Take a fresh look at your lifestyle.

ಯಾವ ಕಾರ್ಮಿಕ ಸಂಹಿತೆಯಲ್ಲಿ ಯಾವ ಕಾಯ್ದೆಗಳು ಅಡಕಗೊಂಡಿವೆ ?

ನೂತನ ಕಾರ್ಮಿಕ ಸಂಹಿತೆಗಳಲ್ಲಿ, ಈಗ ಚಾಲ್ತಿಯಲ್ಲಿರುವ ಯಾವ ಕಾರ್ಮಿಕ ಕಾಯ್ದೆಗಳು ಸಂಯೋಜಿತಗೊಂಡಿವೆ ಎಮಬುದರ ಮಾಹಿತಿಯನ್ನು ಒಮ್ಮೆ ನೋಡೋಣ...

0
post ad

ಬೆಂಗಳೂರು/ನವದೆಹಲಿ : ಪ್ರಸ್ತುತ ದೇಶದಲ್ಲಿ ಚಾಲ್ತಿಯಲ್ಲಿರುವ  ಎಲ್ಲಾ ಕಾರ್ಮಿಕ ಕಾನೂನುಗಳನ್ನು  ಅಂದರೆ 29 ಕಾನೂನುಗಳನ್ನು ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಸರಳೀಕರಿಸಿ ರೂಪಿಸಲಾಗಿದೆ. ಹಲವು ದಶಕಗಳಿಂದ ಕಾರ್ಮಿಕ ಕಾನೂನುಗಳ ಬಗೆಗೆ ಪರ ಮತ್ತು ವಿರೋಧ ವಾದಗಳು ಕೇಳಿಬರುತ್ತಿದ್ದ ಹಿನ್ನಲೆಯಲ್ಲಿ ಈ ಹಿಂದಿನ ಹಲವು ಸರ್ಕಾರಗಳು ಈ ಬಗೆಗೆ ಪ್ರಯತ್ನಗಳನ್ನು ಮಾಡಿದ್ದವು. ಈಗಾಗಲೇ 2014 ರಿಂದ  12 ಕಾರ್ಮಿಕ ಕಾಯಿದೆಗಳನ್ನು ರದ್ದುಪಡಿಸಲಾಗಿದೆ. 2021 ರ ಏಪ್ರಿಲ್ ನಿಂದ ಜಾರಿಗೆ ಬರಬಹುದಾದ ಕಾರ್ಮಿಕ ಸಂಹಿತೆಗಳ ಬಗೆಗೆ ಸಾರ್ವಜನಿಕರಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದು, ಈಗ ಚಾಲ್ತಿಯಲ್ಲಿರುವ ಕಾರ್ಮಿಕ ಕಾಯ್ದೆಗಳು ಯಾವ ಸಂಹಿತೆಯಲ್ಲಿ ಸಂಯೋಜಿತಗೊಂಡಿವೆ ಎಂಬುದನ್ನು ನಿವಾರಿಸುವ ಪ್ರಯತ್ನವನ್ನು ಇಲ್ಲಿ ವಿವರಿಸಲಾಗಿದೆ.

ವೇತನ ಸಂಹಿತೆ – 2020
ಈ ಸಂಹಿತೆಯಲ್ಲಿ ಸಂಯೋಜಿತಗೊಂಡ ಕಾನೂನುಗಳ ಸಂಖ್ಯೆ 4, ಅವೆಂದರೆ,
i. ವೇತನ ಪಾವತಿ ಕಾಯ್ದೆ, 1936
ii. ಕನಿಷ್ಠ ವೇತನ ಕಾಯ್ದೆ, 1948
iii. ಬೋನಸ್ ಪಾವತಿ ಕಾಯಿದೆ, 1965
iv. ಸಮಾನ ಸಂಭಾವನೆ ಕಾಯ್ದೆ, 1976

