Take a fresh look at your lifestyle.

ಗ್ರಾಮಮಟ್ಟದಲ್ಲಿ ಕಾರ್ಮಿಕರಿಗೆ ದಿನಸಿ ಪದಾರ್ಥಗಳ ವಿತರಣೆ

ಗ್ರಾಮ ಮಟ್ಟದಲ್ಲಿ ಕಾರ್ಮಿಕರಿಗೆ, ಕರ್ನಾಟಕ ರಾಜ್ಯ ವಿವಿಧ ವರ್ಗಗಳ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಚಾರಿಟಬಲ್ ಸೇವಾ ಟ್ರಸ್ಟ್ ಅಕ್ಕಿ ಸೇರಿದಂತೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿತು

0
post ad

ತುಮಕೂರು : ಕರ್ನಾಟಕ ರಾಜ್ಯ ವಿವಿಧ ವರ್ಗಗಳ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಚಾರಿಟಬಲ್ ಸೇವಾ ಟ್ರಸ್ಟ್  ವತಿಯಿಂದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ  ಕೂಲಿ ಕಾರ್ಮಿಕರಿಗೆ ದಿನಸಿ ಹಾಗೂ  ಅಕ್ಕಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದ ಹೊರವಲಯದ   ದೇವಸ್ಥಾನ ಬಳಿ  ಚಿಂಪುಗಾನಹಳ್ಳಿ ಹಾಗೂ ಅಜು ಬಾಜು ಗ್ರಾಮಗಳ  ಕೂಲಿ ಕಾರ್ಮಿಕರಿಗೆ ದಿನಸಿ ಹಾಗೂ  ಅಕ್ಕಿ ವಿತರಣಾ ಕಾರ್ಯಕ್ರಮದ ಜೊತೆಗೆ ಕಾರ್ಮಿಕ ತಾಲ್ಲೂಕು ಶಾಖೆ ಯ ಸಭೆ ಏರ್ಪಡಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಟ್ರಸ್ಟ್ ನ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಬಿ.ಎಲ್ ಪರಮೇಶ್ವರ್  ಕಾರ್ಮಿಕ ರ ನೋವು ನೂರಾರು ಇವೆ, ಆದರೆ  ಸರ್ಕಾರಗಳ ಕಾನೂನುಗಳು ಮತ್ತು ಉದ್ದೇಶಗಳು ಸಮರ್ಪಕವಾಗಿ ಕೂಲಿ ಕಾರ್ಮಿಕರಿಗೆ ಸಿಗುತ್ತಿಲ್ಲ. ರಾಜ್ಯದ್ಯಾಂತ ಅಸಂಖ್ಯಾತ ಕಾರ್ಮಿಕರು ಇನ್ನೂ ಸೂರು, ನೀರು ಇಲ್ಲದೆ ಬದಕುತ್ತಿರುವುದು ಶೋಚನೀಯ ಎಂದರು. ಈ ವೇಳೆ, ತಮ್ಮ ಟ್ರಸ್ಟ್ ನ ವತಿಯಿಂದ ಹಲವು ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮ ದಲ್ಲಿ ನೂರಾರು ಬಡ ಕೂಲಿ ಕಾರ್ಮಿಕರಿಗೆ ಅಕ್ಕಿ ವಿತರಣೆ ಮಾಡಲಾಯಿತ್ತು ಟ್ರಸ್ಟ್ ನ ಉಪಾಧ್ಯಕ್ಷ ಟಿ.ರಾಜು, ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಭಾಗ್ಯಗೋಪಾಲ್ ಹಾಗೂ ಜಿಲ್ಲಾ, ತಾಲ್ಲೂಕು ಶಾಖೆಯ ಪದಾಧಿಕಾರಿಗಳು ಹಾಜರಿದ್ದರು. ಈ ವೇಳೆ ಕೂಲಿ ಕಾರ್ಮಿಕರು ತಮ್ಮ ನೋವು ದುಃಖ ದುಮ್ಮಾನಗಳನ್ನು ತೋಡಿಕೊಂಡರು.  ಅಲಪನಹಳ್ಳಿ ,ಮಾವತ್ತೂರು, ಲಿಂಗಪುರ, ವೆಂಕಟಾಪುರ, ಚಿಂಪುಗಾನಹಳ್ಳಿ, ಲಂಕ್ಕೆನಹಳ್ಳಿ ಮತ್ತು ಇತರೆ ಗ್ರಾಮಗಳ ನೂರಾರು ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ :
ರವಿ ಚಿಂಪುಗಾನಹಳ್ಳಿ,
ವಾಯ್ಸ್ ಆಫ್ ವರ್ಕರ್ಸ್ ವರದಿಗಾರ