ಕಾರ್ಮಿಕ ಅಧಿಕಾರಿಗಳಿಂದ ಬಾಲ ಕಾರ್ಮಿಕರ ರಕ್ಷಣೆ
ಮೂರು ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದ್ದು, ಸದರಿ ಬಾಲ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪುನರ್ವಸತಿಗಾಗಿ ನಗರದ ಬಾಲಕರ ಬಾಲ ಭವನಕ್ಕೆ ಸೇರಿಸಲಾಗಿದೆ


ಬೆಳಗಾವಿ : ಕಾರ್ಮಿಕ ಇಲಾಖೆಯ ಅಧಿಕಾರಿಗಳ ತಂಡ ಅನಿರೀಕ್ಷಿತವಾಗಿ ನಗರದ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮೇಲೆ ದಾಳಿ ಮಾಡಿ ಮೂವರು ಬಾಲ ಕಾರ್ಮಿಕರನ್ನು ಪತ್ತೆ, ಬಾಲ ಕಾರ್ಮಿಕರನ್ನು ಕೆಲಸದಿಂದ ಪಾರು ಮಾಡಿದ್ದಾರೆ.
ಬೆಳಗಾವಿಯ ನಗರಾದ್ಯಂತ ವಿವಿಧ ಅಂಗಡಿ, ಹೋಟೆಲ್, ವಾಣಿಜ್ಯ ಸಂಸ್ಥೆಗಳು, ಬಾರ್ ಹಾಗೂ ರೆಸ್ಟೋರೆಂಟ್ಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿದ ಅಧಿಕಾರಿಗಳು ಮಾಲೀಕರಿಗೆ ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳದಂತೆ, ತಿಳುವಳಿಕೆ ಹೇಳಿ ಭಿತ್ತಿ ಪತ್ರಗಳನ್ನು ಅಂಟಿಸಿದರು.
ಕಾರ್ಮಿಕ ಅಧಿಕಾರಿಗಳಾದ ಶ್ರೀಮತಿ ಶರನ್ನು ಬೆಂಗಾಲಿ ಮತ್ತು ಎ.ಜಿ.ಬಾಳಿಗಟ್ಟಿ ನೇತೃತ್ವದಲ್ಲಿ ನಡೆದ ತಪಾಸಣೆಯಲ್ಲಿ ಹಿರಿಯಕಾರ್ಮಿಕ ನಿರೀಕ್ಷಕರುಗಳು 1,2,3 ನೇ ವೃತ್ತ, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಪೋಲಿಸ ಇಲಾಖೆ, ಶೈಕ್ಷಣಿಕ ಇಲಾಖೆಯ ಸಿಬ್ಬಂದಿ ಬಾಲ ಕಾರ್ಮಿಕ ಯೋಜನಾ ನಿರ್ದೇಶಕರು ,ಟೈಡ್ ಲೈನ್ ಸಿಬ್ಬಂದಿ ಭಾಗಿಯಾಗಿದ್ದರು.
ಈ ವೇಳೆ, ಮೂರು ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಯಿತು. ಸದರಿ ಬಾಲ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪುನರ್ವಸತಿಗಾಗಿ ನಗರದ ಬಾಲಕರ ಬಾಲ ಭವನಕ್ಕೆ ಸೇರಿಸಲಾಗಿದೆ.