0
post ad

ಕೆಜಿಎಫ್ : ಬಿ.ಇ.ಎಂ.ಎಲ್. ಕಾರ್ಖಾನೆಯ ಖಾಸಗಿಕರಣದ ವಿರುದ್ಧ ಪ್ರತಿಭಟನೆಯಲ್ಲಿ ಶಾಸಕಿ ರೂಪಕಲಾ ಎಂ ಶಶಿಧರ್ ಭಾಗವಹಿಸಿದ್ದರು.
ಬೆಮೆಲ್ ಕಾರ್ಮಿಕರ ಜೊತೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಜೊತೆಗೂಡಿದ್ದರು‌. ಕೆ.ಜಿ.ಎಫ್. ನ ಆರ್.ಟಿ.ಒ. ಕಛೇರಿ ಬಳಿಯಿಂದ ಬೆಮೆಲ್ ಮೈನ್ ಗೇಟ್ ಬಳಿ 10 ದಿನಗಳಿಂದ ಸರಣಿ ಧರಣಿ ಹಮ್ಮಿಕೊಂಡಿರುವ ಕಾರ್ಮಿಕರಿಗೆ ಶಾಸಕಿ ಬೆಂಬಲವನ್ನು ಘೋಷಿಸಿದರು.
ಈ ವೇಳೆ ಮಾತನಾಡಿದ ಶಾಸಕಿ ಕೇಂದ್ರ ಸರ್ಕಾರದ ಹಲವು ಅವೈಜ್ಞಾನಿಕ ನಿರ್ದಾರಗಳ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಅದರಲ್ಲೂ ಲಾಭದಲ್ಲಿರುವ ಬೆಮೆಲ್ ಕಾರ್ಖಾನೆಯನ್ನು ಖಾಸಗೀರಣ ಮಾಡುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.
ಬೆಮೆಲ್ ಕಾರ್ಖಾನೆಯ ಖಾಸಗೀಕರಣದಿಂದ ತುಳಿತಕ್ಕೆ ಒಳಗಾದ ವರ್ಗದವರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಕೆ.ಜಿ.ಎಫ್, ಬೆಂಗಳೂರು ಹಾಗೂ ಮೈಸೂರು ವ್ಯಾಪ್ತಿಯಲ್ಲಿ ಅಪಾರವಾಗಿ ಉಧ್ಯೋಗ ವಂಚಿತರಾಗಲಿದ್ದಾರೆ.

ಬಿ.ಜಿ.ಎಂ.ಎಲ್. ಮುಚ್ಚಿದ ನಂತರ ಕೋಲಾರ ಜಿಲ್ಲೆಯ ಕೆ.ಜಿ.ಎಫ್. ನಲ್ಲಿ ಉಳಿದ ಒಂದೇ ಒಂದು ಸಾರ್ವಜನಿಕ ಉದ್ದಿಮೆ ಎಂದರೆ ಬೆಮೆಲ್, ಇದರ ಖಾಸಗೀಕರಣದ ವಿರುದ್ಧ ಉಗ್ರ ಹೋರಾಟಕ್ಕೆ ಯಾವ ಹಂತದವರೆಗಾದರೂ ನಿಮ್ಮ ಜೊತೆ ನಿಲ್ಲುವುದಾಗಿ ಬೆಮೆಲ್ ಕಾರ್ಖಾನೆಯ ಕಾರ್ಮಿಕರಿಗೆ ಈ ಸಮಯದಲ್ಲಿ ಶಾಸಕರು ಭರವಸೆ ನೀಡಿದರು.