Take a fresh look at your lifestyle.

ನೇತಾಜಿ ಪುತ್ಥಳಿ ಬಳಿ ಸುಭಾಷ್ ಚಂದ್ರ ಬೋಸ್ ರ ಜನ್ಮ ದಿನಾಚರಣೆ

ಸುಭಾಷ್ ಚಂದ್ರ ಬೋಸ್ ರವರ ಆದರ್ಶಗಳನ್ನು ಪಾಲನೆ ಮಾಡುವ ಪ್ರತಿಜ್ಞೆಯನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಬೋಧಿಸಿದರು

0
post ad

ಬೆಂಗಳೂರು : ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125 ನೇ ಜನ್ಮದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನೇತಾಜಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
ನಂತರ ಸಿಎಂ, ಸುಭಾಷ್ ಚಂದ್ರ ಬೋಸ್ ರವರ ಆದರ್ಶಗಳನ್ನು ಪಾಲನೆ ಮಾಡುವ ಪ್ರತಿಜ್ಞೆಯನ್ನು ಬೋಧಿಸಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಶೋಧನೆ ಮತ್ತು ಬಹು ಅಭಿವೃದ್ಧಿ ಟ್ರಸ್ಟ್ ವಿಧಾನ ಸೌಧದಲ್ಲಿ ಪುತ್ಥಳಿಯನ್ನು ಸ್ಥಾಪಿಸಿದೆ, ಅವರ ಭಾವಚಿತ್ರಕ್ಕೆ ಪ್ರತಿ ವರ್ಷ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುತ್ತಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದ ಪ್ರಯುಕ್ತ ಇನ್ನು ಮುಂದೆ ಪ್ರತಿವರ್ಷ ಜನವರಿ 23 ರಂದು ಪರಾಕ್ರಮ ದಿನ ಎಂದು ಆಚರಿಸಲಾಗುತ್ತದೆ. ರಕ್ತ ಕೊಡಿ, ಸ್ವಾತಂತ್ರ್ಯ ಕೊಡ್ತೀನಿ ಎಂದು ಯುವಕರನ್ನು ಅವರು ಸಂಘಟಿಸಿದ್ರು. ಯುವಕರಲ್ಲಿ ನೇತಾಜಿ ಬದುಕಿನ ಬಗ್ಗೆ ಅರಿವು ಮೂಡಿಸುವ ಹೊಣೆ ನಮ್ಮೆಲ್ಲರ ಮೇಲೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್, ಟ್ರಸ್ಟ್ ನ ಅಧ್ಯಕ್ಷರಾದ ಜಿಆರ್ ಶಿವಶಂಕರ್, ಉಪಾಧ್ಯಕ್ಷರಾದ ಎಂ. ರಾಜಕುಮಾರ್, ಟ್ರಸ್ಟಿಗಳಾದ ರಾಜ ಯೋಗೀಂದ್ರ ವೀರಯ್ಯ, ಶಾಸ್ತ್ರೀ ಮಠ್ ಗುರೂಜಿ, ಗುರು ಶಾಸ್ತ್ರೀ ಮಠ್, ಜೋಶಿ, ಯುವ ಕಾರ್ಮಿಕ ಮುಖಂಡರಾದ ಸ್ಮರಣ್ ಶಿವಶಂಕರ್, ಲಕ್ಷ್ಮೀಪತಿ ಮುಂತಾದವರು ಭಾಗವಹಿಸಿದ್ದರು.


ಕೇಂದ್ರ ಸರ್ಕಾರ ಸುಭಾಷ್ ಚಂದ್ರ ಬೋಸ್ ರವರ ದಿನಾಚರಣೆಯನ್ನು ಪರಾಕ್ರಮ ದಿವಸ ಎಂದು ಘೋಷಿಸಿ ನೇತಾಜಿರವರಿಗೆ ಗೌರವ ಸೂಚಿಸಿದೆ.
ಈ ವರ್ಷ ಪೂರ್ತಿ ನೇತಾಜಿರವರ ಕಾರ್ಯಕ್ರಮಗಳನ್ನು ನಡೆಸಲು ಟ್ರಸ್ಟ್ ವಿವಿಧ ಯೋಜನೆಗಳನ್ನು ರೂಪಿಸಿದೆ.