Take a fresh look at your lifestyle.

ಬಿಇಎಂಎಲ್ ಖಾಸಗೀಕರಣ ವಿರೋಧಿಸಿ ದ್ವಾರ ಸಭೆ

ಈ ದ್ವಾರ ಸಭೆಯಲ್ಲಿ ಕರುನಾಡು ಸೇವಕರು ಸಂಘಟನೆ ರಾಜ್ಯಾಧ್ಯಕ್ಷರಾದ ರೂಪೇಶ್ ರಾಜಣ್ಣ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ

0
post ad

ಬೆಂಗಳೂರು : ಲಾಭದಾಯಕ ಸಂಸ್ಥೆಯಾಗಿರುವ ಬಿಇಎಂಎಲ್ ಉದ್ಯಮವನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ತೀರ್ಮಾನದ ವಿರುದ್ಧ ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗೆಗೆ ಚರ್ಚಿಸಲು ಬಿಇಎಂಎಲ್ ಕಾರ್ಮಿಕ ಸಂಘ ಪೂರ್ವಭಾವಿ ಸಭೆಯನ್ನು ಕರೆದಿದೆ.
ಬಿಇಎಂಎಲ್ ಬೆಂಗಳೂರು ಸಂಕೀರ್ಣದಲ್ಲಿ ಕಾರ್ಮಿಕ ಸಂಘ ಜನವರಿ 11ರ ಮುಂಜಾನೆ 6:30 ಗಂಟೆಗೆ ಆಯೋಜಿಸಿದೆ.
ಸಾರ್ವಜನಿಕ ಉದ್ಯಮ ಬಿಇಎಂಎಲ್ ಸಂಸ್ಥೆಯ ಶೇಕಡ 26ರಷ್ಟು ಷೇರುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಟ್ಟ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಾರ್ಮಿಕರು ಕೈಗೊಳ್ಳಬಹುದಾದ ಕ್ರಮಗಳ ಬಗೆಗೆ ಯೋಜನೆಗಳ ಬಗೆಗೆ ಚರ್ಚೆ, ಅಭಿಪ್ರಾಯ ಸಂಗ್ರಹದಂತಹ ಪ್ರಕ್ರಿಯೆಗಳು ನಡೆಯುವ ಸಾಧ್ಯತೆಗಳು ಇವೆ.
ಈ ದ್ವಾರ ಸಭೆಗೆ ಕರುನಾಡು ಸೇವಕರು ಸಂಘಟನೆಯ ರಾಜ್ಯಾಧ್ಯಕ್ಷರಾದ ರೂಪೇಶ್ ರಾಜಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬಿಇಎಂಎಲ್ ಬೆಂಗಳೂರು ಸಂಕೀರ್ಣದ ಕಾರ್ಮಿಕ ಸಂಘದ ಕಾರ್ಯಕಾರಿ ಸಮಿತಿಯ ಪರವಾಗಿ ದೊಮ್ಮಲೂರು ಶ್ರೀನಿವಾಸರೆಡ್ಡಿ ಈ ಬಗೆಗೆ ಮಾಹಿತಿಯನ್ನು ನೀಡಿದ್ದು, ಘಟಕದ ಕಾರ್ಮಿಕರೆಲ್ಲರೂ ಸಭೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು.
ದ್ವಾರ ಸಭೆಯಲ್ಲಿ ಮುಂದಿನ ಹೋರಾಟದ ಬಗೆಗೆ ಚರ್ಚಿಸಿದ ನಂತರ ಮುಂದಿನ ಕ್ರಮಗಳ ಬಗೆಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ತಿಳಿಸಿದರು.
ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರು ಬಿಎಎಂಎಲ್ ಒಂಬತ್ತು ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.