ಐಆರ್ ಸಂಹಿತೆ – 2020 ( ಕೈಗಾರಿಕಾ ಸಂಬಂಧಗಳ ಸಂಹಿತೆ, 2020 ) :
ಈ ಸಂಹಿತೆಯಲ್ಲಿ ಸಂಯೋಜಿತಗೊಂಡ ಕಾನೂನುಗಳ ಸಂಖ್ಯೆ 3, ಅವೆಂದರೆ,

i. ಕಾರ್ಮಿಕ ಸಂಘಟನೆಗಳ ಕಾಯ್ದೆ, 1926
ii. ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯ್ದೆ, 1946
iii. ಕೈಗಾರಿಕಾ ವಿವಾದ ಕಾಯ್ದೆ, 1947

ಒಎಸ್ಎಚ್ ಸಂಹಿತೆ –  2020 ( ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಪರಿಸ್ಥಿತಿಗಳ ಸಂಹಿತೆ, 2020) :

ಈ ಸಂಹಿತೆಯಲ್ಲಿ ಸಂಯೋಜಿತಗೊಂಡ ಕಾನೂನುಗಳ ಸಂಖ್ಯೆ13

i. ಕಾರ್ಖಾನೆಗಳ ಕಾಯ್ದೆ, 1948
ii. ಪ್ಲಾಂಟೇಶನ್ ಕಾರ್ಮಿಕರ ಕಾಯ್ದೆ, 1951
iii. ಗಣಿ ಕಾಯ್ದೆ, 1952
iv. ಕಾರ್ಯನಿರತ ಪತ್ರಕರ್ತರು ಮತ್ತು ಇತರ ಪತ್ರಿಕೆ ನೌಕರರು (ಸೇವೆಯ ಷರತ್ತುಗಳು) ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1955
v. ಕಾರ್ಯನಿರತ ಪತ್ರಕರ್ತರು (ವೇತನ ನಿಗದಿ) ಕಾಯ್ದೆ, 1958
vi. ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆ, 1961
vii. ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗದ ಷರತ್ತುಗಳು) ಕಾಯ್ದೆ, 1966
viii. ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆ, 1970
ix. ಮಾರಾಟ ಉತ್ತೇಜನಾ ನೌಕರರ (ಸೇವೆಯ ಷರತ್ತುಗಳು) ಕಾಯ್ದೆ, 1976
X. ಅಂತರ-ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ಮತ್ತು ಸೇವೆಯ ಷರತ್ತುಗಳ ನಿಯಂತ್ರಣ) ಕಾಯ್ದೆ, 1979
xi. ಸಿನಿಮಾ ಕೆಲಸಗಾರರು ಮತ್ತು ಸಿನೆಮಾ ಥಿಯೇಟರ್ ಕೆಲಸಗಾರರ (ಉದ್ಯೋಗ ನಿಯಂತ್ರಣ) ಕಾಯ್ದೆ, 1981
xii. ಡಾಕ್ ವರ್ಕರ್ಸ್ (ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ) ಕಾಯ್ದೆ, 1986
xiii. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವೆಯ ಷರತ್ತುಗಳ ನಿಯಂತ್ರಣ) ಕಾಯ್ದೆ, 1996

ಸಾಮಾಜಿಕ ಭದ್ರತೆ ಸಂಹಿತೆ – 2020 :
ಈ ಸಂಹಿತೆಯಲ್ಲಿ ಸಂಯೋಜಿತಗೊಂಡ ಕಾನೂನುಗಳ ಸಂಖ್ಯೆ 9, ಅವೆಂದರೆ,

i. ನೌಕರರ ಪರಿಹಾರ ಕಾಯ್ದೆ, 1923
ii. ನೌಕರರ ರಾಜ್ಯ ವಿಮಾ ಕಾಯ್ದೆ, 1948
iii. ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1952
iv. ಉದ್ಯೋಗ ವಿನಿಮಯ ಕೇಂದ್ರಗಳು (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) ಕಾಯ್ದೆ, 1959
v. ಹೆರಿಗೆ ಪ್ರಯೋಜನ ಕಾಯ್ದೆ, 1961
vi. ಪಾವತಿ ಗ್ರಾಚ್ಯುಟಿ ಆಕ್ಟ್, 1972
vii. ಸಿನಿಮಾ ಕೆಲಸಗಾರರ ಕಲ್ಯಾಣ ನಿಧಿ ಕಾಯ್ದೆ, 1981
viii. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ, 1996
ix. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ, 2008