ಬೆಮೆಲ್ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಯಾರಿ
ಬೆಂಗಳೂರು ಬಿಇಎಂಎಲ್ ಕಾರ್ಮಿಕ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕಿನ ಶ್ರೀ ಭೂದೇವಿ ಸಮೇತ ಭೂವರಾಹನಾಥ ಸ್ವಾಮಿ" ಸನ್ನಿಧಿಗೆ ಬೇಟಿ ನೀಡಿ ಸಂಸ್ಥೆಯ ಉಳಿವಿಗೆ ದೇವರಲ್ಲಿ ಪ್ರಾರ್ಥನೆ ನಡೆಸಿದರು


ಬೆಂಗಳೂರು : ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ಯಮ ವಿರೋಧಿ ನೀತಿಗಳು, ಖಾಸಗೀಕರಣ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಕನಿಷ್ಠ ಬೆಲೆಗೆ ಭೂಮಿಗಳ ಮಾರಾಟ ಮತ್ತು ಬಂಡವಾಳ ಹಿಂತೆಗೆತ, ಕಾರ್ಮಿಕ ವಿರೋಧಿ ನೀತಿಗಳು, ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಮುಷ್ಕರ” ಕ್ಕೆ ಬಿಇಎಂಎಲ್ ನೌಕರರು ಮುಂದಾಗಿದ್ದಾರೆ.
ಇದರ ಪೂರ್ವಭಾವಿ ತಯಾರಿ ಭಾಗವಾಗಿ ಬೆಮೆಲ್ ಕಾರ್ಮಿಕ ಸಂಘಟನೆ ಸಿದ್ಧತೆಯ ಸಭೆಯು ದೊಮ್ಮಲೂರು ಶ್ರೀನಿವಾಸ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಅಭೂತಪೂರ್ವ ಮನ್ನಣೆ ಸಿಕ್ಕಿದ್ದು, ಶೀಘ್ರದಲ್ಲೆ ಹೋರಾಟದ ರೂಪರೇಶೆಗಳನ್ನು ಬಿಡುಗಡೆ ಮಾಡುವ ಸುಳಿವು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಕಾರ್ಮಿಕ ಸಂಘದ ಕಡೆಯಿಂದ ದೊರೆತಿದೆ.
ಸಂಸ್ಥೆ ಉಳಿವಿಗಾಗಿ ದೇವರ ಮೊರೆ ಹೋದ ಕಾರ್ಮಿಕ ಸಂಘ
ಬೆಂಗಳೂರು ಬಿಇಎಂಎಲ್ ಕಾರ್ಮಿಕ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕಿನ ಶ್ರೀ ಭೂದೇವಿ ಸಮೇತ ಭೂವರಾಹನಾಥ ಸ್ವಾಮಿ” ಸನ್ನಿಧಿಗೆ ಬೇಟಿ ನೀಡಿ ಸಂಸ್ಥೆಯ ಉಳಿವಿಗೆ ದೇವರಲ್ಲಿ ಪ್ರಾರ್ಥನೆ ನಡೆಸಿದರು.
ಸಾರ್ವಜನಿಕ ಉದ್ಯಮ ಉಳಿಯಲಿ , ದೇಶ ಉಳಿಯಲಿ ಬಿಇಎಂಎಲ್ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಬಾರದೆಂದು ದೇವರಿಗೆ ಹರಕೆಯನ್ನು ಕಾರ್ಮಿಕ ಸಂಘದ ಸದಸ್ಯರು ಮಾಡಿಕೊಂಡಿದೆ.
ಕೇಂದ್ರ ಸರ್ಕಾರವು ಬೃಹತ್ ರಕ್ಷಣಾ ವಲಯದ ಉದ್ಯಮವಾದ ಬೆಮೆಲ್ ನ ತನ್ನ ಶೇಕಡ 54.03 ಷೇರಿನಲ್ಲಿ ಶೇಕಡ 26 ರಷ್ಟು ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಬಿಡ್ ಅನ್ನು ಕರೆದಿದ್ದು ಈಗಾಗಲೇ ಖಾಸಗೀಕರಣದ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಸಂಸ್ಥೆಯ ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರುವುದರಿಂದ ಹಾಗೂ ಈ ದೇಶದ ಸಂಪತ್ತನ್ನು ಬಹಳ ಕಡಿಮೆ ಮೊತ್ತಕ್ಕೆ ಖಾಸಗಿಯವರ ಪಾಲಾಗುವುದನ್ನು ಸಂಸ್ಥೆಯ ಒಂಬತ್ತು ಘಟಕಗಳ ಉದ್ಯೋಗಿಗಳು ಮತ್ತು ಕಾರ್ಮಿಕ ಸಂಘಟನೆಗಳು ವಿರೋಧಿಸಿ ಹೋರಾಟದ ಹಾದಿ ತುಳಿದಿದ್ದಾರೆ.