Take a fresh look at your lifestyle.

36 ನೇ ದಿನಕ್ಕೆ ಕಾಲಿಟ್ಟ ಟಿಕೆಎಂ ಹೋರಾಟ, ಕಾರ್ಮಿಕ ಸಂಘಟನೆಗಳ ಬೆಂಬಲ

ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಆಡಳಿತ ಮಂಡಳಿ ನಾನಾ ಮಾರ್ಗಗಳಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಗಳು ಒಮದು ಕಡೆ ನಡೆಯುತ್ತಿದ್ದರೆ.. ಮತ್ತೊಂದು ಕಡೆ ರಾಜ್ಯದ ಹಲವು ಕಾರ್ಮಿಕ ಸಂಘಗಳು, ಸಂಘಟನೆಗಳು, ಒಕ್ಕೂಟಗಳು ಕಾರ್ಮಿಕರಿಗೆ ಬೆಂಬಲ ಸೂಚಿಸುತ್ತಿವೆ

0
post ad

ಬೆಂಗಳೂರು/ರಾಮನಗರ : ಟಿಕೆಎಂ ಕಂಪೆನಿ ಆಡಳಿತ ಮಂಡಳಿ ಕಾರ್ಮಿಕರು ಪ್ರತಿಭಟನೆಗೆ ಬಳಸುತ್ತಿದ್ದ ಪೆಂಡಾಲ್ಅನ್ನು ಪರೋಕ್ಷವಾಗಿ ತೆರವುಗೊಳಿಸಿದ್ದಕ್ಕೆ ಕೆರಳಿರುವ ಕಾರ್ಮಿಕರು ಪಟ್ಟು ಬಿಡದೆ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.
ಟಿಕೆಎಂಇಯು ಹಮ್ಮಿಕೊಂಡಿರುವ ಸ್ವಾಭಿಮಾನಿ ಹೋರಾಟವು 36ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಹಲವು ಕಾರ್ಮಿಕ, ರೈತ ಸಂಘಟನೆಗಳ ಮುಖಂಡರು ಮುಷ್ಕರದ ಸ್ಥಳಕ್ಕೆ ಬೇಟಿ ನೀಡಿ ತಮ್ಮ ಬೆಂಬಲವನ್ನು ಘೋಷಿಸಿದರು.
36ನೇ ದಿನಗಳಿಂದ ನಡೆದು ಬರುತ್ತಿರುವ ಕಾರ್ಮಿಕರ ಹೋರಾಟಕ್ಕೆ ಇಂದು AITUC ಸಂಘಟನೆ ಹಾಗೂ ಹೋಂಡ ಕಂಪನಿಯ ಕಾರ್ಮಿಕ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದವು.
ಈ ವೇಳೆ ಕಾರ್ಮಿಕರು ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ವಿಧಾನಸೌದ ಚಲೋ ಮಾಡುವುದಾಗಿ ಎಚ್ಚರಿಸಿದರು.
AITUC ರಾಜ್ಯ ಘಟಕದ ಮತ್ತು ಆನೇಕಲ್ ತಾಲ್ಲೂಕು ಸಮಿತಿ, ಹೋಂಡ ಕಂಪೆನಿಯ ಕಾರ್ಮಿಕ ಸಂಘ HMSIE, ಕಾಂಟಿನೆಂಟಲ್ ಕಾಂಪೋನೆಂಟ್ಸ್ ಇಂಡಿಯಾದ ಕಾರ್ಮಿಕ ಸಂಘಗಳು ಪ್ರತಿಭಟನಾ ಸ್ಥಳಕ್ಕೆ ದಾವಿಸಿ ಬೆಂಬಲ ಘೋಷಿಸಿದವು.
AITUC ರಾಮನಗರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಂ. ದೀಪಕ್, ಉಪಾಧ್ಯಕ್ಷ ಹನುಮಂತಪ್ಪ, ಅನೇಕಲ್ ತಾಲ್ಲೂಕು ಸಮಿತಿ ಅಧ್ಯಕ್ಷ ನಾರಾಯಣ ಸ್ವಾಮಿ, ಬಸವರಾಜು, HMSIEನ ಮೋಹನ್, ಪವನ್, ನವೀನ ಕುಮಾರ್, ಕೃಷ್ಣ, ಸಿದ್ದಿ ಸೇರಿದಂತೆ ಕಾಂಟಿನೆಂಟಲ್ ಕಾಂಪೋನೆಂಟ್ಸ್ ಇಂಡಿಯಾದ ಕಾರ್ಮಿಕ ಸಂಘದ ವಿಜಯ್ ಕುಮಾರ್, ಮನೋಜ್ ಕುಮಾರ್, ಕೃಷ್ಣಪ್ಪ, ಚಂದ್ರಶೇಖರ್ ಮುಂತಾದವರು ಸ್ಥಳಕ್ಕೆ ಆಗಮಿಸಿ ಕಾರ್ಮಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಕಚೇರಿಗಳಿಗೆ ಸೀಮಿತವಾದ ಸರ್ಕಾರಿ ಆದೇಶಗಳು ಬಿಕ್ಕಟ್ಟನ್ನು ಪರಿಹರಿಸಲು ವಿಫಲವಾಗುತ್ತಿದ್ದು, ಕಾರ್ಮಿಕ ಇಲಾಖೆಯ ಅಧಿಕಾರಿಗಳಂತೂ ಕಣ್ಮುಚ್ಚಿ ಕೂತಿದ್ದಾರೆ.
ಪೆಂಡಾಲ್ ಗೆ ಪರ್ಯಾಯವಾಗಿ ಹಾಗೂ ಆಡಳಿತ ವರ್ಗದ ಮನೋಭಾವನೆಯನ್ನು ಬಿಂಬಿಸುವ ಛತ್ರಿಯನ್ನು ಬಳಸಿ ವಿನೂತನವಾಗಿ “ಛತ್ರಿ ಚಳವಳಿ”ಯನ್ನು ಕಾರ್ಮಿಕರು ಇತ್ತೀಚೆಗೆ ಆರಂಭಿಸಿದ್ದರು.
ಈ ಬೆಳವಣಿಗೆಗಳ ನಡುವೆ ಕಾರ್ಮಿಕರಿಗೆ ಆತ್ಮ ಸ್ಥೈರ್ಯ ತುಂಬಲು ಹಲವು ಸಂಘಟನೆಗಳು ಸ್ಥಳಕ್ಕೆ ದಾವಿಸಿ, ನೈತಿಕ ಬೆಂಬಲ ಸೂಚಿಸಿದವು.