ಬಿಇಎಂಎಲ್ ಖಾಸಗೀಕರಣ ವಿರೋಧಕ್ಕೆ ಕರುನಾಡ ಸೇವಕರ ಬೆಂಬಲ
ಈ ದ್ವಾರ ಸಭೆಗೆ ಮುಖ್ಯ ಅತಿಥಿಗಳಾಗಿ ಕರುನಾಡು ಸೇವಕರು ತಂಡದ ರೂಪೇಶ್ ರಾಜಣ್ಣ ಆಗಮಿಸಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.


ಬೆಂಗಳೂರು : ಬಿಇಎಂಎಲ್ ಬೆಂಗಳೂರು ಸಂಕೀರ್ಣದಲ್ಲಿ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಆಯೋಜಿಸಿದ್ದ ದ್ವಾರ ಸಭೆಯಲ್ಲಿ ಕನ್ನಡಪರ ಸಂಘಟನೆಗಳು ಸಂಸ್ಥೆಯ ಖಾಸಗೀಕರಣವನ್ನು ವಿರೋಧಕ್ಕೆ ಬೆಂಬಲ ಸೂಚಿಸಿವೆ.
ತಿಪ್ಪಸಂದ್ರದ ಬೆಮೆಲ್ ಕಾಂಪ್ಲೆಕ್ಸ್ ನ ಬಳಿ ಇಂದು 7 ಗಂಟೆಯಿಂದ 8 ಗಂಟೆಯವರೆಗೂ ನಡೆದ ದ್ವಾರ ಸಭೆಯಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿದ್ದರು. ಈ ಸಭೆಗೆ ಕರುನಾಡ ಸೇವಕರು ತಂಡದ ರೂಪೇಶ್ ರಾಜಣ್ಣ ಆಗಮಿಸಿ ಸಂಸ್ಥೆಯ ಖಾಸಗೀಕರಣದ ವಿರೋಧಕ್ಕೆ ಧ್ವನಿ ಗೂಡಿಸಿದರು.
ಲಾಭದಾಯಕ ಸಂಸ್ಥೆಯಾಗಿರುವ ಬಿಇಎಂಎಲ್ ಉದ್ಯಮವನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ತೀರ್ಮಾನದ ವಿರುದ್ಧ ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗೆಗೆ, ಕಾರ್ಮಿಕರ ಹೋರಾಟದ ಅಂತಿಮ ಘಟ್ಟದ ವರೆಗೂ ಕನ್ನಡ ಸೇವಕರು ತಂಡ ಕಾರ್ಮಿಕರ ಪರ ನಿಲ್ಲುತ್ತದೆ ಎಂಬ ಭರವಸೆಯನ್ನು ರೂಪೇಶ್ ರಾಜಣ್ಣ ನೀಡಿದರು.
ಈ ಖಾಸಗೀಕರಣ ಎಂಬ ಪ್ರಕ್ರಿಯೆ ಕೇವಲ ಬೆಮೆಲ್ ಗೆ ಸೀಮಿತವಾಗಿಲ್ಲ ಬಹುತೇಕ ಎಲ್ಲ ಸಾರ್ವಜನಿಕ ಉದ್ಯಮಗಳು ಬಂಡವಾಳ ಶಾಹಿಗಳ ಕೈಗೆ ಸೇರಲಿದೆ ಎಂದರು.
ಬಿಇಎಂಎಲ್ ಕನ್ನಡಿಗರು ಬೆಳೆಸಿದ ಸಂಸ್ಥೆ ಇದು ಖಾಸಗೀಕರಣಯವರ ಪಾಲು ಆಗಲು ಬಿಡವುದಿಲ್ಲ ಎಂದ ಅವರು ಬೆಮೆಲ್ ಸಂಸ್ಥೆಯ ಉಳಿಸುವುದು ಚುನಾಯಿತ ಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳು, ರೈತ, ಕಾರ್ಮಿಕ, ದಲಿತ ಸಂಘಟನೆಗಳ ಜೊತೆಗೆ ಪ್ರತಿಯೊಬ್ಬ ಕರ್ನಾಟಕ ನಾಗರೀಕರನ ಜವಾಬ್ದಾರಿ ಎಂದು, ಕನ್ನಡಿಗರು ಈ ಬಗೆಗೆ ಧ್ವನಿ ಎತ್ತ ಬೇಕೆಂದು ಕರೆ ನೀಡಿದರು.
ಈ ಸಭೆಗೆ ಸೆಂಟ್ರಲ್ ವಿಜಿಲೆನ್ಸ್ ಅಧಿಕಾರಿಗಳು ಆಗಮಿಸಿ ಸಭೆಯ ನಿರ್ಣಯಗಳನ್ನು ವರದಿ ಮಾಡಿಕೊಂಡಿದ್ದು ವಿಶೇಷ..
ಇನ್ನು, ಪ್ರತಿನಿತ್ಯ ಬೆಳಗ್ಗೆ ದ್ವಾರ ಸಭೆಯಿದ್ದು, ಪ್ರತಿದಿನ ಖಾಸಗೀಕರಣದ ವಿರುದ್ಧ ಘೋಷಣೆಗಳನ್ನು ಸಭೆಯಲ್ಲಿ ಕೇಳಿಬರಬೇಕೆಂದು ಕಾರ್ಮಿಕ ಸಂಘದ ಅಧ್ಯಕ್ಷ್ಯ ದೊಮ್ಮಲೂರು ಶ್ರೀನಿವಾಸ ರೆಡ್ಡಿ ಕರೆ ನೀಡಿದರು.
ಸಾರ್ವಜನಿಕ ಉದ್ಯಮ ಬಿಇಎಂಎಲ್ ಸಂಸ್ಥೆಯ ಶೇಕಡ 26ರಷ್ಟು ಷೇರುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಟ್ಟ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಪ್ರತಿನಿತ್ಯ ದ್ವಾರ ಸಭೆಗೆ ಹಾಜರಾಗಿ ಪ್ರತಿಭಟನೆಯನ್ನು ಮಾಡುವುದಕ್ಕೆ ಕಾರ್ಮಿಕರು ಬೆಂಬಲ ಸೂಚಿಸಿದರು.
ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರು ಬಿಎಎಂಎಲ್ ಒಂಬತ್ತು ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.