Take a fresh look at your lifestyle.

NTPC ಕಾರ್ಮಿಕ ಸಾವು ಸಹೋದ್ಯೋಗಿಗಳ ಪ್ರತಿಭಟನೆ

ಆಡಳಿತ ಮಂಡಳಿ ಮೃತ ಕಾರ್ಮಿಕನ ಬಗೆಗೆ ಸಂತಾಪವನ್ನು ಸೂಚಿಸದ ಕ್ರಮವನ್ನು ಕಾರ್ಮಿಕರು ಖಂಡಿಸಿ, ಪರಿಹಾರಕ್ಕಾಗಿ ಒತ್ತಾಯಿಸಿದರು

0
post ad

ವಿಜಯಪುರ: ಅಪಘಾತದಲ್ಲಿ ಮೃತ ಪಟ್ಟ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಮೃತನ ಶವವಿಟ್ಟು ಸಹೋದ್ಯೋಗಿಗಳು ಪ್ರತಿಭಟನೆ ನಡೆಸಿದರು.
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಎನ್.ಟಿ.ಪಿ.ಸಿ. ಘಟಕದಲ್ಲಿ ಈ ಘಟನೆ ನಡೆದಿದ್ದು,
ಆಡಳಿತ ಮಂಡಳಿ ಮೃತ ಕಾರ್ಮಿಕನ ಬಗೆಗೆ ಸಂತಾಪವನ್ನು ಸೂಚಿಸದ ಕ್ರಮವನ್ನು ಕಾರ್ಮಿಕರು ಖಂಡಿಸಿದರು.
ಎನ್.ಟಿ.ಪಿ.ಸಿ ಕಾರ್ಮಿಕ ರಮೇಶ ಉಳ್ಳಾಗಡ್ಡಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಜೆಸಿಬಿ ಡಿಕ್ಕಿ ಹೊಡೆದು ಗಾಯಗೊಂಡು, ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ನೆನ್ನೆ ನಡೆದಿತ್ತು.
ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಶವ ಇರಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ವಿಜಯಪುರ ಮೂಲದ ರಮೇಶ ಉಳ್ಳಾಗಡ್ಡಿ (38) ಕೂಡಗಿ ಎನ್.ಟಿ.ಪಿ.ಸಿ. ಘಟಕದಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.
ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಮೃತನ ಸಂಬಂಧಿಕರು, ಗುತ್ತಿಗೆ ಕಾರ್ಮಿಕರು ಎನ್.ಟಿ.ಪಿ.ಸಿ ಘಟಕದ ಎದುರು ಪ್ರತಿಭಟನೆ ನಡೆಸುತ್ತಿದರು.
ಎನ್.ಟಿ.ಪಿ.ಸಿ. ಘಟಕದಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ ಸಾಯಿ ಉರ್ಜಾ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ರಮೇಶ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.
ಎನ್.ಟಿ.ಪಿ.ಸಿ. ಘಟಕದ ಜೆಸಿಬಿ ಆಪರೇಟರ್ ನ  ನಿರ್ಲಕ್ಷ್ಯವೇ ರಮೇಶ ಅಪಘಾತಕ್ಕೆ ಕಾರಣವಾಗಿತ್ತು ಎಂಬುದು ಕಾರ್ಮಿಕರ ವಾದ. ಅವಗಡದ ಪರಿಣಾಮ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ, ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರಮೇಶ ಮೃತಪಟ್ಟಿದ್ದನು.
ಪ್ರಕರಣ ಸಂಬಂಧ ಕೂಡಗಿ ಎನ್ ಟಿಪಿಸಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.