Take a fresh look at your lifestyle.

ಎಂಟಿಆರ್ ಕಾರ್ಮಿಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ದೇಶೀಯ ಆಹಾರೋತ್ಪನ್ನ ಹಾಗೂ ತಿನಿಸುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಟಿಆರ್‌ ಫುಡ್ಸ್‌ ಪ್ರೈವೆಟ್‌ ಲಿಮಿಟೆಡ್‌ ನಲ್ಲಿ ಹಾಲಿ ಸಮಿತಿಯು ಸತತವಾಗಿ ಮೂರನೇ ಬಾರಿಗೆ ನೇಮಕಗೊಂಡಿರುವುದು ವಿಶೇಷ. ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಆಡಳಿತ ವರ್ಗ, ನೌಕರರು, ಸಂಘದ ಸದಸ್ಯರು ಶುಭ ಹಾರೈಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

0
post ad

ಬೆಂಗಳೂರು: ಆಹಾರೋತ್ಪನ್ನ ಹಾಗೂ ತಿನಿಸುಗಳ ಅಪ್ಪಟ ಕನ್ನಡ ಬ್ರಾಂಡ್ ಆಗಿ ಜನಪ್ರಿಯವಾಗಿರುವ ಎಂಟಿಆರ್ ಫುಡ್ಸ್ ಲಿಮಿಟೆಡ್‌ ನಲ್ಲಿ ಕಾರ್ಮಿಕ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಉತ್ಪಾದನಾ ಸಾಮರ್ಥ್ಯ‌ ಮತ್ತು  ಗುಣಮಟ್ಟದಿಂದ ವಿಶ್ವಮಟ್ಟದಲ್ಲಿ ಸ್ಪರ್ಧೆಯನ್ನೊಡ್ಡುತ್ತಿರುವ ಬೆಂಗಳೂರು ಮೂಲದ ಎಂಟಿಆರ್‌ ಫುಡ್ಸ್‌ ಕಂಪನಿಯ ನೌಕರರು ಗುಪ್ತ ಚುನಾವಣೆಯ ಮೂಲಕ ಕಾರ್ಮಿಕ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡರು.
ಮುಂದಿನ ನಾಲ್ಕು ವರ್ಷಗಳ ಕಾಲ ಈ ಚುನಾಯಿತ ಸಮಿತಿಯು ಅಸ್ಥಿತ್ವದಲ್ಲಿರುತ್ತದೆ.


ಫೆಬ್ರವರಿ 6 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಿ ಆರ್ ಶಿವಶಂಕರ್, ಕಾರ್ಯಾಧ್ಯಕ್ಷರಾಗಿ ಧರ್ಮೇಂದ್ರ ಟಿ ಎಸ್, ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಹೆಚ್ ಆರ್, ಪ್ರಧಾನ ಕಾರ್ಯದರ್ಶಿಯಾಗಿ ಮೂರ್ತಿ, ಸಂಘಟನಾ ಕಾರ್ಯದರ್ಶಿಗಳಾಗಿ, ಮಂಜುನಾಥ್ ಎಂ.ಎಸ್, ಸೋಮಶೇಖರ್ ಎಂ.ಎನ್, ಖಚಾಂಚಿಯಾಗಿ ಸುಧೀಂದ್ರ ಎಂ ಇವರನ್ನು ಒಳಗೊಂಡ ಸಮಿತಿಯು  ಆಯ್ಕೆಗೊಂಡಿದ್ದು, ಇಂದು ಫಲಿತಾಂಶವನ್ನು ಪ್ರಕಟಿಸಲಾಗಿದೆ.
ದೇಶೀಯ ಆಹಾರೋತ್ಪನ್ನ ಹಾಗೂ ತಿನಿಸುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಟಿಆರ್‌ ಫುಡ್ಸ್‌ ಪ್ರೈವೆಟ್‌ ಲಿಮಿಟೆಡ್‌ ನಲ್ಲಿ ಹಾಲಿ ಸಮಿತಿಯು ಸತತವಾಗಿ ಮೂರನೇ ಬಾರಿಗೆ ನೇಮಕ ಗೊಂಡಿರುವುದು ವಿಶೇಷ. ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಆಡಳಿತ ವರ್ಗ, ನೌಕರರು, ಸಂಘದ ಸದಸ್ಯರು ಶುಭ ಹಾರೈಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಆಹಾರ ಉದ್ಯಮದಲ್ಲಿ ಎಂಟಿಆರ್ ಸಂಸ್ಥೆ ಮಾಡಿರುವ ಸಾಧನೆ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವಂಥದ್ದು ಎಂಬುದನ್ನು ಯಾರೂ ಮರೆಯುವಂತಿಲ್ಲ. ನಾರ್ವೆ ಮೂಲದ ಓರ್‌ಕ್ಲಾ ಕಂಪನಿಯು 2007ರಲ್ಲಿ ಎಂಟಿಆರ್‌ ಅನ್ನು ಖರೀದಿಸಿತ್ತು. ಇಂದು ಕಂಪನಿಯು ವಾರ್ಷಿಕ ಸಾವಿರಾರು ಕೋಟಿ ವಹಿವಾಟನ್ನು ನಡೆಸುತ್ತಿದೆ.